ಪಹಲ್ಗಾಮ್​ ದಾಳಿ: ಗಂಡನ ಕಳೆದುಕೊಂಡ ದುಃಖದಲ್ಲಿದ್ದರೆ, ಹತ್ಯೆಗೆ ಸಂಚು ರೂಪಿಸಿದ್ದೇ ಪತ್ನಿ ಎಂದವ ಅರೆಸ್ಟ್​

Pahalgam Victim: ಪಹಲ್ಗಾಮ್ ಉಗ್ರ ದಾಳಿಯಲ್ಲಿ ಮದುವೆ(Marriage)ಯಾಗಿ ಆರೇ ದಿನಕ್ಕೆ ಗಂಡನ ಕಳೆದುಕೊಂಡ ದುಃಖದಲ್ಲಿದ್ದ ಮಹಿಳೆಗೆ ಗಂಡನ ಹತ್ಯೆಗೆ ಸಂಚು ರೂಪಿಸಿದ್ದು ಆಕೆಯೇ ಎಂದು ಆಕ್ಷೇಪಾರ್ಹ, ಆಧಾರರಹಿತ ಹೇಳಿಕೆಯನ್ನು ನೀಡಿದ್ದ ವ್ಯಕ್ತಿ ಓಸಫ್​ಖಾನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಪತ್ನಿಯೇ ತನ್ನ ಪತಿಯ ಹತ್ಯೆಗೆ ಕಾರಣ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹೇಳಿಕೆಯನ್ನು ಹಂಚಿಕೊಂಡಿದ್ದಕ್ಕಾಗಿ ಮಧ್ಯಪ್ರದೇಶದ ಜಬಲ್ಪುರದ ಯುವಕನನ್ನು ಬಂಧಿಸಲಾಗಿದೆ.

ಪಹಲ್ಗಾಮ್​ ದಾಳಿ: ಗಂಡನ ಕಳೆದುಕೊಂಡ ದುಃಖದಲ್ಲಿದ್ದರೆ, ಹತ್ಯೆಗೆ ಸಂಚು ರೂಪಿಸಿದ್ದೇ ಪತ್ನಿ ಎಂದವ ಅರೆಸ್ಟ್​
ಓಸಫ್

Updated on: Apr 25, 2025 | 10:40 AM

ಜಬಲ್​ಪುರ, ಏಪ್ರಿಲ್ 25: ಪಹಲ್ಗಾಮ್ ಉಗ್ರ ದಾಳಿಯಲ್ಲಿ ಮದುವೆ(Marriage)ಯಾಗಿ ಆರೇ ದಿನಕ್ಕೆ ಗಂಡನನ್ನು ಕಳೆದುಕೊಂಡ ದುಃಖದಲ್ಲಿದ್ದ ಮಹಿಳೆಗೆ ಗಂಡನ ಹತ್ಯೆಗೆ ಸಂಚು ರೂಪಿಸಿದ್ದು ಆಕೆಯೇ ಎಂದು ಆಕ್ಷೇಪಾರ್ಹ, ಆಧಾರರಹಿತ ಹೇಳಿಕೆಯನ್ನು ನೀಡಿದ್ದ ವ್ಯಕ್ತಿ ಓಸಫ್​ಖಾನ್​ನನ್ನು ಪೊಲೀಸರು ಬಂಧಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಪತ್ನಿಯೇ ತನ್ನ ಪತಿಯ ಹತ್ಯೆಗೆ ಕಾರಣ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹೇಳಿಕೆಯನ್ನು ಹಂಚಿಕೊಂಡಿದ್ದಕ್ಕಾಗಿ ಮಧ್ಯಪ್ರದೇಶದ ಜಬಲ್ಪುರದ ಯುವಕನನ್ನು ಬಂಧಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 22 ರಂದು ನಡೆದ ಹತ್ಯಾಕಾಂಡದಲ್ಲಿ ತನ್ನ ಗಂಡನನ್ನು ಕಳೆದುಕೊಂಡ ಮಹಿಳೆ ಗಂಡನನ್ನು ಕೊಲ್ಲಲು ಶೂಟರ್ ಅನ್ನು ನೇಮಿಸಿಕೊಂಡಿದ್ದಾಳೆ ಎಂದು ಓಸಫ್ ಖಾನ್ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿದ್ದ.

ಕೆಂಪು ಬಳೆಗಳನ್ನು ಧರಿಸಿ ತನ್ನ ಗಂಡನ ನಿರ್ಜೀವ ದೇಹದ ಪಕ್ಕದಲ್ಲಿ ಕುಳಿತಿರುವ ಮಹಿಳೆಯ ಹೃದಯವಿದ್ರಾವಕ ಚಿತ್ರ ವೈರಲ್ ಆದ ಸ್ವಲ್ಪ ಸಮಯದ ನಂತರ ಅವರ ಪೋಸ್ಟ್ ಬಂದಿದ್ದು, ದಾಳಿಯ ಅತ್ಯಂತ ಕಾಡುವ ದೃಶ್ಯಗಳಲ್ಲಿ ಒಂದಾಗಿದೆ.

ಇದನ್ನೂ ಓದಿ
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ
ಪಹಲ್ಗಾಮ್ ಉಗ್ರ ದಾಳಿ, ಎಕೆ-47 ಹಿಡಿದ ಶಂಕಿತ ಉಗ್ರನ ಫೋಟೋ ಬಹಿರಂಗ
ಪ್ಯಾಂಟ್​ ಬಿಚ್ಚಿ, ಐಡಿ ಪರಿಶೀಲಿಸಿ ಹಿಂದೂಗಳನ್ನು ಗುರಿಯಾಗಿಸಿ ಉಗ್ರರ ದಾಳಿ
ಪಹಲ್ಗಾಮ್ ಉಗ್ರ ದಾಳಿಯ ಮಾಸ್ಟರ್​ಮೈಂಡ್ ಸೈಫುಲ್ಲಾ ಖಾಲಿದ್ ಯಾರು?

ಈ ಮಹಿಳೆಯನ್ನು ತನಿಖೆ ಮಾಡಬೇಕು. ಬಹುಶಃ ಅವಳು ಶೂಟರ್ ಅನ್ನು ನೇಮಿಸಿಕೊಂಡು ಅವಕಾಶ ಸಿಕ್ಕ ಕ್ಷಣದಲ್ಲೇ ತನ್ನ ಗಂಡನನ್ನು ಕೊಂದಿರಬಹುದು ಎಂದು ಆತ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾನೆ. ಇದು ವ್ಯಾಪಕ ಖಂಡನೆಗೆ ಗುರಿಯಾಯಿತು.

ಮತ್ತಷ್ಟು ಓದಿ: ಮೆಹಂದಿ ಮಾಸುವ ಮುನ್ನವೇ ನೌಕಾಪಡೆ ಅಧಿಕಾರಿ ಪತ್ನಿಯ ಕುಂಕುಮ ಅಳಿಸಿದ ಉಗ್ರರು

ದಾಳಿ ನಡೆಯುವ ಒಂದು ವಾರದ ಮೊದಲು ಆ ಮಹಿಳೆ ಮದುವೆಯಾಗಿದ್ದರು, ಮತ್ತು ಕೆಲವು ದಿನಗಳ ನಂತರ ವೀಡಿಯೊ ಹೇಳಿಕೆಯಲ್ಲಿ , ಅವರು ಎದುರಿಸಿದ ಆಘಾತವನ್ನು ವಿವರಿಸಿದ್ದರು, ನಾವು ಭೇಲ್ಪುರಿ ತಿನ್ನುತ್ತಿದ್ದೆವು ಬಂದೂಕುಧಾರಿ ನನ್ನ ಪತಿ ಬಳಿ ನೀನು ಹಿಂದೂನಾ ಮುಸ್ಲಿಂ ಎಂದು ಕೇಳಿ ಹಿಂದೂ ಹೇಳುತ್ತಿದ್ದಂತೆ ಗುಂಡು ಹಾರಿಸಿದ್ದ ಎಂದು ಕಣ್ಣೀರಿಡುತ್ತಾ ವಿವರಿಸಿದ್ದಳು.

ಖಾನ್ ಅವರ ಪೋಸ್ಟ್‌ನಿಂದ ಕೋಪಗೊಂಡ ಸ್ಥಳೀಯ ನಿವಾಸಿ ಅಭಯ್ ಶ್ರೀವಾಸ್ತವ್ ಅವರು ಪೊಲೀಸ್ ದೂರು ದಾಖಲಿಸಿದ್ದು, ಇದು ಖಾನ್ ಬಂಧನಕ್ಕೆ ಕಾರಣವಾಯಿತು. ಪಹಲ್ಗಾಮ್ ಬಳಿಯ ಬೈಸರನ್ ಹುಲ್ಲುಗಾವಲುಗಳಲ್ಲಿ ಐದರಿಂದ ಆರು ಬಂದೂಕುಧಾರಿಗಳು ನಡೆಸಿದ ಈ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು.

ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಈ ಹತ್ಯಾಕಾಂಡದ ಹೊಣೆಯನ್ನು ಹೊತ್ತುಕೊಂಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:33 am, Fri, 25 April 25