ಈ ಹದಿನೆಂಟು ಗುಣಗಳು ಗಂಡಿನಲ್ಲಿ ಇದ್ರೆ ಮಾತ್ರ ಈಕೆ ಮದ್ವೆಗೆ ಓಕೆ ಅನ್ನೋದು ಅಂತೆ, ಇಲ್ಲದಿದ್ದರೆ ರಿಜೆಕ್ಟ್ ಆಗೋದು ಪಕ್ಕಾ
ಈಗಿನ ಕಾಲದಲ್ಲಿ ಮದುವೆಯಾಗಲು ಹೆಣ್ಣು ಸಿಗುವುದೇ ಕಷ್ಟ. ಆದರಲ್ಲಿಯು ಹೆಣ್ಣು ಮಕ್ಕಳ ಡಿಮ್ಯಾಂಡ್ ಕೇಳಿದ್ರೆ ತಲೆ ಗ್ರಿರ್ ಎನ್ನುತ್ತೆ. ಆದರೆ ಇದೀಗ ಯುವತಿಯೊಬ್ಬಳು ಯಾವುದೇ ಸೈಟ್ ನಲ್ಲೂ ಪ್ರೊಫೈಲ್ ಹಾಕಿದ್ದು, ಒಂದು ಕೈ ನೋಡೇ ಬಿಡೋಣ ಎಂದು ಹೇಳಿ ಯುವಕನು ಯುವತಿಯ ಜೊತೆಗೆ ಮಾತುಕಥೆ ನಡೆಸಿದ್ದಾನೆ. ಆ ವೇಳೆ ಯುವಕನಿಗೆ ಆಕೆಯ ಲಿಸ್ಟ್ ನೋಡಿ ತಲೆ ಸುತ್ತು ಬಂದಿದೆ. ಹಾಗಾದ್ರೆ ಈ ಯುವತಿಯೂ ತಾನು ಮದುವೆಯಾಗುವ ಹುಡುಗನಲ್ಲಿ ಇರಬೇಕಾದ ಆ ಹದಿನೆಂಟು ಗುಣಗಳೇನು? ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಏನೇ ಹೇಳಿ ಈಗಿನ ಕಾಲದಲ್ಲಿ ಹುಡುಗಿಯರಿಗೆ ಭಾರೀ ಡಿಮ್ಯಾಂಡ್ (demand) ಇದೆ. ಮದುವೆಯಾಗದ ಹುಡುಗರು ಮದುವೆಯಾಗೋಕೆ ಹುಡುಗಿ ಸಿಕ್ಕರೆ ಸಾಕು ಎನ್ನುವ ಮಟ್ಟಿಗೆ ಬಂದು ಬಿಟ್ಟಿದ್ದಾರೆ. ಹುಡುಗಿಯರಿಗೆ ಹೇಗೆ ಇದೆಯೋ, ಅದೇ ರೀತಿ ಹುಡುಗಿಯರು ಕೂಡ ಒಂದಷ್ಟು ಡಿಮ್ಯಾಂಡ್ ಗಳನ್ನೆ ಇಟ್ಟುಕೊಂಡೆ ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚೆಗಿನ ಯುವಕನೊಬ್ಬನು ಯುವತಿಯೊಬ್ಬಳ ಪ್ರೊಫೈಲ್ (profile) ನೋಡಿದ್ದಾನೆ. ಈ ವೇಳೆಯಲ್ಲಿ ಆಕೆಯ ಜೊತೆಗೆ ಮಾತುಕತೆ ನಡೆಸಿದ್ದು, ತಮ್ಮ ಸಂಭಾಷಣೆಯ ವೇಳೆ ನಡೆಸಿದ ಸಂಭಾಷಣೆಯ ಸ್ಕ್ರೀನ್ ಶಾರ್ಟ್ (conversation screen short) ಅನ್ನು ರೆಡ್ಡಿಟ್ ನಲ್ಲಿ ಹಂಚಿಕೊಂಡಿದ್ದಾನೆ. ಇದನ್ನೂ ನೋಡಿದ ಬಳಕೆದಾರರು ಈ ಯುವತಿಯ ನಿರೀಕ್ಷೆಗಳನ್ನು ನೋಡಿ ಬಾಯಿಯ ಮೇಲೆ ಬೆರಳಿಟ್ಟಿದ್ದಾರೆ.
ಹೌದು, ಯುವಕನು ಪ್ರಾರಂಭದಲ್ಲಿ ಯುವತಿಗೆ ಸಂದೇಶ ಕಳುಹಿಸಿದ್ದು ನಿಮ್ಮ ಪ್ರೊಫೈಲ್ ಇಷ್ಟವಾಯಿತು ಎಂದು ಬರೆದುಕೊಂಡಿದ್ದಾನೆ. ಆ ಬಳಿಕ ಆಕೆಯೂ ಹುಡುಗನಲ್ಲಿ ಬಯಸುವ ಗುಣಗಳೇನು ಎಂದು ಕೇಳಿದ್ದು, ಆಕೆ ಕೂಡ ಚೆಕ್ ಲಿಸ್ಟ್ ನೋಡ್ಬೇಕಾ ಎಂದು ಕೇಳಿದ್ದು, ಬಹಳ ಜೋಶ್ ನಲ್ಲಿ ಹೌದು ಎಂದು ಉತ್ತರಿಸಿದ್ದಾನೆ. ತಕ್ಷಣವೇ ಯುವತಿಯೂ ತನ್ನನ್ನು ಮದುವೆಯಾಗುವ ಹುಡುಗನಲ್ಲಿ ಬಯಸುವ ಹದಿನೆಂಟು ಗುಣಗಳಿರುವ ದೊಡ್ಡ ಪಟ್ಟಿಯನ್ನೇ ಕಳುಹಿಸಿದ್ದಾಳೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
She sent me a list of her requirements. One of them includes a salary of $300k+ byu/New_Ambassador2442 inTinder
ಇದನ್ನೂ ಓದಿ
New Ambassador2442 ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಯುವಕನು ಸ್ಕ್ರೀನ್ ಶಾರ್ಟ್ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಒಂದಲ್ಲ, ಎರಡರಲ್ಲ, ಹದಿನೆಂಟು ಗುಣ ಪಟ್ಟಿಯೇ ಇರುವುದನ್ನು ಕಾಣಬಹುದು. ಹೌದು, ಈ ಯುವತಿಯೂ ಬಯಸುವ ನನ್ನನ್ನು ಅತ್ಯಂತ ಹೆಚ್ಚು ಪ್ರೀತಿಸಬೇಕು, ಪ್ರೀತಿ ವಿಚಾರದಲ್ಲೇ ಗಂಡನಿಗೆ ನಾನೇ ಮೊದಲಿರಬೇಕು. ಆತನಿಗೆ ನಾನೇ ಮೊದಲ ಆದ್ಯತೆಯಾಗಿರಬೇಕು. ವಾರ್ಷಿಕ ವೇತನ ಸರಿಸುಮಾರು 2.5 ಕೋಟಿ ರೂಪಾಯಿ ಕಡ್ಡಾಯವಾಗಿ ಇರಲೇಬೇಕು. ತನಗೆ ಯಾವುದೇ ತೊಂದರೆಯಾಗದಂತೆ ನನನ್ನು ಆರಾಮದಾಯಕವಾಗಿರುವಂತೆ ನೋಡಿಕೊಳ್ಳಬೇಕು..ಪ್ರೀತಿ ಹಾಗೂ ಕಾಳಜಿಯಿಂದ ವಹಿಸಬೇಕು. ಐಷಾರಾಮಿತನ ಇರಬೇಕು. ನೋಡಲು ತುಂಬಾನೇ ಸುಂದರ ಹಾಗೂ ದೈಹಿಕವಾಗಿಯೂ ಫಿಟ್ ಆಗಿರಬೇಕು. ಸಂಬಂಧ, ಕುಟುಂಬ ಎಲ್ಲರ ಜೊತೆ ಒಳ್ಳೆಯ ಬಾಂಧವ್ಯ ಹಾಗೂ ಒಡನಾಟ ಹೊಂದಿರಬೇಕು. ಮನೆ ಕೆಲಸ ಸೇರಿದಂತೆ ಎಲ್ಲಾ ಕೆಲಸಗಳಿಗೆ ಕೆಲಸದವರಿಬೇಕು. ನನ್ನ ಎಲ್ಲಾ ಕೆಲಸಗಳಿಗೂ ಪ್ರೋತ್ಸಾಹ ನೀಡಬೇಕು. ಆಗಾಗ ಪ್ರವಾಸ, ಟ್ರಿಪ್ ಎಂದು ನನ್ನ ಕರೆದುಕೊಂಡು ಹೋಗಬೇಕು. ಅಷ್ಟೇ ಅಲ್ಲದೇ ಲೈಂಗಿಕತೆಯಲ್ಲಿ ಶಿಸ್ತು ಇದ್ದು, ತಾನು ಗರ್ಭಿಣಿಯಾಗದಂತೆ ನೋಡಿಕೊಳ್ಳಬೇಕು ಹೀಗೆ ಸರಿಸುಮಾರು ಹದಿನೆಂಟು ಗುಣಗಳಿರುವ ದೊಡ್ಡ ಪಟ್ಟಿಯೇ ಇದೆ.
ಈ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಈಗಿನ ಕಾಲದಲ್ಲಿ ಮದುವೆಗಿಂತ ಮೊದಲೇ ಹುಡುಗಿಯರೇ ಲಿಸ್ಟ್ ಶುರುವಾಗುತ್ತದೆ. ಮದುವೆಯಾದ ಮೇಲೆ ಹುಡುಗನ ಪಾಡು ದೇವರೇ ಬಲ್ಲ’ ಎಂದಿದ್ದಾರೆ. ಇನ್ನೊಬ್ಬರು, ಈ ಪಟ್ಟಿಯನ್ನೇ ಅವಳಿಗೆ ವಾಪಸ್ಸು ಕಳುಹಿಸಿ, ನನಗೂ ಕೂಡ ಈ ಗುಣಗಳಿರುವ ಹುಡುಗಿಯೇ ಬೇಕು ಹೇಳಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅವಳ ಲಿಸ್ಟ್ ನೋಡಿದರೆ ಅವಳು ಕೊನೆಯವರೆಗೂ ಒಂಟಿಯಾಗಿಯೇ ಇರುತ್ತಾಳೆ ಎಂದೇನಿಸುತ್ತದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿ ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ