Viral : ಹೋಮ್ ವರ್ಕ್ ನಿಂದ ತಪ್ಪಿಸಿಕೊಳ್ಳಲು ಈ ಪುಟಾಣಿಯೂ ಅಮ್ಮನಿಗೆ ಹೇಳಿದ ನೆಪ ನೋಡಿ
ಸೋಶಿಯಲ್ ಮೀಡಿಯಾದಲ್ಲಿ ಈ ಪುಟಾಣಿಗಳ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಪುಟ್ಟ ಕಂದಮ್ಮಗಳು ಮಾಡುವ ತರಲೆ ತುಂಟಾಟಗಳು ಒಂದೆರಡಲ್ಲ. ಅದರಲ್ಲಿಯೂ ಓದಲು ಅಥವಾ ಹೋಮ್ ವರ್ಕ್ ಮಾಡಲು ಕುಳಿತಾಗ ತಾಯಿಗೆ ಹೇಳುವ ಸುಳ್ಳು ಒಂದೆರಡರಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿಯೊಂದು ಪುಸ್ತಕ ತೆರೆದು ಹೋಮ್ ವರ್ಕ್ ಮಾಡಲು ಕುಳಿತಿದ್ದು, ನೆಪ ಹೇಳಿ ಹೋಮ್ ವರ್ಕ್ ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಪುಟಾಣಿ ಮಕ್ಕಳೇ (little kids) ಹಾಗೆ, ಏನು ಮಾಡಿದರೂ ಮುದ್ದು ಮುದ್ದಾಗಿ ಕಾಣಿಸುತ್ತದೆ. ಮಕ್ಕಳ ತಮ್ಮ ಮುದ್ದು ಮುದ್ದಾದ ಮಾತು, ತರಲೆ ತುಂಟಾಟಗಳನ್ನು ನೋಡುವುದೇ ಚಂದ. ಆದರೆ ಬೆಳೆಯುತ್ತ ಬಂದಂತೆಲ್ಲ ಮಕ್ಕಳನ್ನು ಶಾಲೆಗೆ ಸೇರಿಸಿ ಓದಿಸುವ ಜವಾಬ್ದಾರಿಯೂ ಹೆತ್ತವರ ಮೇಲೆ ಇರುತ್ತದೆ. ಅದರಲ್ಲಿ ಪುಟಾಣಿಗಳು ಹೋಮ್ ವರ್ಕ್ (home work) ಮಾಡುವಾಗಲಂತೂ ತಾಯಿಗೆ ಕೊಡುವ ತೊಂದರೆ ಅಷ್ಟಿಷ್ಟಲ್ಲ. ಹೇಗೋ ಸಮಾಧಾನ ಪಡಿಸಿ ತಾಯಿಯಾದವಳು ಹೋಮ್ ಮಾಡಿ ಮುಗಿಸುತ್ತಾಳೆ. ಇದೀಗ ವೈರಲ್ (viral) ಆಗಿರುವ ವಿಡಿಯೋದಲ್ಲಿ ಪುಟಾಣಿಯೊಂದು ಹೋಮ್ ವರ್ಕ್ ಮಾಡಲು ಕುಳಿತುಕೊಂಡಿದ್ದು, ಹೋಮ್ ವರ್ಕ್ ಮಾಡಲು ಸ್ವಲ್ಪ ಕೂಡ ಇಷ್ಟ ಇಲ್ಲ. ಹೀಗಾಗಿ ಅಳುತ್ತಾ ನನಗೆ ಉಸಿರುಗಟ್ಟುತ್ತಿದೆ, ಉಸಿರಾಡಲು ತೊಂದರೆಯಾಗುತ್ತಿದೆ ಎಂದು ಹೇಳಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Tarun shakla ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಪುಟಾಣಿಯೊಂದು ಹೋಮ್ ವರ್ಕ್ ಮಾಡಲು ಕುಳಿತಿದೆ. ತಾಯಿಯೂ ತನ್ನ ಮಗುವಿಗೆ ಕಲಿಸಲು ಕುಳಿತಿರುವುದನ್ನು ನೋಡಬಹುದು. ಪುಟಾಣಿ ಮುಂದೆ ಗಣಿತ ಪುಸ್ತಕವಿದ್ದು, ಅದರಲ್ಲಿ ಸಂಖ್ಯೆಗಳನ್ನು ಬರೆಯುತ್ತಿದ್ದಾನೆ. ಹೋಮ್ ವರ್ಕ್ ಮಾಡಲು ಇಷ್ಟವಿಲ್ಲದ ಕಾರಣ ಜೋರಾಗಿ ಅಳಲು ಶುರು ಮಾಡಿದ್ದು, ಅದೇ ವೇಳೆ ತನ್ನ ತಾಯಿ ಬಳಿ ನನಗೆ ಉಸಿರಾಡಲು ಕಷ್ಟವಾಗುತ್ತಿದೆ , ಉಸಿರಾಡಲು ಸರಿಯಾಗಿ ಆಗುತ್ತಿಲ್ಲ ಎಂದು ಹೇಳುತ್ತಿರುವುದನ್ನು ಗಮನಿಸಬಹುದು. ಪುಟಾಣಿ ನೆಪಕ್ಕೆ ತಲೆ ಕೆಡಿಸಿಕೊಳ್ಳದೇ, ಆಟ ಆಡುವಾಗ ನಿನಗೆ ಏನು ಆಗಲ್ಲ, ಓದುವಾಗ ಯಾಕೆ ಉಸಿರುಗಟ್ಟುತ್ತದೆ ಎಂದು ಕೇಳಿದ್ದಾಳೆ. ಕೊನೆಗೆ ತನ್ನ ತಂದೆಗೆ ಕರೆ ಮಾಡಲು ಹೇಳುತ್ತದೆ. ಅಷ್ಟೇ ಅಲ್ಲದೇ ತನ್ನ ಕೈಯಲ್ಲಿರುವ ಗಾಯ ತೋರಿಸಿದ್ದು, ಬೀಳುವುದರಿಂದ ಬೆಳೆಯಲು ಸಾಧ್ಯ ಎಂದು ಹೇಳುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋವೊಂದು ಇಪ್ಪತ್ತೊಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಈ ಪುಟಾಣಿಯ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಈ ವಿಡಿಯೋಗೆ ಬಳಕೆದಾರರು, ನಾವು ಸಣ್ಣವರಿದ್ದಾಗ ನಮ್ಮ ಅಮ್ಮ ಈ ರೀತಿ ಹೋಮ್ ವರ್ಕ್ ಮಾಡಿಸುತ್ತಿರಲಿಲ್ಲ. ‘ಸಂಜೆ ಮನೆಗೆ ಬರುತ್ತಿದ್ದಂತೆ ಬ್ಯಾಗ್ ಬಿಸಾಡಿ ಆಟ ಆಡಲು ಹೋಗುತ್ತಿದ್ದೆವು’ ಎಂದು ಕಾಮೆಂಟ್ ಮಾಡಿ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ : Viral : ಇದಪ್ಪಾ ಫ್ರೆಂಡ್ಶಿಪ್ ಅಂದ್ರೆ ಏಳು ವರ್ಷಗಳ ಬಳಿಕ ಅನಿರೀಕ್ಷಿತ ಭೇಟಿಯಾದ ಸ್ನೇಹಿತರು
ಇನ್ನೊಬ್ಬರು, ‘ಈಗಿನ ಮಕ್ಕಳು ಎಲ್ಲರೂ ಹೀಗೆಯೇ, ಪುಸ್ತಕ, ಹೋಮ್ ವರ್ಕ್ ಎಂದರೆ ಮಾರುದ್ದ ಓಡುತ್ತಾರೆ’ ಎಂದಿದ್ದಾರೆ. ಮತ್ತೊರ್ವ ಬಳಕೆದಾರರು, ‘ನನಗೆ ಈ ಪುಟಾಣಿಯ ಅಪ್ಪ ಬಂದ ಮೇಲಿನ ಪಾರ್ಟ್ 2 ವಿಡಿಯೋ ಬೇಕು’ ಎಂದು ಕೇಳಿದ್ದಾರೆ. ಈ ಪುಟಾಣಿಯೂ ನೆಪ ಹೇಳುವುದನ್ನು ಕೇಳಿ ನಗುವ ಇಮೋಜಿ ಕಳುಹಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ