ಬಾಲಾಕೋಟ್‌ನಲ್ಲಿ ಭಾರತ ಸೇನಾ ದಾಳಿ ನಡೆಸಿದ್ದು ನಿಜ; ಸರ್ಜಿಕಲ್ ಸ್ಟ್ರೈಕ್‌ ಬಗ್ಗೆ ಅಧಿಕೃತವಾಗಿ ಒಪ್ಪಿಕೊಂಡ ಪಾಕ್‌

| Updated By: ganapathi bhat

Updated on: Oct 11, 2021 | 7:00 PM

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ ಸ್ವತಃ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಭಾರತದ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಅಪಾರ ಹಾನಿಯಾಗಿತ್ತು. ಬಾಂಬ್‌ ದಾಳಿಯಿಂದ ಹಾನಿ ಆಗಿತ್ತು ಎಂದು ಇಮ್ರಾನ್ ಖಾನ್‌ ತಿಳಿಸಿದ್ದಾರೆ.

ಬಾಲಾಕೋಟ್‌ನಲ್ಲಿ ಭಾರತ ಸೇನಾ ದಾಳಿ ನಡೆಸಿದ್ದು ನಿಜ; ಸರ್ಜಿಕಲ್ ಸ್ಟ್ರೈಕ್‌ ಬಗ್ಗೆ ಅಧಿಕೃತವಾಗಿ ಒಪ್ಪಿಕೊಂಡ ಪಾಕ್‌
ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ (ಸಂಗ್ರಹ ಚಿತ್ರ)
Follow us on

ದೆಹಲಿ: ಬಾಲಾಕೋಟ್‌ನಲ್ಲಿ ಭಾರತ ಸೇನಾ ದಾಳಿ ನಡೆಸಿದ್ದು ನಿಜ ಎಂದು ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್‌ (Surgical Strike) ಬಗ್ಗೆ ಪಾಕಿಸ್ತಾನ ಅಧಿಕೃತವಾಗಿ ಒಪ್ಪಿಕೊಂಡಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ (Imran Khan) ಸ್ವತಃ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಭಾರತದ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಅಪಾರ ಹಾನಿಯಾಗಿತ್ತು. ಬಾಂಬ್‌ ದಾಳಿಯಿಂದ ಹಾನಿ ಆಗಿತ್ತು ಎಂದು ಇಮ್ರಾನ್ ಖಾನ್‌ ತಿಳಿಸಿದ್ದಾರೆ. ಈ ಮೂಲಕ ಪಾಕಿಸ್ತಾನ (Pakistan) ಭಾರತೀಯ ಸೇನೆಯಿಂದ ದಾಳಿ ಆಗಿರುವುದು ನಿಜ ಎಂದು ಮೊದಲ ಬಾರಿಗೆ ಒಪ್ಪಿಕೊಂಡಂತಾಗಿದೆ. ಈ ಬಗ್ಗೆ ಮಿಡಲ್ ಈಸ್ಟ್ ಐ ಸುದ್ದಿಸಂಸ್ಥೆ ಮಾಡಿರುವ ಸಂದರ್ಶನದ ತುಣುಕನ್ನು ಖಾಸಗಿ ವಾಹಿನಿಯೊಂದು ಪ್ರಸಾರ ಮಾಡಿದೆ.

ಅಂದು ವಿಪಕ್ಷಗಳು ಭಾರತೀಯ ಸೇನೆ ನಡೆಸಿರುವ ಈ ದಾಳಿಯ ಕುರಿತು ಅನುಮಾನಿಸಿ ಸೂಕ್ತ ಸಾಕ್ಷಿ ನೀಡುವಂತೆ ಕೇಳಿದ್ದವು. ಭಾರತೀಯ ವಿಪಕ್ಷಗಳ ಹೇಳಿಕೆಗಳು ವ್ಯಾಪಕ ಟೀಕೆ ಹಾಗೂ ಚರ್ಚೆಗೆ ಈಡಾಗಿತ್ತು. ಆದರೆ, ಸುಮಾರು ಎರಡು ವರ್ಷಗಳ ಬಳಿಕ ಇದೀಗ ಪಾಕಿಸ್ತಾನವೇ ಈ ಘಟನೆಯನ್ನು ಒಪ್ಪಿಕೊಂಡಂತಾಗಿದೆ.

ಬಾಲಾಕೋಟ್ ದಾಳಿಯಂದು ಏನಾಗಿತ್ತು?
ಬಾಲಾಕೋಟ್. ಈ ಹೆಸರನ್ನು ಕೇಳದವರು ಇರಲಾರರೇನೋ. ಪಾಕ್ ಉಗ್ರರ ದುಷ್ಕೃತ್ಯಗಳ ಮೂಲವನ್ನೇ ಹುಟ್ಟಡಗಿಸಿದ ಭಾರತೀಯ ಯೋಧರ ಯಶಸ್ವಿ ಕಾರ್ಯವಿದು. (Balakot Air Strike) 2019ರ ಫೆಬ್ರವರಿ 14ರಂದು ಪಾಕ್ ಉಗ್ರನೊಬ್ಬ ಜಮ್ಮು-ಕಾಶ್ಮೀರದ ಪುಲ್ವಾಮ (Pulwama) ಜಿಲ್ಲೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ. ಹೆದ್ದಾರಿ ಮೇಲೆ ಸಾಗುತ್ತಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ವಾಹನಗಳನ್ನು ಗುರಿಯಾಗಿಸಿ ಉಗ್ರ ದಾಳಿ ಮಾಡಿದ್ದ. ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಈ ದಾಳಿಯಲ್ಲಿ 40 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಉಗ್ರರ ಈ ದುಷ್ಕೃತ್ಯಕ್ಕೆ ತಿರುಗೇಟು ನೀಡಿದ ಭಾರತ, ಫೆ. 26ರಂದು ಪಾಕ್ ಆಕ್ರಮಿತ ಕಾಶ್ಮೀರ ಭಾಗಕ್ಕೆ ತೆರಳಿ ಉಗ್ರರ ಶಿಬಿರಗಳನ್ನು ಹೇಳಹೆಸರಿಲ್ಲದಂತೆ ಮಾಡಿತ್ತು.

ಸ್ವತಃ ಜೈಷ್​-ಎ-ಮೊಹಮ್ಮದ್ ಉಗ್ರ​ ಸಂಘಟನೆ ಪುಲ್ವಾಮ ದಾಳಿಯ ಹೊಣೆ ಹೊತ್ತಿದ್ದರೂ, ಪಾಕಿಸ್ತಾನ ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಂಡಿತ್ತು. ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತ ಗುಟ್ಟಾಗಿ ಸಿದ್ಧತೆ ಮಾಡಿಕೊಂಡಿತ್ತು. ಭಾರತೀಯ ವಾಯುಸೇನೆಗೆ ದಾಳಿಯ ಹೊಣೆ ವಹಿಸಲಾಯಿತು. ಎಲ್ಲವೂ ಅಂದುಕೊಂಡಂತೆ ನಡೆಯಿತು. ಪಾಕಿಸ್ತಾನದ ಬಾಲಾಕೋಟ್ ಎಂಬಲ್ಲಿ, ಭಾರತೀಯ ಸೈನಿಕರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಸುಮಾರು 300 ಉಗ್ರರು ನಾಶವಾಗಿದ್ದರು. ಫೆಬ್ರವರಿ 26ರ ಮುಂಜಾನೆ ಪಾಕಿಸ್ತಾನಕ್ಕೆ ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಭಾರತೀಯ ವಾಯುಪಡೆ ಉಗ್ರರ ನೆಲೆಯನ್ನು ನಾಶ ಮಾಡಿ ಬಂದಿತ್ತು.

ಇದನ್ನೂ ಓದಿ: ಬಾಲಾಕೋಟ್​ ದಾಳಿಗೆ 2 ವರ್ಷ: ವೈರಿ ನೆಲದಲ್ಲೂ ಮುಗುಳ್ನಗುತ್ತಿದ್ದ ಧೀರ ಅಭಿನಂದನ್​ ವರ್ಧಮಾನ್

ಇದನ್ನೂ ಓದಿ: Two Years of Pulwama Attack: ಫೆಬ್ರವರಿ14ರಂದು ಏನಾಗಿತ್ತು? ಉಗ್ರರ ದಾಳಿಗೆ ಭಾರತ ಹೇಗೆ ಪ್ರತ್ಯುತ್ತರ ನೀಡಿತು?

Published On - 5:52 pm, Mon, 11 October 21