ಚೀನಾದ ಈ ರೆಸ್ಟೋರೆಂಟ್ ನಲ್ಲಿ ಆನೆ ಲದ್ದಿಯಿಂದ ತಯಾರಾಗುತ್ತೆ ಎಲಿಫೆಂಟ್ ಡಂಗ್ ಡೆಸರ್ಟ್, ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ
ವಿದೇಶಿಗರ ಆಹಾರ ಪದ್ಧತಿಯಂತೂ ವಿಚಿತ್ರ ಹಾಗೂ ವಿಭಿನ್ನವಾಗಿಯೇ ಇರುತ್ತದೆ. ಅದರಲ್ಲಿಯೂ ಈ ಚೀನಾದವರು ಕ್ರಿಮಿ ಕೀಟ, ಕಪ್ಪೆ ಜಿರಳೆಯನ್ನು ಬಾಯಿ ಚಪ್ಪರಿಸಿಕೊಂಡು ಸವಿಯುವ ವಿಡಿಯೋವನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ಚೀನಾದ ರೆಸ್ಟೋರೆಂಟ್ ವೊಂದರಲ್ಲಿ ಆನೆ ಲದ್ದಿಯಿಂದ ಸ್ವೀಟ್ ತಯಾರಿಸಲಾಗುತ್ತದೆಯಂತೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಚೀನಾ, ಏ 24: ಈ ಜಗತ್ತಿನಲ್ಲಿ ಕೆಲವು ವಿಚಿತ್ರ ಜನರಿದ್ದಾರೆ. ಅವರ ಜೀವನಶೈಲಿ (lifestyle) ಹಾಗೂ ಸೇವಿಸುವ ಆಹಾರವು ತುಂಬಾನೇ ವಿಚಿತ್ರವಾಗಿರುತ್ತದೆ. ಅದರಲ್ಲಿಯೂ ಈ ಜಗತ್ತಿನಲ್ಲಿರುವ ಕೆಲವರ ಆಹಾರ ಪದ್ಧತಿ ನೋಡಿದಾಗ ಹೀಗೂ ಉಂಟಾ ಎಂದೆನಿಸುತ್ತದೆ. ಕೆಲವರ ಆಹಾರವೇ ಹುಳ ಹುಪ್ಪಟೆ, ಚೇಳು, ಹಾವುಗಳನ್ನು ಆಗಿರುತ್ತದೆ. ನಮಗೆಲ್ಲರಿಗೂ ಈ ರೀತಿಯ ಆಹಾರ ಕ್ರಮವು ಅಸಹ್ಯವೆನಿಸಿದರೂ ಅವರು ಬದುಕುವ ರೀತಿಯೇ ಹಾಗೆ ಇರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಚೀನಾ ವಿಭಿನ್ನವಾದ ಸ್ವೀಟ್ ರೆಸಿಪಿಯನ್ನು ನೋಡಬಹುದು. ಹೌದು, ಚೀನಾದ ಶಾಂಘೈ ನ ರೆಸ್ಟೋರೆಂಟ್ ನಲ್ಲಿ (shanghai restaurant in china) ಆನೆಯ ಲದ್ದಿ (elephant dung) ಯಿಂದ ಸ್ವೀಟ್ ಮಾಡಲಾಗುತ್ತದೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ಶಾಕ್ ಆಗಿದ್ದಾರೆ.
Share Chinese Douyin ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಹೌದು, ವಿಡಿಯೋದೊಂದಿಗೆ ಶಾಂಘೈನಲ್ಲಿರುವ ರೆಸ್ಟೋರೆಂಟ್ ವೊಂದರಲ್ಲಿ ಆನೆಯ ಸಗಣಿಯಿಂದ ಮಾಡಿದ ಭಕ್ಷ್ಯಗಳಿಗೆ ಪ್ರತಿ ವ್ಯಕ್ತಿಗೆ ನಾಲ್ಕು ಸಾವಿರ ಯುವಾನ್ ಶುಲ್ಕ ವಿಧಿಸುತ್ತಿರುವುದು ಅಧಿಕೃತ ತನಿಖೆಗೆ ಒಳಪಟ್ಟಿದೆ ಎಂದು ಚೀನಾದ ಮಾಧ್ಯಮ ವರದಿ ಮಾಡಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
April 11 – Chinese media reported that in Shanghai, a restaurant charging 4,000 yuan per person for dishes made with elephant dung has come under official investigation. pic.twitter.com/WzQ6nIhaJF
— Share Chinese Douyin(TikTok) videos (@cz8921469_z) April 13, 2025
ಫುಡ್ ಬ್ಲಾಗರ್ ಒಬ್ಬರು ಈ ರೆಸ್ಟೋರೆಂಟ್ ನಲ್ಲಿ ಆಹಾರ ಸವಿದ ಬಳಿಕ ಈ ಸ್ಪೆಷಲ್ ಸ್ವೀಟ್ ರೆಸಿಪಿ ಬಗ್ಗೆ ತಿಳಿಸಿದ್ದು, ಆನೆ ಲದ್ದಿಯಿಂದ ತಯಾರಿಸಲಾಗುವ ಈ ಸ್ವೀಟ್ ರೆಸಿಪಿಗೆ ಎಲಿಫೆಂಟ್ ಡಂಗ್ ಡೆಸರ್ಟ್ ಎಂದು ಹೇಳಿದ್ದಾರೆ. ನಮಗೆಲ್ಲರಿಗೂ ಆನೆ ಲದ್ದಿ ಹೇಳಿದರೆ ವಾಕರಿಕೆ ಬರುತ್ತದೆ. ಆದರೆ ಈ ಆನೆಯ ಲದ್ದಿಯನ್ನು ಬಿಸಿಲಿನಲ್ಲಿ ಒಣಗಿಸಿ, ಅದಕ್ಕೆ ಕ್ರಿಮಿನಾಶಕ ಸಿಂಪಡಿಸುತ್ತಾರೆ. ಆ ಬಳಿಕ ಗಿಡಮೂಲಿಕೆಗಳು ಮತ್ತು ಜೇನುತುಪ್ಪದ ಬೆರೆಸಿ ಸ್ವೀಟ್ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಅದಲ್ಲದೇ ಆನೆ ಲದ್ದಿಯಿಂದ ತಯಾರಿಸಲಾಗುವ ಈ ಸಿಹಿ ತಿಂಡಿಯ ಬೆಲೆ 45,400 ರೂ ಅಂತೆ.
ಇದನ್ನೂ ಓದಿ :ಮದುವೆ ಮೆರವಣಿಗೆ ನಿಲ್ಲಿಸಿ, ಟ್ರಾಫಿಕ್ ಕ್ಲಿಯರ್ ಮಾಡಿ ಆ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟ ಮದುಮಗ
ಈ ವಿಡಿಯೋವನ್ನು ಏಪ್ರಿಲ್ 11 ರಂದು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋವೊಂದು ವೈರಲ್ ಆಗುತ್ತಿದ್ದು ಈ ಸ್ವೀಟ್ ರೆಸಿಪಿ ಬಗ್ಗೆ ತಿಳಿದು ನಾನಾ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ಬಳಕೆದಾರರೊಬ್ಬರು, ‘ಸ್ವಲ್ಪ ದಿನ ಕಳೆದರೆ ಮನುಷ್ಯರನ್ನು ತಿನ್ನುವ ಕಾಲ ಬಂದರೂ ಅಚ್ಚರಿ ಪಡಬೇಕಿಲ್ಲ’ ಎಂದಿದ್ದಾರೆ. ಇನ್ನೊಬ್ಬರು, ‘ಈ ಜಗತ್ತಿನಲ್ಲಿ ಎಂತೆಂತಹ ವಿಚಿತ್ರ ಜನರು ಇರ್ತಾರೆ ಎಂದು ಇದನ್ನೂ ನೋಡಿಯೇ ತಿಳಿಯಬೇಕು’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂತಹ ಸ್ವೀಟ್ ರೆಸಿಪಿ ಕೊಟ್ಟರೆ ನಾನು ಜನ್ಮದಲ್ಲಿ ತಿನ್ನುವುದಿಲ್ಲ ಎಂದಿದ್ದಾರೆ. ಇನ್ನೊರ್ವ ಬಳಕೆದಾರರು, ‘ದುಡ್ಡು ಕೊಟ್ಟು ಲದ್ದಿ ತಿನ್ನುವ ಕಾಲ ಕೂಡ ಬಂತು’ ಎಂದು ಟೀಕಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ