ಪಬ್ ಜಿ ಲವ್ ಸ್ಟೋರಿ; ಬಂಧನದ ಭೀತಿಯಿಂದ ಪಾಕ್ ಮಹಿಳೆ ಪಲಾಯನ ಮಾಡಲು ಪ್ರಯತ್ನಿಸಿದ್ದರು: ಪೊಲೀಸ್

|

Updated on: Jul 18, 2023 | 6:23 PM

ವೀಸಾ ಇಲ್ಲದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಸೀಮಾಳನ್ನು ಬಂಧಿಸಲಾಗಿದ್ದು, ಸೋಮವಾರ ಉತ್ತರ ಪ್ರದೇಶ ಪೊಲೀಸರ ಭಯೋತ್ಪಾದನಾ ನಿಗ್ರಹ ದಳದಿಂದ ವಿಚಾರಣೆ ನಡೆಸಲಾಯಿತು.

ಪಬ್ ಜಿ ಲವ್ ಸ್ಟೋರಿ; ಬಂಧನದ ಭೀತಿಯಿಂದ ಪಾಕ್ ಮಹಿಳೆ ಪಲಾಯನ ಮಾಡಲು ಪ್ರಯತ್ನಿಸಿದ್ದರು:   ಪೊಲೀಸ್
ಸೀಮಾ ಹೈದರ್
Follow us on

ದೆಹಲಿ ಜುಲೈ 18: ತನ್ನ ಪ್ರಿಯಕರನೊಂದಿಗೆ ಇರಲು ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ನುಸುಳಿದ್ದ ಪಾಕಿಸ್ತಾನಿ (Pakistani) ಮಹಿಳೆ ಸೀಮಾ ಗುಲಾಮ್ ಹೈದರ್ (Seema Ghulam Haider), ಆಕೆಯನ್ನು ಬಂಧಿಸಿದಾಗ ದೆಹಲಿಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಳು ಎಂದು ನೋಯ್ಡಾ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳ ಮೂಲಕ ಭಾರತಕ್ಕೆ ಬಂದಿದ್ದಳು. 2019 ರಲ್ಲಿ ಆನ್‌ಲೈನ್ ಪಬ್ ಜಿ (PUBG) ಆಡುವಾಗ ಉತ್ತರ ಪ್ರದೇಶದ ಸಚಿನ್ ಮೀನಾ ಜತೆ ಸೀಮಾಗೆ ಪ್ರೀತಿ ಹುಟ್ಟಿಕೊಂಡಿತ್ತು. ಆನಂತರ ಈ ಜೋಡಿ ಮದುವೆಯಾಗಿದ್ದು, ಆತನೊಂದಿಗೆ ಸಂಸಾರ ನಡೆಸಲು ಸೀಮಾ ಪಾಕಿಸ್ತಾನದಿಂದ ತನ್ನ ಗಂಡನನ್ನು ತೊರೆದು ಬಂದಿದ್ದಳು. ವೀಸಾ ಇಲ್ಲದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಸೀಮಾಳನ್ನು ಬಂಧಿಸಲಾಗಿದ್ದು, ಸೋಮವಾರ ಉತ್ತರ ಪ್ರದೇಶ ಪೊಲೀಸರ ಭಯೋತ್ಪಾದನಾ ನಿಗ್ರಹ ದಳದಿಂದ ವಿಚಾರಣೆ ನಡೆಸಲಾಯಿತು.

ನೋಯ್ಡಾ ಪೊಲೀಸರು ದಾಖಲಿಸಿದ ಎಫ್‌ಐಆರ್‌ನ ಪ್ರಕಾರ, ಸೀಮಾ ಅವರು ಭಾರತಕ್ಕೆ ವೀಸಾ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದಾಗ ನೇಪಾಳಕ್ಕೆ ಪ್ರಯಾಣಿಸಿ ಅಲ್ಲಿಂದ ದೆಹಲಿಗೆ ಬಸ್ ಪ್ರಯಾಣ ಮಾಡಿದ್ದರು.

ನಾನು ಮೇ 13 ರಂದು ನನ್ನ ನಾಲ್ಕು ಮಕ್ಕಳೊಂದಿಗೆ ಯಮುನಾ ಎಕ್ಸ್‌ಪ್ರೆಸ್‌ವೇ ತಲುಪಿದೆ.ಅಲ್ಲಿಂದ ಸಚಿನ್ ನಮ್ಮನ್ನು ಗ್ರೇಟರ್ ನೋಯ್ಡಾದ ಮೊಹಲ್ಲಾ ಅಂಬೇಡ್ಕರ್ ನಗರದಲ್ಲಿರುವ ಬಾಡಿಗೆ ಮನೆಗೆ ಕರೆದೊಯ್ದರು ಎಂದು ಸೀಮಾ ಹೇಳಿದ್ದಾರೆ.

ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ಸಚಿನ್, ಸೀಮಾಳನ್ನು ತನ್ನ ತಂದೆಗೆ ಪರಿಚಯಿಸಿ ಆಕೆಯನ್ನು ಮದುವೆಯಾಗುವ ಉದ್ದೇಶವನ್ನು ತಿಳಿಸಿದ್ದ. ಭಾರತೀಯ ಜೀವನ ಶೈಲಿಗೆ ಹೊಂದಿಕೊಂಡರೆ ಮಾತ್ರ ಮಗನನ್ನು ಮದುವೆಯಾಗಲು ಅವಕಾಶ ನೀಡುವುದಾಗಿ ಸಚಿನ್ ತಂದೆ ಹೇಳಿದ್ದರು. ಅವರ ಬೇಡಿಕೆಗೆ ನಾನು ಒಪ್ಪಿದೆ ಎಂದಿದ್ದಾರೆ ಸೀಮಾ.

ಇದಾದ ಬಳಿಕ ಸಚಿನ್ ತನ್ನ ಊರಿಗೆ ತೆರಳಿದ್ದು, ಕೆಲ ದಿನಗಳ ಬಳಿಕ ಆತನ ತಂದೆ ನೇತ್ರಪಾಲ್ ಆಕೆಯ ಮನೆಗೆ ಬಂದಿದ್ದಾಗಿ ಆಕೆ ತಿಳಿಸಿದ್ದಾಳೆ. ನ್ಯಾಯಾಲಯದ ವಿವಾಹ ಪ್ರಕ್ರಿಯೆಯನ್ನು ಪ್ರಾರಂಭಿಸಲು ವಕೀಲರನ್ನು ಭೇಟಿ ಮಾಡಲು ಅವರು ನನ್ನನ್ನು ಬುಲಂದ್‌ಶಹರ್‌ನ ನ್ಯಾಯಾಲಯಕ್ಕೆ ಕರೆದೊಯ್ದರು. ನಾನು ನನ್ನ ದಾಖಲೆಗಳನ್ನು ಅವರಿಗೆ ತೋರಿಸಿದಾಗ, ನಾನು ಭಾರತೀಯ ಪ್ರಜೆಯಲ್ಲದ ಕಾರಣ ಸಚಿನ್‌ನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ವಕೀಲರು ನನಗೆ ಹೇಳಿದರು.

ಇದನ್ನೂ ಓದಿ: PUBG Love: ಭಾರತ-ಪಾಕಿಸ್ತಾನ ಪಬ್ಜಿ ಲವ್​ ಸ್ಟೋರಿ, ಭಾರತ ಈಗ ನನ್ನ ದೇಶ ಎಂದ ಪಾಕ್ ಮಹಿಳೆ

ಮನೆಗೆ ಹಿಂದಿರುಗಿದ ನಂತರ, ವಕೀಲರು ಪೊಲೀಸರನ್ನು ಎಚ್ಚರಿಸಬಹುದು ಮತ್ತು ತನ್ನನ್ನು ಬಂಧಿಸಬಹುದು ಎಂದು ಹೆದರಿಕೆಯಾಗಿತ್ತು. ಜೂನ್ 30 ರಂದು, ನಾನು ದೈನಂದಿನ ಖರ್ಚಿಗಾಗಿ ಸಚಿನ್ ತಂದೆಯಿಂದ ಹಣವನ್ನು ಸಾಲವಾಗಿ ಪಡೆದು ನನ್ನ ಮಕ್ಕಳೊಂದಿಗೆ ಬಾಡಿಗೆ ಮನೆಯಿಂದ ಹೊರಬಂದೆ. ನಾವು ದೆಹಲಿಗೆ ಹೋಗಲು ಬಯಸಿದ್ದೆವು. ಆದರೆ ಶೀಘ್ರದಲ್ಲೇ ಬಂಧಿಸಲಾಯಿತು ಎಂದು ಸೀಮಾ ಹೇಳಿದ್ದಾರೆ.

ಜುಲೈ 4 ರಂದು ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳದ ಮೂಲಕ ವೀಸಾ ಇಲ್ಲದೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿತ್ತು. ಎಲ್ಲರೂ ಏಳು ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಸಚಿನ್ ಅವರನ್ನು ಜೈಲಿಗೆ ಹಾಕಲಾಯಿತು. ಸಚಿನ್‌ನಿಂದ ವಶಪಡಿಸಿಕೊಂಡಿರುವ ಹಾನಿಗೊಳಗಾದ ಮೊಬೈಲ್ ಫೋನ್‌ನಿಂದ ಡೇಟಾವನ್ನು ಮರುಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ