AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಿಂದ ಪ್ಯಾಂಗಾಂಗ್ ತ್ಸೋನ ಪರ್ವತವನ್ನ ಮರುವಶಪಡಿಸಿಕೊಂಡ ಭಾರತ

ದೆಹಲಿ: ಭಾರತ ಚೀನಾಗೆ ಅದರದ್ದೇ ಭಾಷೆಯಲ್ಲಿ ಉತ್ತರಿಸಿದೆ. ಲಡಾಖ್‌ನ ಪ್ಯಾಂಗಾಂಗ್ ತ್ಸೋನ ಫಿಂಗರ್ ಫೋರ್ ಪರ್ವತವನ್ನ ಭಾರತ ಮರುವಶಪಡಿಸಿಕೊಂಡಿದೆ. ಇದರಿಂದಾಗಿ ಬೆಟ್ಟದ ಮೇಲಿಂದ ಭಾರತೀಯ ಸೈನಿಕರು, ಚೀನಾ ಸೈನಿಕರ ಮೇಲೆ ಹದ್ದಿನ ಕಣ್ಣಿಡಬಹುದು. ಇದು ಚೀನಾದ ನೆಮ್ಮದಿಗೆ ಭಂಗ ಬಂದಿದೆ. ಕಳೆದ ಹಲವಾರು ತಿಂಗಳುಗಳಿಂದ ಭಾರತ ಮತ್ತು ಚೀನಾ ನಡುವಿನ ವಾಸ್ತವ ಗಡಿ ರೇಖೆಯಲ್ಲಿ ಉದ್ವಿಗ್ನ ವಾತಾವರಣ ಇದೆ. ಲೆಫ್ಟಿನೆಂಟ್‌ ಕಮಾಂಡರ್​ ಮಟ್ಟದಲ್ಲಿ ಐದು ಸುತ್ತಿನ ಮಾತುಕತೆ ನಡೆದ್ರೂ ಚೀನಾ ಸೇನೆ ಗಡಿಯಿಂದ ಹಿಂದೆ ಸರಿದಿರಲಿಲ್ಲ. ಚೀನಾದ […]

ಚೀನಾದಿಂದ ಪ್ಯಾಂಗಾಂಗ್ ತ್ಸೋನ ಪರ್ವತವನ್ನ ಮರುವಶಪಡಿಸಿಕೊಂಡ  ಭಾರತ
ಆಯೇಷಾ ಬಾನು
| Edited By: |

Updated on:Jan 02, 2021 | 12:00 PM

Share

ದೆಹಲಿ: ಭಾರತ ಚೀನಾಗೆ ಅದರದ್ದೇ ಭಾಷೆಯಲ್ಲಿ ಉತ್ತರಿಸಿದೆ. ಲಡಾಖ್‌ನ ಪ್ಯಾಂಗಾಂಗ್ ತ್ಸೋನ ಫಿಂಗರ್ ಫೋರ್ ಪರ್ವತವನ್ನ ಭಾರತ ಮರುವಶಪಡಿಸಿಕೊಂಡಿದೆ. ಇದರಿಂದಾಗಿ ಬೆಟ್ಟದ ಮೇಲಿಂದ ಭಾರತೀಯ ಸೈನಿಕರು, ಚೀನಾ ಸೈನಿಕರ ಮೇಲೆ ಹದ್ದಿನ ಕಣ್ಣಿಡಬಹುದು. ಇದು ಚೀನಾದ ನೆಮ್ಮದಿಗೆ ಭಂಗ ಬಂದಿದೆ.

ಕಳೆದ ಹಲವಾರು ತಿಂಗಳುಗಳಿಂದ ಭಾರತ ಮತ್ತು ಚೀನಾ ನಡುವಿನ ವಾಸ್ತವ ಗಡಿ ರೇಖೆಯಲ್ಲಿ ಉದ್ವಿಗ್ನ ವಾತಾವರಣ ಇದೆ. ಲೆಫ್ಟಿನೆಂಟ್‌ ಕಮಾಂಡರ್​ ಮಟ್ಟದಲ್ಲಿ ಐದು ಸುತ್ತಿನ ಮಾತುಕತೆ ನಡೆದ್ರೂ ಚೀನಾ ಸೇನೆ ಗಡಿಯಿಂದ ಹಿಂದೆ ಸರಿದಿರಲಿಲ್ಲ. ಚೀನಾದ ಪೀಪಲ್ ಲಿಬರೇಷನ್ ಆರ್ಮಿ ಭಾರತದ ಸುಮಾರು 1 ಸಾವಿರ ಚದರ ಕಿಲೋಮೀಟರ್ ಭೂ ಪ್ರದೇಶವನ್ನ ಅತಿಕ್ರಮಿಸಿದೆ ಅಂತಾ ಗುಪ್ತಚರ ವರದಿಗಳು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ವು. ಇದ್ರಿಂದ ಎಚ್ಚೆತ್ತ ಭಾರತೀಯ ಸೇನೆ ತನ್ನ ಕಾರ್ಯತಂತ್ರ ಬದಲಿಸಿ, ಚೀನಾಗೆ ಅದರದ್ದೇ ಭಾಷೆಯಲ್ಲಿ ಉತ್ತರಿಸಿದೆ. ಈ ಮೂಲಕ ಕಳೆದುಕೊಂಡಿದ್ದ ಭೂ ಪ್ರದೇಶಗಳನ್ನ ಮತ್ತೆ ವಶಪಡಿಸಿಕೊಂಡಿದೆ.

ಕೆಂಪು ಸೇನೆಗೆ ಭರ್ಜರಿ ಶಾಕ್ ನೀಡಿದ ಭಾರತೀಯ ಸೇನೆ! ಭಾರತೀಯ ಸೇನೆ ಪ್ಯಾಂಗಾಂಗ್ ತ್ಸೋ ಸರೋವರದ ಬಳಿಯ ಫಿಂಗರ್ ಫೋರ್ ಪರ್ವತವನ್ನ ಮತ್ತೆ ತನ್ನ ವಶಕ್ಕೆ ತೆಗೆದುಕೊಂಡಿದೆ. ಇದ್ರಿಂದ ಪರ್ವತದ ಕೆಳಗಿರೋ ಚೀನಾ ಸೈನಿಕರ ಮೇಲೆ ನಿಗಾ ಇಡಬಹುದು. ಈ ಮೊದಲು ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರದಲ್ಲಿ ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಇದರಿಂದಾಗಿ ಗಡಿ ಭಾಗದಲ್ಲಿ ಭಾರತವು ಪ್ರಾಬಲ್ಯ ಸಾಧಿಸಿದಂತಾಗಿದೆ. ಅಲ್ದೆ, ಗಡಿಯಲ್ಲಿ ಚೀನಾ ಆಳವಡಿಸಿದ್ದ ಸೆನ್ಸಾರ್ ಕ್ಯಾಮರಾಗಳನ್ನು ಭಾರತೀಯ ಸೈನಿಕರು ಕಿತ್ತೊಗೆದಿದ್ದಾರೆ. ಇದು ಚೀನಾದ ಕೆಂಪು ಸೇನೆಗೆ ಶಾಕ್ ನೀಡಿದೆ.

ಇದರ ನಡುವೆ ಭಾರತ-ಚೀನಾ ನಡುವೆ ಮೂರು ದಿನದಿಂದ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೀತಿದ್ರೂ, ಯಾವುದೇ ಪರಿಹಾರ ಸಿಕ್ಕಿಲ್ಲ. ಗಡಿ ಬಿಕ್ಕಟ್ಟು ಮುಂದುವರಿದೇ ಇತ್ತು. ಭಾರತದ ವಿಶೇಷ ಗಡಿ ಭದ್ರತಾ ಪಡೆಯನ್ನ ಗಡಿಯಲ್ಲಿ ನಿಯೋಜಿಸಲಾಗಿದೆ. ಭಾರತ ಗಡಿಗೆ ಹೆಚ್ಚಿನ ಸೈನಿಕರನ್ನ ರವಾನಿಸಿದ್ದು, ಪರ್ವತ ಪ್ರದೇಶಗಳನ್ನ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು ವಿಶೇಷ. ಈಗ ಭಾರತ ಫಿಂಗರ್ ಫೋರ್​ನಿಂದ ಫಿಂಗರ್ ಏಯ್ಟ್​​ವರೆಗಿನ ಭೂ ಪ್ರದೇಶ ತನ್ನ ವಶಕ್ಕೆ ಪಡೆಯಲು ಕಾರ್ಯಾಚರಣೆ ನಡೆಸಬೇಕಿದೆ. ಆಗ ಮಾತ್ರ ಚೀನಾಗೆ ಸರಿಯಾಗಿ ಬುದ್ಧಿ ಕಲಿಸಲು ಸಾಧ್ಯ.

Published On - 7:04 am, Thu, 3 September 20

Follow Us
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!