Viral : ಕನ್ನಡ ಮಾತಾಡೋ ಹಾಗಿದ್ರೆ ಮಾತ್ರ ಅಂಗಡಿಗೆ ಬಾ ಪರಭಾಷಿಕನಿಗೆ ಖಡಕ್ ವಾರ್ನಿಂಗ್ ಕೊಟ್ಟ ಮಹಿಳೆ
ಈಗಿನ ಕಾಲದಲ್ಲಿ ಇಂಗ್ಲೀಷ್ ನಲ್ಲಿ ಮಾತಾಡಿದರೆ ಗೌರವ ಹೆಚ್ಚು ಎನ್ನುವ ಭಾವನೆ ಅನೇಕರಲ್ಲಿದೆ. ಹೀಗಾಗಿ ಕನ್ನಡ ಮಾತನಾಡಲು ಗೊತ್ತಿದ್ದರೂ ಕೂಡ ಇಂಗ್ಲೀಷ್ ನಲ್ಲಿ ವ್ಯವಹರಿಸುವವರೇ ಹೆಚ್ಚು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸಣ್ಣ ಟೀ ಸ್ಟಾಲ್ ನಡೆಸುತ್ತಿರುವ ಮಹಿಳೆಯೊಬ್ಬರು ವ್ಯಕ್ತಿಯೊಬ್ಬನಿಗೆ ಕನ್ನಡ ಮಾತನಾಡು ಎಂದು ಖಡಕ್ ಆಗಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಮಹಿಳೆಯ ಕನ್ನಡ ಉಳಿಸಬೇಕು ಬೆಳೆಸಬೇಕು ಎನ್ನುವ ಭಾವನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾವುಗಳು ಇಂಗ್ಲೀಷ್ (english) ಭಾಷೆಯಲ್ಲಿಯೇ ಮಾತನಾಡುವ ಮೂಲಕ ನಮ್ಮ ಭಾಷೆಯನ್ನೇ ಕಡೆಗಣಿಸುತ್ತಿದ್ದೇವೆ. ಹೀಗಾಗಿ ಕರ್ನಾಟಕ (karnataka) ದಲ್ಲಿ ಕನ್ನಡ ಮಾತನಾಡಿ ಎನ್ನುವ ಆಕ್ರೋಶಭರಿತ ಮಾತುಗಳು ಕೇಳಬರುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸಣ್ಣ ಟೀ ಸ್ಟಾಲ್ ನಡೆಸುತ್ತಿರುವ ಮಹಿಳೆಯೊಬ್ಬರು ವ್ಯಕ್ತಿಯೊಬ್ಬನಿಗೆ ಕನ್ನಡದಲ್ಲಿ ಮಾತನಾಡಿದ್ರೆ ಮಾತ್ರ ನನ್ನ ಅಂಗಡಿಗೆ ಬಾ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕನ್ನಡ ಮನಸುಗಳು ಕರ್ನಾಟಕ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಸಣ್ಣ ಟೀ ಸ್ಟಾಲ್ ನಡೆಸುತ್ತಿರುವುದನ್ನು ನೋಡಬಹುದು. ಈ ಸ್ಟಾಲ್ ಗೆ ವ್ಯಕ್ತಿಯೊಬ್ಬನು ಬಂದಿದ್ದಾನೆ. ಪರಭಾಷಾ ವ್ಯಕ್ತಿಯೂ ಕನ್ನಡ ಮಾತನಾಡದೇ ತನ್ನದೇ ಭಾಷೆಯಲ್ಲೇ ಏನನ್ನೋ ಕೇಳಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ, ʼಏಯ್.. ಕನ್ನಡದಲ್ಲಿ ಕೇಳು. ಕನ್ನಡ ಮಾತಾಡೋ ಹಾಗಿದ್ರೆ ಅಂಗಡಿ ಹತ್ರ ಬಾ.. ಇಲ್ಲ ಬರಬೇಡʼ ಎಂದು ಖಡಕ್ ಆಗಿ ಹೇಳಿರುವುದನ್ನು ನೋಡಬಹುದು. ಅಷ್ಟೇ ಅಲ್ಲದೇ ನಾಳೆಯಿಂದ ಕನ್ನಡ ಮಾತನಾಡಿದ್ರೆ ಮಾತ್ರ ಐಟಂ ಇಲ್ಲದಿದ್ರೆ ಇಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದಾಳೆ. ಈ ವಿಡಿಯೋವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ವ್ಯಕ್ತಿಯ ಜೊತೆಗೂ ಮಾತನಾಡಿದ್ದು, ಎಲ್ಲರಿಗೂ ನಾನು ನಿನ್ನೆಯಿಂದ ಅದನ್ನೇ ಹೇಳ್ತಾ ಇರೋದು ಸರ್, ಕನ್ನಡ ಮಾತಾನಾಡಡಿದ್ರೆ ಐಟಂ ಕೊಡುವುದೇ ಇಲ್ಲ ಎಂದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
❤️🙏 pic.twitter.com/04HxYDgljo
— ಕನ್ನಡ ಮನಸುಗಳು ಕರ್ನಾಟಕ (@kannadamanasuga) April 24, 2025
ಈ ವಿಡಿಯೋವೊಂದು ಹದಿನೈದು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು ನೆಟ್ಟಿಗರು ಕನ್ನಡ ಉಳಿಯಬೇಕು ಎನ್ನುವ ಈ ಮಹಿಳೆಯ ಕಾಳಜಿಗೆ ಮೆಚ್ಚಿಕೊಂಡಿದ್ದಾರೆ. ಈ ವಿಡಿಯೋಗೆ ಬಳಕೆದಾರರೊಬ್ಬರು, ‘ಕರ್ನಾಟಕಕ್ಕೆ ಜೈ ಅಕ್ಕಂಗೆ ಜೈ’ ಎಂದಿದ್ದಾರೆ. ಮತ್ತೊಬ್ಬರು, ‘ಕನ್ನಡ ಉಳಿಸಬೇಕು ಬೆಳೆಸಬೇಕು ಎನ್ನುವ ಭಾವನೆಯಿರುವ ವ್ಯಕ್ತಿಗಳಿದ್ದರೆ ಮಾತ್ರ ಕರುನಾಡಿನಲ್ಲಿ ಕನ್ನಡ ಭಾಷೆ ಹೆಚ್ಚೆಚ್ಚು ಬಳಕೆಯಾಗಲು ಸಾಧ್ಯ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಕನ್ನಡ ಉಳಿದಿರುವುದು ಮತ್ತು ಬೆಳೆಯುತ್ತಿರುವುದು ಕನ್ನಡ ಮಂದಿಯಿಂದಲೇ ಹೊರತು ಯಾವ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲ್ಲ, ಯಾವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲ್ಲ, ಯಾವ ಕನ್ನಡ ಸಾಹಿತ್ಯ ಪರಿಷತ್ತಿನಿಂದಲ್ಲ!’ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








