AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಧುವಿನ ಬಗ್ಗೆ ಸುಳ್ಳು ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಮಂಟಪದಿಂದಲೇ ಎದ್ದು ಹೋದ ವರ, ಪರಿಸ್ಥಿತಿ ತಿಳಿಗೊಳಿಸಿ ಮದುವೆ ಮಾಡಿಸಿದ ಪೊಲೀಸರು

ಇನ್ನೇನು ತಾಳಿಕಟ್ಟಬೇಕು ಎನ್ನುವಷ್ಟರಲ್ಲಿ ಅರ್ಧಕ್ಕೆ ನಿಂತ ಮದುವೆಗಳ ಕುರಿತಾದ ಸುದ್ದಿಗಳನ್ನು ಕೇಳಿರುತ್ತೀರಿ. ಇದೀಗ ಇಂತಹದೊಂದು ಘಟನೆಯು ನಡೆದಿದ್ದು, ವಧುವಿನ ಬಗ್ಗೆ ಸುಳ್ಳು ವದಂತಿಯನ್ನು ಹರಡಿದ್ದು ಇದನ್ನೂ ಕೇಳಿದ ವರನು ಮದುವೆ ಮಂಟಪದಿಂದಲೇ ಹೊರಟು ಹೋಗಿದ್ದಾನೆ. ಆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ, ವರನನ್ನು ಸಮಾಧಾನ ಪಡಿಸಿ ಮದುವೆ ಮಾಡಿಸಿದ್ದಾರೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ವಧುವಿನ ಬಗ್ಗೆ ಸುಳ್ಳು ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಮಂಟಪದಿಂದಲೇ ಎದ್ದು ಹೋದ ವರ, ಪರಿಸ್ಥಿತಿ ತಿಳಿಗೊಳಿಸಿ ಮದುವೆ ಮಾಡಿಸಿದ ಪೊಲೀಸರು
ವರನ ಮನವೊಲಿಸಿ ವಧುವಿನೊಂದಿಗೆ ಮದುವೆ ಮಾಡಿಸಿದ ಪೊಲೀಸರು Image Credit source: Twitter
ಸಾಯಿನಂದಾ
| Edited By: |

Updated on: Apr 23, 2025 | 11:23 AM

Share

ಬಿಹಾರ, ಏ. 23: ನೂರು ಸುಳ್ಳು ಹೇಳಿ ಒಂದು ಮದುವೆ (marriage) ಮಾಡಿ ಎಂದು ಹೇಳುವುದನ್ನು ಕೇಳಿರಬಹುದು. ಆದರೆ ಕೆಲವೊಮ್ಮೆ ಸತ್ಯ ಹೇಳಿ ಮದುವೆ ಮಾಡಿದರೂ ಅರ್ಧಕ್ಕೆ ಮದುವೆ ನಿಂತು ಹೋಗಿರುವ ಅದೆಷ್ಟೋ ಪ್ರಕರಣಗಳು ಇವೆ. ಕೆಲವೊಮ್ಮೆ ಸತ್ಯವನ್ನು ತಿಳಿಯದೆ ಮೂರನೇ ವ್ಯಕ್ತಿಯ ಮಾತನ್ನು ನಂಬಿಕೊಂಡು ಮದುವೆ ಅರ್ಧಕ್ಕೆ ನಿಂತದ್ದು ಇದೆ. ಇದೀಗ ಬಿಹಾರ (bihara) ದ ಛಪ್ರಾ (chhapra) ದಲ್ಲಿ ಈ ರೀತಿಯ ಪ್ರಕರಣವೊಂದು ನಡೆದಿದ್ದು ಮೂರನೇ ವ್ಯಕ್ತಿಯ ಮಾತು ಕೇಳಿ ಮದುವೆ ಮಂಟಪದಿಂದ ವರನು ಎದ್ದು ಹೋಗಲು ಮುಂದಾಗಿದ್ದಾನೆ. ಎಲ್ಲರೂ ವರ ಹಾಗೂ ಆತನ ಕುಟುಂಬದವರನ್ನು ತಡೆದು ನಿಲ್ಲಿಸಿದ್ದಾರೆ. ಈ ವಿಷಯ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಪರಿಸ್ಥಿತಿ ತಿಳಿಗೊಳಿಸಿ ಪೊಲೀಸರೇ ಸ್ವತಃ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ.

ಹೌದು, ಜಿಲ್ಲೆಯ ಭೇಲ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹಕ್ಮಾ ಬಿನ್ ಟೋಲಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜಲಾಲ್ಪುರ್ ಬಿಂಟೋಲಿ ಗ್ರಾಮದ ನಿವಾಸಿ ಧೀರಜ್ ಕುಮಾರ್ ಹಾಗೂ ಸುಗಂದಿ ಅಲಿಯಾಸ್ ಆರತಿಯ ಮದುವೆಯು ಅದ್ದೂರಿಯಾಗಿ ನಡೆಯುತ್ತಿತ್ತು. ಆದರೆ, ಮದುವೆಯ ಶಸ್ತ್ರವು ನಡೆಯುತ್ತಿದ್ದ ಸಂದರ್ಭದಲ್ಲಿ ಯಾರೋ ಹುಡುಗಿ ಮಾನಸಿಕ ಆರೋಗ್ಯ ಚೆನ್ನಾಗಿಲ್ಲ ಎನ್ನುವ ವದಂತಿಯನ್ನು ಹಬ್ಬಿದ್ದರು. ಈ ಸುದ್ದಿ ಮದುವೆ ಮೆರವಣಿಗೆಯಲ್ಲಿ ಹಬ್ಬುತ್ತಿದ್ದಂತೆ ಇಡೀ ಮದುವೆ ಮನೆಯ ಖುಷಿಯೇ ಹಾಳಾಗಿ ಹೋಯಿತು.

ಈ ವಿಚಾರವು ವರನ ಕಿವಿಗೆ ಬೀಳುತ್ತಿದ್ದಂತೆ ಹಿಂದೆ ಮುಂದೆ ನೋಡದೆ ತನ್ನ ಕುಟುಂಬದೊಂದಿಗೆ ಮದುವೆ ಮಂಟಪದಿಂದ ಹೊರಟಿದ್ದು, ಅಲ್ಲಿದ್ದ ಗ್ರಾಮಸ್ಥರು ಅವರನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಆ ಕೂಡಲೇ ಈ ವಿಷಯವನ್ನು ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾರೆ. ಭೆಲ್ಡಿ ಪೊಲೀಸ್ ಠಾಣೆ ಮತ್ತು ಸಾರ್ವಜನಿಕ ಪ್ರತಿನಿಧಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇದನ್ನೂ ಓದಿ
Image
ಹನ್ನೊಂದು ವರ್ಷದ ಬಾಲಕನ ಹೊಟ್ಟೆಯಲ್ಲಿತ್ತು ಚಿನ್ನದ ಗಟ್ಟಿ
Image
ಅಗ್ಗದ ಬೆಲೆಯಲ್ಲಿ ಸಿಗುವ ಮಣ್ಣಿನ ಮಡಕೆ ಏರ್ ಕೂಲರ್​ಗಳೇ ಬೆಸ್ಟ್
Image
ಹೆಣ್ಣು ಮಗುವನ್ನು ರಕ್ಷಿಸಿ ಮಾನವೀಯತೆ ಮೆರೆದ ಖ್ಯಾತ ನಟಿಯ ಸಹೋದರಿ
Image
ವರನಿಗೆ ನೀಲಿ ಬಣ್ಣದ ಡ್ರಮ್ ಉಡುಗೊರೆಯಾಗಿ ನೀಡಿದ ಗೆಳೆಯರ ಬಳಗ

ಇದನ್ನೂ ಓದಿ :ಹನ್ನೊಂದು ವರ್ಷದ ಬಾಲಕನ ಹೊಟ್ಟೆಯಲ್ಲಿತ್ತು ಚಿನ್ನದ ಗಟ್ಟಿ, ಎಕ್ಸ್ ರೇ ಕಂಡು ಶಾಕ್ ಆದ ವೈದ್ಯರು

ಈ ವೇಳೆಯಲ್ಲಿ ಪೊಲೀಸರು ವಧುವನ್ನು ವಿಚಾರಿಸಿ ಆಕೆಯ ಮಾನಸಿಕ ಸ್ಥಿತಿ ಚೆನ್ನಾಗಿದೆಯೇ ಎಂದು ತಿಳಿದುಕೊಂಡಿದ್ದಾರೆ. ಹುಡುಗಿ ಮಾನಸಿಕವಾಗಿ ಆರೋಗ್ಯವಾಗಿದ್ದಾಳೆ ಎಂದು ತಿಳಿಯುತ್ತಿದ್ದಂತೆ ಈಗಾಗಲೇ ಹರಡಿದ ವದಂತಿ ಎನ್ನುವುದು ಸ್ಪಷ್ಟವಾಗಿದೆ. ಆ ಬಳಿಕ ಈ ಸುಳ್ಳು ಸುದ್ದಿಯೆನ್ನುವುದನ್ನು ವರ ಹಾಗೂ ಆತನ ಕುಟುಂಬಸ್ಥರಿಗೆ ತಿಳಿಸಿದ್ದು, ಅರ್ಧಕ್ಕೆ ನಿಂತು ಹೋಗಿದ್ದ ಮದುವೆಗೆ ಒಪ್ಪಿಸಿದ್ದಾರೆ. ಶನಿವಾರ ಸಂಜೆ ಪೊಲೀಸರು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಈ ಮದುವೆಯೂ ನಡೆದಿದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ