PM Cares Fund‌ಗೆ 5 ದಿನದಲ್ಲಿ 3076 ಕೋಟಿ ಜಮೆ, ದಾನಿ ಹೆಸರು ಗೌಪ್ಯ ಯಾಕೆ? ಚಿದು ಪ್ರಶ್ನೆ

|

Updated on: Sep 02, 2020 | 5:23 PM

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಥಾಪಿಸಿದ ಪಿಎಮ್‌ ಕೇರ್ಸ್‌‌ ಫಂಡ್‌  ಆರಂಭವಾದ ಕೇವಲ ಐದೇ ದಿನಗಳಲ್ಲಿ 3,076 ಕೋಟಿ ರೂ. ‌ ಖಾತೆಗೆ ಜಮಾವಣೆಯಾಗಿದೆ ಎಂದು ಪ್ರಧಾನಿ ಕಚೇರಿಯು ಆಡಿಟ್ ರಿಪೋರ್ಟ್​ ಬಹಿರಂಗಪಡಿಸಿದೆ. ಆದ್ರೆ ಹೀಗೆ ಪಿಎಮ್‌ ಕೇರ್ಸ್‌‌ ‌ಫಂಡ್‌ಗೆ ಜಮಾ ಮಾಡಿದವರಲ್ಲಿ ಅಂದ್ರೆ ಡೋನೇಶನ್‌ ಕೊಟ್ಟವರಲ್ಲಿ ಮೊದಲ ಆರು ಜನ/ ಸಂಸ್ಥೆಗಳ ಹೆಸರನ್ನು ಗೌಪ್ಯವಾಗಿಡಲಾಗಿದೆ. ಇದನ್ನೇ ಹಿರಿಯ ಕಾಂಗ್ರೆಸ್‌ ನಾಯಕ ಪಿ ಚಿದಂಬರಂ ಪ್ರಶ್ನಿಸಿದ್ದಾರೆ. ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಟ್ವೀಟ್‌ ಮಾಡಿರುವ ಚಿದಂಬರಂ‌, […]

PM Cares Fund‌ಗೆ 5 ದಿನದಲ್ಲಿ 3076 ಕೋಟಿ ಜಮೆ, ದಾನಿ ಹೆಸರು ಗೌಪ್ಯ ಯಾಕೆ? ಚಿದು ಪ್ರಶ್ನೆ
Follow us on

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಥಾಪಿಸಿದ ಪಿಎಮ್‌ ಕೇರ್ಸ್‌‌ ಫಂಡ್‌  ಆರಂಭವಾದ ಕೇವಲ ಐದೇ ದಿನಗಳಲ್ಲಿ 3,076 ಕೋಟಿ ರೂ. ‌ ಖಾತೆಗೆ ಜಮಾವಣೆಯಾಗಿದೆ ಎಂದು ಪ್ರಧಾನಿ ಕಚೇರಿಯು ಆಡಿಟ್ ರಿಪೋರ್ಟ್​ ಬಹಿರಂಗಪಡಿಸಿದೆ.

ಆದ್ರೆ ಹೀಗೆ ಪಿಎಮ್‌ ಕೇರ್ಸ್‌‌ ‌ಫಂಡ್‌ಗೆ ಜಮಾ ಮಾಡಿದವರಲ್ಲಿ ಅಂದ್ರೆ ಡೋನೇಶನ್‌ ಕೊಟ್ಟವರಲ್ಲಿ ಮೊದಲ ಆರು ಜನ/ ಸಂಸ್ಥೆಗಳ ಹೆಸರನ್ನು ಗೌಪ್ಯವಾಗಿಡಲಾಗಿದೆ. ಇದನ್ನೇ ಹಿರಿಯ ಕಾಂಗ್ರೆಸ್‌ ನಾಯಕ ಪಿ ಚಿದಂಬರಂ ಪ್ರಶ್ನಿಸಿದ್ದಾರೆ.

ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಟ್ವೀಟ್‌ ಮಾಡಿರುವ ಚಿದಂಬರಂ‌, ಪ್ರಧಾನಿ ವ್ಯವಹಾರ ಯಾವಾಗಲೂ ಪಾರದರ್ಶಕವಾಗಿರಬೇಕು. ಆದ್ರೆ ಮೋದಿಜಿ ಸ್ಥಾಪಿಸಿರುವ ಪಿಎಮ್‌ ಕೇರ್ಸ್‌‌ ‌ ಫಂಡ್‌ಗೆ ದಾನ ಮಾಡಿದವರ ಹೆಸರನ್ನು ಗೌಪ್ಯವಿಟ್ಟಿರುವ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ಅಷ್ಟೆ ಅಲ್ಲ ಹೀಗೆ ಗೌಪ್ಯವಾಗಿ ದಾನ ಮಾಡಿದವರು ಚೀನಾ ದೇಶದ ಕಂಪನಿಗಳು. ಹೀಗಾಗಿ ಮೋದಿಜಿ ಈ ಹೆಸರುಗಳನ್ನು ಗೌಪ್ಯವಾಗಿಟ್ಟಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

Published On - 5:03 pm, Wed, 2 September 20