Viral : ಹೆಣ್ಮಕ್ಳಳೇ ಸ್ಟ್ರಾಂಗ್ ಗುರು, ಸೀರೆ ಧರಿಸಿ 140 ಕೆಜಿ ಡೆಡ್ ಲಿಫ್ಟ್ ಮಾಡಿ ಅಚ್ಚರಿ ಮೂಡಿಸಿದ ಮಹಿಳೆ
ಸೋಶಿಯಲ್ ಮೀಡಿಯಾದಲ್ಲಿ ದಿನಬೆಳಗಾದರೆ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಕೆಲವು ವಿಡಿಯೋಗಳು ನೋಡುಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದರೆ ಇನ್ನು ಕೆಲವು ವಿಡಿಯೋಗಳು ಮನಸ್ಸಿಗೆ ಬೇಸರವನ್ನುಂಟು ಮಾಡುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸೀರೆಯುಟ್ಟುಕೊಂಡು ಜಿಮ್ ಗೆ ಬಂದಿದ್ದು, ಸಾಂಪ್ರಾದಾಯಿಕ ಉಡುಗೆಯಲ್ಲಿ ವರ್ಕ್ ಔಟ್ ಮಾಡುತ್ತಿದ್ದಾರೆ. ಈ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದ್ದು ತರಹೇವಾರಿ ಕಾಮೆಂಟ್ ಗಳು ಹರಿದು ಬಂದಿದೆ.

Viral VideoImage Credit source: Instagram
ಇಂದಿನ ಬ್ಯುಸಿಯಾದ ಜೀವನದಲ್ಲಿ ಫಿಟ್ ನೆಸ್ ಹಾಗೂ ವರ್ಕ್ ಔಟ್ (work out) ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಎಷ್ಟೇ ಬ್ಯುಸಿಯಿದ್ದರೂ ಸ್ವಲ್ಪವಾದರೂ ಜಿಮ್ ನಲ್ಲಿ ಕಳೆಯುತ್ತಾರೆ. ಸಾಮಾನ್ಯವಾಗಿ ಜಿಮ್ ಗೆ ಬರುವಾಗ ಜಿಮ್ ಗೆ ಹೊಂದುವಂತಹ ಉಡುಗೆ (dress) ಯನ್ನು ಧರಿಸಿ ಬರುವುದನ್ನು ನೋಡಿರಬಹುದು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸೀರೆಯುಟ್ಟು ಜಿಮ್ ಗೆ ಬಂದಿದ್ದು, ಆರಾಮದಾಯಕವಾಗಿ 140 ಕೆಜಿ ಡೆಡ್ ಲಿಫ್ಟ್ (deadlift) ಮಾಡಿದ್ದು, ಈ ಮಹಿಳೆಯ ಡೆಡ್ ಲಿಫ್ಟ್ ನೋಡಿದ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
varshan rana ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಸಾಂಪ್ರದಾಯಿಕ ಉಡುಗೆಯೊಂದಿಗೆ ಡೆಡ್ ಲಿಫ್ಟ್ ಮಾಡಲು ಆಗದು ಎಂದು ಯಾರು ಹೇಳಿದ್ದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಹಸಿರು ಬಣ್ಣದ ಸೀರೇ ಉಟ್ಟು ಮೇಕಪ್ ಮಾಡಿಕೊಂಡು ಜಿಮ್ ವರ್ಕ್ ಮಾಡಲು ಬಂದಿರುವುದನ್ನು ನೋಡಬಹುದು. ಆದರೆ ಈ ಮಹಿಳೆಯ ಮುಖದ ತುಂಬಾ ನಗುವಿದೆ. ಈ ವೇಳೆಯಲ್ಲಿ ಸರಿಸುಮಾರು 140 ಕೆಜಿ ಡೆಡ್ ಲಿಫ್ಟ್ ಮಾಡಿ ಒಂದು ಕ್ಷಣ ಎಲ್ಲರನ್ನು ನಿಬ್ಬೆರಾಗುವಂತೆ ಮಾಡಿದ್ದಾಳೆ. ಆರಾಮದಾಯಕವಾಗಿ ಡೆಡ್ ಲಿಫ್ಟ್ ಮಾಡಿದ್ದು ನಗುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ :
ಈ ವಿಡಿಯೋವು 5 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ನನಗೆ ಈ ರೀತಿಯ ಹುಡುಗಿಯರೆಂದರೆ ಇಷ್ಟ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅವಳ ತೋಳುಗಳನ್ನೊಮ್ಮೆ ನೋಡಿ ಎಂದಿದ್ದಾರೆ. ಇನ್ನೊಬ್ಬರು, ಶಕ್ತಿಶಾಲಿ ಮಹಿಳೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹೃದಯದ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ