Viral : ಇದಪ್ಪಾ ಫ್ರೆಂಡ್ಶಿಪ್ ಅಂದ್ರೆ ಏಳು ವರ್ಷಗಳ ಬಳಿಕ ಅನಿರೀಕ್ಷಿತ ಭೇಟಿಯಾದ ಸ್ನೇಹಿತರು
ಸ್ನೇಹ ಎಂದರೇನೇ ಹಾಗೆ ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಜೊತೆಯಾಗಿ ನಿಲ್ಲುವುದು. ಈ ಎರಡಕ್ಷರದ ಸ್ನೇಹವು ಬೆಲೆ ಕಟ್ಟಲಾಗದ ಅದ್ಭುತ ಸಂಪತ್ತು. ಕೆಲವೊಮ್ಮೆ ಎಷ್ಟೋ ವರ್ಷಗಳ ಬಳಿಕ ಸ್ನೇಹಿತರು ಸಿಕ್ಕರೆ ಆ ಖುಷಿಗೆ ಪಾರಾವೇ ಇರುವುದಿಲ್ಲ. ಇದೀಗ ಇಂತಹದೊಂದು ಅಪರೂಪದದ ವಿಡಿಯೋವೊಂದು ವೈರಲ್ ಆಗಿದೆ. ಇದೀಗ ವೈರಲ್ ವಿಡಿಯೋದಲ್ಲಿ ಏಳು ವರ್ಷಗಳ ಬಳಿಕ ಏಳ ಇಬ್ಬರು ಸ್ನೇಹಿತರು ಅನಿರೀಕ್ಷಿತವಾಗಿ ಭೇಟಿಯಾಗಿದ್ದು, ಅವರ ಖುಷಿಗೆ ಪಾರಾವೇ ಇಲ್ಲದಂತಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಬದುಕಿನ ಜಂಜಾಟದ ನಡುವೆ ಕಳೆದುಹೋದದ್ದು ತಿಳಿಯುವುದೇ ಇಲ್ಲ. ಕಾಲೇಜು ಹಾಗೂ ಶಾಲಾ ದಿನಗಳಲ್ಲಿ ಸ್ನೇಹಿತರ ಜೊತೆಗೆ ಸುತ್ತುತ್ತಿದ್ದರೂ ಉದ್ಯೋಗಕ್ಕೆ ತೆರಳಿದ ಬಳಿಕ ತಮ್ಮ ಹಳೆಯ ಅಥವಾ ಆತ್ಮೀಯ ಸ್ನೇಹಿತರ (friends) ನ್ನು ಭೇಟಿಯಾಗುವುದೇ ಅಪರೂಪವಾಗುತ್ತದೆ. ಅದರಲ್ಲಿಯೂ ಕೆಲವು ಸ್ನೇಹಿತರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎನ್ನುವುದು ತಿಳಿಯುವುದೇ ಇಲ್ಲ. ಆದರೆ ಸಭೆ ಸಮಾರಂಭ ಅಥವಾ ಇನ್ಯಾವುದೋ ಸ್ಥಳದಲ್ಲಿ ಅನಿರೀಕ್ಷಿತವಾಗಿ ಆ ಸ್ನೇಹಿತರನ್ನು ಭೇಟಿಯಾಗುವುದಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸ್ನೇಹಿತರಿಬ್ಬರೂ ಏಳು ವರ್ಷಗಳ ಬಳಿಕ ಸ್ಥಳೀಯ ಉಪಹಾರ ಗೃಹ (restaurant) ವೊಂದರಲ್ಲಿ ಭೇಟಿಯಾಗಿದ್ದಾರೆ. ಆದರೆ ಅವರಿಬ್ಬರಿಗೂ ಕೂಡ ತಮ್ಮ ಹಳೆಯ ಸ್ನೇಹಿತ ಎನ್ನುವುದು ಗೊತ್ತೇ ಇಲ್ಲದಿರುವುದು ನಿಜಕ್ಕೂ ಅಚ್ಚರಿಯೆನಿಸುವ ವಿಚಾರವಾಗಿದೆ. ಈ ಸ್ನೇಹಿತರಿಬ್ಬರ ಅನಿರೀಕ್ಷಿತ ಭೇಟಿಯ ವಿಡಿಯೋ (video) ವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
indiawithoutpolitics ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಹೆಲ್ಮೆಟ್ ಧರಿಸಿದ್ದು, ಆತನ ಕಡೆಗೆ ವ್ಯಕ್ತಿಯೊಬ್ಬನು ನಡೆದು ಬಂದು ಹೆಸರು ಮತ್ತು ಕೆಲಸದ ಬಗ್ಗೆ ಕೇಳಿದ್ದಾನೆ. ಈ ವೇಳೆಯಲ್ಲಿ ಆ ವ್ಯಕ್ತಿಯೂ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಆ ಬಳಿಕ ಹೆಸರು ಕೇಳುತ್ತಿದ್ದಂತೆ ತನ್ನ ಸ್ನೇಹಿತ ಎಂದು ತಿಳಿದಿದೆ. ಏಳು ವರ್ಷಗಳ ಬಳಿಕ ಅನಿರೀಕ್ಷಿತವಾಗಿ ಭೇಟಿಯಾದ ಇಬ್ಬರೂ ಸ್ನೇಹಿತರು ಪರಸ್ಪರ ತಬ್ಬಿಕೊಂಡಿದ್ದು, ಅವರ ಖುಷಿಗೆ ಪಾರಾವೇ ಇಲ್ಲದಂತಾಗಿದೆ.
ಇದನ್ನೂ ಓದಿ :ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಲೆಫ್ಟಿನೆಂಟ್ ವಿನಯ್ ನರ್ವಾಲ್ಗೆ ಪತ್ನಿಯಿಂದ ಭಾವುಕ ವಿದಾಯ
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಸ್ನೇಹವೆಂದರೇನೇ ಹಾಗೆ, ನೀವು ಎಷ್ಟೇ ದೂರವಿದ್ದರೂ ಶುದ್ಧ ಸ್ನೇಹವು ಹಾಗೆಯೇ ಇರುತ್ತದೆ’ ಎಂದಿದ್ದಾರೆ. ಮತ್ತೊಬ್ಬರು, ಹುಡುಗರು ತಮ್ಮ ಸ್ನೇಹಿತರನ್ನು ಭೇಟಿಯಾದಾಗ ತಮ್ಮ ಹಳೆಯ ನೆನಪುಗಳನ್ನು ಮರೆಯದೇ ಮೆಲುಕು ಹಾಕುತ್ತಾರೆ ಎಂದಿದ್ದಾರೆ. ಇನ್ನೊಬ್ಬರು, ‘ದೂರವಿದ್ದರೇನು ಇನ್ನು, ವರ್ಷಗಳ ಬಳಿಕ ಭೇಟಿಯಾದಾಗ ಆ ಮಾತು, ಬಾಂಧವ್ಯ, ಆ ಸಂಭಾಷಣೆಯೂ ಹಾಗೆ ಉಳಿದಿರುತ್ತದೆ. ಸ್ನೇಹವಾಗಲಿ ಸ್ನೇಹಿತ ನಡೆ ನುಡಿಯೂ ಬದಲಾಗದೇ ಹಾಗೆ ಉಳಿದಿದ್ದರೆ ಅದಕ್ಕಿಂತ ಬೇರೆ ಏನು ಬೇಕಿಲ್ಲ’ ಎಂದು ಹೇಳಿದ್ದಾರೆ. ಇನ್ನು ಕೆಲವರು ಹೃದಯದ ಸಿಂಬಲ್ ಕಳುಹಿಸುವ ಮೂಲಕ ಇವರಿಬ್ಬರ ಅನಿರೀಕ್ಷಿತ ಭೇಟಿಯನ್ನು ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ