AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಗೆ ವಿದ್ಯುತ್ ಆಧಾರಿತ ಎಸಿ ಬೇಕಿಲ್ಲ, ಅಗ್ಗದ ಬೆಲೆಯಲ್ಲಿ ಸಿಗುವ ಮಣ್ಣಿನ ಮಡಕೆ ಏರ್ ಕೂಲರ್​​​​​ಗಳೇ ಬೆಸ್ಟ್

ಬೇಸಿಗೆಯಲ್ಲಿ ಬಿಸಿಲಿನ ಝಳ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚಿನವರ ಮನೆಯಲ್ಲಿ ಏರ್ ಕೂಲರ್ ಹಾಗೂ ಫ್ಯಾನ್ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಆನ್ ಇರುತ್ತದೆ. ಆದರೆ ಇದೀಗ ಮಡಕೆಯಿಂದ ತಯಾರಿಸಿದ ಪರಿಸರ ಸ್ನೇಹಿ ಏರ್ ಕೂಲರ್ ಗೆ ಬಾರಿ ಬೇಡಿಕೆಯಿದೆ. ಈಗಾಗಲೇ ಅನೇಕರು ಈ ಮಡಕೆ ಏರ್ ಕೂಲರ್ ಬಳಕೆ ಮಾಡುತ್ತಿದ್ದು,ಹಾಗಾದ್ರೆ ಏನಿದು ಮಡಕೆ ಏರ್ ಕೂಲರ್? ಇದರ ವಿಶೇಷತೆ ಕುರಿತಾದ ಮಾಹಿತಿ ಇಲ್ಲಿದೆ.

ಬೇಸಿಗೆಗೆ ವಿದ್ಯುತ್ ಆಧಾರಿತ ಎಸಿ ಬೇಕಿಲ್ಲ, ಅಗ್ಗದ ಬೆಲೆಯಲ್ಲಿ ಸಿಗುವ ಮಣ್ಣಿನ ಮಡಕೆ ಏರ್ ಕೂಲರ್​​​​​ಗಳೇ ಬೆಸ್ಟ್
ವೈರಲ್​​ ಫೋಟೋ
ಸಾಯಿನಂದಾ
| Edited By: |

Updated on: Apr 22, 2025 | 1:16 PM

Share

ಬೇಸಿಗೆಗಾಲ (summer season) ಬಂತೆಂದರೆ ಸಾಕು, ಈ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ಸಾಂಪ್ರದಾಯಿಕ ವಿಧಾನ (traditional method) ಗಳ ಮೊರೆ ಹೋಗುವುದನ್ನು ನೋಡಿರಬಹುದು. ಕೆಲವರು ಮಣ್ಣಿನ ಮಡಕೆ (mud pot) ಯಲ್ಲಿ ತುಂಬಿಸಿಟ್ಟ ನೀರನ್ನು ಹೆಚ್ಚು ಬಳಸುತ್ತಾರೆ. ಆದರೆ ನಿಮಗೇನಾದ್ರೂ ಮಣ್ಣಿನ ಮಡಕೆಯ ಏರ್ ಕೂಲರ್ (mud pot air cooler ) ಬಗ್ಗೆ ತಿಳಿದಿದೆಯೇ. ಇದು ಎಸಿ ಬದಲಾಗಿ ಬಳಸಬಹುದಾದ ಸಾಂಪ್ರದಾಯಿಕ ಹಾಗೂ ಪರಿಸರ ಸ್ನೇಹಿ ಆಯ್ಕೆ ಈ ಮಣ್ಣಿನ ಮಡಕೆ ಏರ್ ಕೂಲರ್ ಆಗಿದೆ.

ಅಗ್ಗದ ಬೆಲೆಗೆ ಲಭ್ಯವಿರುವ ಮಣ್ಣಿನ ಮಡಕೆ ಏರ್ ಕೂಲರ್ ಗೆ ವಿದ್ಯುತ್ ಬೇಕಾಗಿಲ್ಲ. ಮಧ್ಯಮ ವರ್ಗದ ಜನರಿಗೂ ಇದು ಬೆಸ್ಟ್ ಆಯ್ಕೆಯಾಗಿದ್ದು, ಈಗಾಗಲೇ ಈ ಏರ್ ಕೂಲರ್ ಗೆ ಬಾರಿ ಬೇಡಿಕೆಯಿದೆ. ಆದರೆ ಹೆಚ್ಚಿನವರು ಏರ್ ಕೂಲರ್ ಗಳನ್ನೆ ಬಳಸುತ್ತಾರೆ. ಆರ್ಥಿಕವಾಗಿ ಸಶಕ್ತರಲ್ಲದವರು ಮಣ್ಣಿನ ಮಡಕೆ ಏರ್ ಕೂಲರ್ ಖರೀದಿಸಿ ಬೇಸಿಗೆಯಲ್ಲಿ ಬಿಸಿಲಿನ ಶಾಖದಲ್ಲಿ ಮುಕ್ತಿ ಪಡೆಯಬಹುದು.

ಹೌದು, ಹೆಸರೇ ಹೇಳುವಂತೆ ಮಣ್ಣಿನ ಮಡಕೆಯ ಏರ್ ಕೂಲರ್ ಜೇಡಿ ಮಣ್ಣಿನಿಂದ ತಯಾರಿಸಲಾಗಿದ್ದು, ವಿದ್ಯುತ್ ಬಳಸದೇ ನೈಸರ್ಗಿಕ ಹಾಗೂ ತಂಪಾದ ಗಾಳಿ ನೀಡುತ್ತದೆ. ಈ ಪರಿಸರ ಸ್ನೇಹಿ ಕೂಲರ್‌ಗಳು ವಿಭಿನ್ನ ಗಾತ್ರದ ಎರಡು ಮಣ್ಣಿನ ಮಡಕೆಗಳನ್ನು ಹೊಂದಿದ್ದು, ದೊಡ್ಡ ಮಡಕೆಯೊಳಗೆ ಚಿಕ್ಕ ಮಡಕೆಯನ್ನು ಇರಿಸಲಾಗುತ್ತದೆ.

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
Image
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
Image
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಇದನ್ನೂ ಓದಿ : ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು

ಅವುಗಳ ನಡುವಿನ ಜಾಗದಲ್ಲಿ ಒದ್ದೆಯಾದ ಮರಳಿನಿಂದ ತುಂಬಿಸಲಾಗುತ್ತದೆ. ಅದರ ಮೇಲ್ಭಾಗದಲ್ಲಿ ಒದ್ದೆಯಾದ ಬಟ್ಟೆಯಿರುತ್ತದೆ. ಈ ಒದ್ದೆಯಾದ ಮರಳು ಮತ್ತು ಹೊರಗಿನ ಮಡಕೆಯಲ್ಲಿರುವ ನೀರು ಆವಿಯಾದಾಗ, ಬೀಸುವ ಗಾಳಿಯು ಕೂಡ ತಣ್ಣಗೆ ಇರುತ್ತದೆ. ಅತ್ಯುತ್ತಮ ವಸ್ತುಗಳಿಂದ ಮಾಡಲ್ಪಟ್ಟ ಈ ಮಣ್ಣಿನ ಮಡಕೆ ಏರ್ ಕೂಲರ್ ಗಳ ನಿರ್ವಹಣೆಯು ಸುಲಭದಾಯಕವಾಗಿದ್ದು ನೈಸರ್ಗಿಕವಾದ ತಣ್ಣನೆಯ ಗಾಳಿಯನ್ನು ಪಡೆಯಬಹುದು.

ಆರೋಗ್ಯಕ್ಕೆ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಎಲ್ಲಾ ವರ್ಗದ ಜನರ ಕೈಗೆಟುಕುವ ದರಕ್ಕೆ ಈ ಪರಿಸರ ಸ್ನೇಹಿ ಏರ್ ಕೂಲರ್ ಲಭ್ಯವಿದೆ. ಅದಲ್ಲದೇ ಸಾಂಪ್ರದಾಯಿಕ ಕುಂಬಾರಿಕೆ ಕೌಶಲ್ಯಗಳ ಬಳಕೆಯನ್ನು ಪ್ರೋತ್ಸಾಹಿಸಿ, ಸ್ಥಳೀಯ ಕುಶಲಕರ್ಮಿಗಳನ್ನು ಬೆಂಬಲಿಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡಿದಂತೆ ಆಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇನ್ನಷ್ಟು ವೈರಲ್ ಸುದ್ದಿ ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ