Viral : ಮದುವೆ ಮೆರವಣಿಗೆ ನಿಲ್ಲಿಸಿ, ಟ್ರಾಫಿಕ್ ಕ್ಲಿಯರ್ ಮಾಡಿ ಆ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟ ಮದುಮಗ
ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಕೆಲ ಮದುವೆಗಳು ತನ್ನ ವಿಶೇಷತೆಗಳಿಂದ ಸದ್ದು ಮಾಡುತ್ತವೆ. ಕೆಲವರು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರೆ, ಇನ್ನು ಕೆಲವರು ಸರಳವಾಗಿ ವಿವಾಹವಾಗುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ರಸ್ತೆಯಲ್ಲಿ ಸಿಂಗಾರಗೊಂಡ ಮದುಮಗನ ಕಾರು ರಸ್ತೆಯಲ್ಲಿ ನಿಂತಿದೆ. ಇತ್ತ ರಸ್ತೆಯಲ್ಲಿ ನಿಂತಿರುವ ಮದುಮಗನು ಒಂದೊಳ್ಳೆ ಕೆಲಸ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಇದಕ್ಕೆ ಸಂಬಂಧ ಪಟ್ಟ ಈ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರು ಈತನ ಕೆಲಸವನ್ನು ಹಾಡಿ ಹೊಗಳಿದ್ದಾರೆ.

ಮದುವೆ (marriage) ಎಂದರೆ ಸಂಭ್ರಮ, ಪ್ರತಿಯೊಬ್ಬರು ತಮ್ಮ ಮದುವೆಯ ಬಗ್ಗೆ ನೂರಾರು ಕನಸುಗಳನ್ನು ಕಂಡಿರುತ್ತಾರೆ. ಅದರಲ್ಲಿಯೂ ಕೆಲವರಂತೂ ತಮ್ಮ ಮದುವೆ ಸಮಾರಂಭವನ್ನು ಸ್ಪೆಷಲ್ ಆಗಿ ಆಚರಿಸಲು ಏನೇನೋ ಟ್ರೆಂಡ್ ಫಾಲೋ ಮಾಡುತ್ತಿರುತ್ತಾರೆ. ದಿಬ್ಬಣದಲ್ಲಿ ವಿಭಿನ್ನವಾಗಿ ಎಂಟ್ರಿ ಕೊಡುವ ಮೂಲಕ ಸುದ್ದಿಯಾಗುವುದೇ ಹೆಚ್ಚು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಮೆರವಣಿಗೆಯೊಂದು ಮದುವೆ ಮಂಟಪದ ಕಡೆಗೆ ಹೋಗುತ್ತಿದೆ. ಆದರೆ ಮದುಮಗನು ಅಲಂಕಾರಗೊಂಡಿರುವ ಕಾರನ್ನು ನಿಲ್ಲಿಸಿ ರಸ್ತೆಯಲ್ಲಿದ್ದ ವಾಹನಗಳನ್ನು ಹಿಂದೆ ಸರಿಯಲು ಹೇಳಿ ಆ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ghantaa ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇದರಲ್ಲಿ ರಸ್ತೆಯಲ್ಲಿ ಅಲಂಕಾರಗೊಂಡ ಮದುಮಗನ ಕಾರೊಂದು ನಿಂತಿರುವುದನ್ನು ಕಾಣಬಹುದು. ಮದುಮಗನ ಅಲಂಕಾರದಲ್ಲಿರುವ ವ್ಯಕ್ತಿಯೂ ರಸ್ತೆಯಲ್ಲಿ ನಿಂತು ಉಳಿದ ವಾಹನಗಳನ್ನು ಆ ಕಡೆ ಸರಿಯಲು ಹೇಳುತ್ತಿದ್ದಾನೆ. ಈ ವಿಡಿಯೋದ ಪ್ರಾರಂಭದಲ್ಲಿ ಈ ಮದುಮಗನ ಹೀಗೇಕೆ ಮಾಡುತ್ತಿದ್ದಾನೆ ಎಂದೆನಿಸುತ್ತದೆ. ಆದರೆ ಈ ವಿಡಿಯೋದ ಕೊನೆಗೆ ಆ್ಯಂಬುಲೆನ್ಸ್ ರಸ್ತೆಯಲ್ಲಿ ಹೋಗುತ್ತಿರುವುದನ್ನು ನೋಡಬಹುದು. ಆ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕೊಡುವ ಸಲುವಾಗಿ ಈ ಮದುಮಗನು ಉಳಿದ ವಾಹನಗಳನ್ನು ಆ ಕಡೆ ಸರಿಯಲು ಹೇಳಿದ್ದಾನೆ ಎನ್ನುವುದು ಸ್ಪಷ್ಟವಾಗುತ್ತದೆ.
ಇದನ್ನೂ ಓದಿ : Viral : ಹೋಮ್ ವರ್ಕ್ ನಿಂದ ತಪ್ಪಿಸಿಕೊಳ್ಳಲು ಈ ಪುಟಾಣಿಯೂ ಅಮ್ಮನಿಗೆ ಹೇಳಿದ ನೆಪ ನೋಡಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ :
View this post on Instagram
ಈ ವಿಡಿಯೋವೊಂದು ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರು ಈ ಮದುಮಗನು ಮಾಡಿದ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಬಳಕೆದಾರರೊಬ್ಬರು, ‘ಕೆಲಸ ಮೊದಲು, ಈ ವ್ಯಕ್ತಿಯೂ ಟ್ರಾಫಿಕ್ ಪೊಲೀಸ್ ಆಗಿದ್ದೀರಬಹುದು’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ಮದುವೆಗಿಂತ ಜೀವ ಮುಖ್ಯ ಎಂದು ಸಾರಿದ ವ್ಯಕ್ತಿ ಈತ. ಮಾನವೀಯತೆಗೆ ಮಿಡಿಯುವ ವ್ಯಕ್ತಿಗಳು ಇಂದಿಗೂ ಇದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ನಿಮ್ಮ ಮೇಲಿನ ಗೌರವ ಹೆಚ್ಚಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ