AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಕರನ್ನು ಟ್ರಂಕ್​​ನಲ್ಲಿ ಬಚ್ಚಿಟ್ಟ ವಿವಾಹಿತ ಮಹಿಳೆ, ಕುಟುಂಬಸ್ಥರ ಕೈಗೆ ಸಿಕ್ಕಿ ಬಿದ್ದ ಅರೆನಗ್ನನಾಗಿದ್ದ ಗೆಳೆಯ, ಮುಂದೇನಾಯ್ತು ನೋಡಿ

ಇತ್ತೀಚೆಗಿನ ದಿನಗಳಲ್ಲಿ ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ. ಮದುವೆಯಾಗಿದ್ದರೂ ಕೂಡ ಪರಸ್ತ್ರಿ ಅಥವಾ ಪರಪುರುಷನ ಜೊತೆಗೆ ಸಂಬಂಧ ಇಟ್ಟುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದೀಗ ವಿವಾಹಿತ ಮಹಿಳೆಯನ್ನು ಭೇಟಿಯಾಗಲು ಪ್ರಿಯಕರು ಎಲ್ಲರ ಕಣ್ಣು ತಪ್ಪಿಸಿ ಆಕೆಯ ಮನೆಗೆ ಹೋಗಿದ್ದು, ಆದರೆ ನಗ್ನವಾಗಿ ಆಕೆಯ ಕುಟುಂಬದವರ ಕೈಗೆ ಸಿಕ್ಕಿ ಬಿದಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಪ್ರಿಯಕರನ್ನು ಟ್ರಂಕ್​​ನಲ್ಲಿ ಬಚ್ಚಿಟ್ಟ ವಿವಾಹಿತ ಮಹಿಳೆ, ಕುಟುಂಬಸ್ಥರ ಕೈಗೆ ಸಿಕ್ಕಿ ಬಿದ್ದ ಅರೆನಗ್ನನಾಗಿದ್ದ ಗೆಳೆಯ, ಮುಂದೇನಾಯ್ತು ನೋಡಿ
Viral VideoImage Credit source: Twitter
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 23, 2025 | 1:11 PM

Share

ಉತ್ತರ ಪ್ರದೇಶ, ಏ.23: ಈ ಕಾಲದಲ್ಲಿ ಯಾರನ್ನು ನಂಬಬೇಕು ಬಿಡಬೇಕು ಎಂದು ತಿಳಿಯುವುದಿಲ್ಲ. ಮದುವೆಯಾಗಿ ತನ್ನ ಸಂಗಾತಿಯೊಂದಿಗೆ ಸುಖವಾಗಿ ಸಂಸಾರ ಮಾಡಿಕೊಂಡು ಹೋಗುವ ಬದಲು ಪರಸ್ತ್ರೀ ಅಥವಾ ಪರ ಪುರುಷರ ಪ್ರೀತಿಯ ಬಲೆಗೆ ಬೀಳುವುದೇ ಹೆಚ್ಚು. ಗಂಡ ಮಕ್ಕಳಿದ್ದರೂ ಪರ ಪುರುಷನ ಜೊತೆಗೆ ಓಡಿ ಹೋದಂತಹ, ಗಂಡನಿಗೆ ಗೊತ್ತಿಲ್ಲದೇ ಬೇರೊಬ್ಬನ ಜೊತೆಗೆ ಅಕ್ರಮ ಸಂಬಂಧ (illicit relationship) ಬೆಳೆಸಿಕೊಂಡು ಸಿಕ್ಕಿ ಬಿದ್ದ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಇದೀಗ ಇಂತಹದೊಂದು ಘಟನೆಯೂ ನಡೆದಿದ್ದು, ವಿವಾಹಿತ ಮಹಿಳೆಗೆ ಪರಪುರುಷನ ಜೊತೆಗೆ ಸಂಬಂಧವಿತ್ತು. ಹೀಗಾಗಿ ಈ ವಿವಾಹಿತ ಮಹಿಳೆಯನ್ನು ಭೇಟಿಯಾಗಲು ಪ್ರಿಯಕರ ಆಕೆಯ ಮನೆಗೆ ಹೋಗಿದ್ದಾನೆ. ಈ ವೇಳೆಯಲ್ಲಿ ಟ್ರಂಕ್ ನಲ್ಲಿ ಅಡಗಿ ಕುಳಿತಿದ್ದ ಈತನು ಆಕೆಯ ಕುಟುಂಬದವರ ಕೈಗೆ ಸಿಕ್ಕಿ ಬಿದ್ದಿದ್ದು ಕೋಲಿನಿಂದ ಹೊಡೆದಿದ್ದಾರೆ. ಈ ಘಟನೆಯೂ ಉತ್ತರ ಪ್ರದೇಶ (uttar pradesh) ದ ಆಗ್ರಾ (agra) ದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಹೌದು, ವಿವಾಹಿತ ಮಹಿಳೆಯನ್ನು ಭೇಟಿಯಾಗಲು ಮನೆಯ ಗೋಡೆಯ ಹಾರಿ ಪ್ರಿಯಕರನು ಆಕೆಯ ಕೋಣೆಗೆ ಹೋಗಿದ್ದಾನೆ. ಆದರೆ ಆಕೆಯ ಕೋಣೆಯಲ್ಲಿ ಯಾರೋ ಮಾತಾಡುವ ಶಬ್ದ ಬರುತ್ತಿದ್ದಂತೆ ಮನೆಯವರಿಗೆ ಅನುಮಾನ ಬಂದಿದೆ. ಈ ವೇಳೆಯ ಆಕೆಯೂ ಇದ್ದ ಕೋಣೆ ಪ್ರವೇಶಿಸಿದ ಅತ್ತೆ ಮಾವ ಕೋಣೆಯನ್ನು ಪರಿಶೀಲಿಸಿದ್ದಾರೆ. ಮೊದಲಿಗೆ ಕೋಣೆಯಲ್ಲಿ ಯಾರೂ ಕಾಣಿಸದೇ ಇದ್ದರೂ ಟ್ರಂಕ್ ತೆರೆದಾಗ ಮಹಿಳೆಯ ಪ್ರಿಯಕರನು ಅರೆನಗ್ನ ಸ್ಥಿತಿಯಲ್ಲಿ ಅಡಗಿಕೊಂಡಿರುವುದು ಕಂಡುಬಂದಿದೆ. ಕೋಪಗೊಂಡ ಕುಟುಂಬಸ್ಥರು ಆತನಿಗೆ ಮನಬಂದಂತೆ ಕೋಲಿನಿಂದ ಥಳಿಸಿದ್ದು, ಕೊನೆಗೆ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ
Image
ಮದುವೆ ಮಂಟಪದಿಂದ ಅರ್ಧಕ್ಕೆ ಎದ್ದು ಹೋದ ಮದುಮಗ
Image
ಹನ್ನೊಂದು ವರ್ಷದ ಬಾಲಕನ ಹೊಟ್ಟೆಯಲ್ಲಿತ್ತು ಚಿನ್ನದ ಗಟ್ಟಿ
Image
ಅಗ್ಗದ ಬೆಲೆಯಲ್ಲಿ ಸಿಗುವ ಮಣ್ಣಿನ ಮಡಕೆ ಏರ್ ಕೂಲರ್​ಗಳೇ ಬೆಸ್ಟ್
Image
ಹೆಣ್ಣು ಮಗುವನ್ನು ರಕ್ಷಿಸಿ ಮಾನವೀಯತೆ ಮೆರೆದ ಖ್ಯಾತ ನಟಿಯ ಸಹೋದರಿ

@pal pravesh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಟ್ರಂಕ್ ನಲ್ಲಿ ಅರೆನಗ್ನನಾಗಿ ವ್ಯಕ್ತಿಯೊಬ್ಬ ಕುಳಿತುಕೊಂಡಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಕುಟುಂಬ ಸದಸ್ಯರು ಆತನಿಗೆ ಮನಸ್ಸೋ ಇಚ್ಛೆ ಥಳಿಸುತ್ತಿದ್ದಂತೆ ಆತನು ತನ್ನನು ಬಿಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿರುವುದನ್ನು ಕಾಣಬಹುದು. ಗದ್ದಲ ಕೇಳುತ್ತಿದ್ದಂತೆ ಸ್ಥಳೀಯರು ಅಲ್ಲಿಗೆ ಧಾವಿಸಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ವೈರಲ್ ಆಗಿರುವ ವಿಡಿಯೋ ಇದೀಗ ಒಂದು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡುಕೊಂಡಿದ್ದು ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಈಗ ನಾನು ತಾಜಮಹಲ್ ನೋಡಲು ಹೋಗುತ್ತೇನೆ’ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇನ್ನೊಬ್ಬರು, ‘ವಿವಾಹಿತ ಮಹಿಳೆಯ ಜೊತೆಗೆ ಈ ರೀತಿ ಸಂಬಂಧ ಯಾಕೆ ಬೇಕಿತ್ತು, ಆತನಿಗೆ ಹೀಗೆ ಆಗಬೇಕಿತ್ತು, ಇನ್ನು ಯಾವತ್ತೂ ಈ ರೀತಿ ಕೆಲಸಕ್ಕೆ ಕೈ ಹಾಕಲ್ಲ’ ಎಂದಿದ್ದಾರೆ. ಮತ್ತೊಬ್ಬರು, ‘ಈಗೀಗ ಗಂಡ ಹೆಂಡತಿ ಸಂಬಂಧಕ್ಕೆ ಅರ್ಥವೇ ಇಲ್ಲ, ಸಂಬಂಧಕ್ಕೆ ಎಷ್ಟು ಬೆಲೆ ಕೊಡುತ್ತೇವೆ ಎಂದು ಇದರಿಂದ ತಿಳಿಯುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ : ವಧುವಿನ ಬಗ್ಗೆ ಸುಳ್ಳು ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಮಂಟಪದಿಂದಲೇ ಎದ್ದು ಹೋದ ವರ, ಪರಿಸ್ಥಿತಿ ತಿಳಿಗೊಳಿಸಿ ಮದುವೆ ಮಾಡಿಸಿದ ಪೊಲೀಸರು

ಮಹಿಳೆಯೂ ತನ್ನ ಮನೆಯಲ್ಲಿ ಕುಟುಂಬ ಸದಸ್ಯರ ಜೊತೆ ನಡೆದುಕೊಳ್ಳುತ್ತಿದ್ದ ರೀತಿಯೂ ಅವರಿಗೆ ಅನುಮಾನ ಹುಟ್ಟಿಸಿತ್ತು. ಹಾಗಾಗಿ ಆಕೆಯ ಪತಿ ಮತ್ತು ಕುಟುಂಬ ಸದಸ್ಯರು ಅವರ ಕೋಣೆಯನ್ನು ಪ್ರವೇಶಿಸಿದಾಗ, ಆಕೆ ಪ್ರಿಯತಮನನ್ನು ಟ್ರಂಕ್‌ನಲ್ಲಿ ಅಡಗಿಸಿಟ್ಟಳು. ನಂತರ ಅವರಿಗೆ ಟ್ರಂಕ್‌ನಲ್ಲಿ ಯಾರೋ ಅಡಗಿ ಕುಳಿತಿದ್ದಾರೆಂದು ಅನುಮಾನ ಮೂಡಿ ಟ್ರಂಕ್​​ ತೆರೆದಾಗ ಒಬ್ಬ ವ್ಯಕ್ತಿ ಬಟ್ಟೆಯಿಲ್ಲದೆ ಬೆತ್ತಲೆಯಾಗಿ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೋಪಗೊಂಡ ಕುಟುಂಬಸ್ಥರು ಅವನನ್ನು ಸರಿಯಾಗಿ ಕೋಲಿನಿಂದ ಹೊಡೆದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ