
ನಲಸೋಪರ, ಡಿಸೆಂಬರ್ 09: ಕಣ್ಣಾಮುಚ್ಚಾಲೆ ಆಟವಾಡುವಾಗ ಕಾಣೆಯಾಗಿದ್ದ ಬಾಲಕ ಐದು ದಿನಗಳ ಬಳಿಕ ಕಟ್ಟಡದ ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಘಟನೆ ಪಾಲ್ಘಡದಲ್ಲಿ ನಡೆದಿದೆ. ಎಂಟು ವರ್ಷದ ಬಾಲಕ ತನ್ನ ವಸತಿ ಕಟ್ಟಡದ ನೀರಿನ ಟ್ಯಾಂಕ್‌ನಲ್ಲಿ ಶವ(Dead Body)ವಾಗಿ ಪತ್ತೆಯಾಗಿದ್ದಾನೆ. ಆಟವಾಡುವಾಗ ಅಡಗಿಕೊಳ್ಳಲೆಂದು ಅಲ್ಲಿ ಕುಳಿತಿದ್ದನೋ, ಆಯತಪ್ಪಿ ಕೆಳಗೆ ಬಿದ್ದನೋ ಅಥವಾ ಕೊಲೆಯೋ ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತ ಬಾಲಕನನ್ನು ಮೆಹ್ರಾಜ್ ಶೇಖ್ ಎಂದು ಗುರುತಿಸಲಾಗಿದೆ.
ಬಾಲಕ ತನ್ನ ಹೆತ್ತವರೊಂದಿಗೆ ನಲಸೋಪರಾ ಪಶ್ಚಿಮದ ಟಕಿಪಾಡಾ ಪ್ರದೇಶದ ಕರಾರಿ ಬಾಗ್ ಕಟ್ಟಡದಲ್ಲಿ ವಾಸವಾಗಿದ್ದ. ಡಿಸೆಂಬರ್ 3 ರಂದು ಶಾಲೆಯಿಂದ ಹಿಂದಿರುಗಿದ ನಂತರ ಆಟವಾಡಲು ಹೊರಗೆ ಹೋಗಿದ್ದ ಆದರೆ ಮನೆಗೆ ಹಿಂತಿರುಗಲಿಲ್ಲ. ಎಲ್ಲೆಡೆ ಹುಡುಕಿದ ನಂತರ, ಅವನ ಪೋಷಕರು ಡಿಸೆಂಬರ್ 4 ರಂದು ನಲಸೋಪರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ನಲಸೋಪರಾ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದರು.
ಸೋಮವಾರ ಬೆಳಗ್ಗೆ, ಕಟ್ಟಡದ ನೀರಿನ ಟ್ಯಾಂಕ್‌ನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ನಿವಾಸಿಗಳು ದೂರು ನೀಡಿದ್ದರು. ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ನೀರಿನ ಟ್ಯಾಂಕ್‌ನಲ್ಲಿ ಹುಡುಕಿದಾಗ, ಕಾಣೆಯಾದ ಬಾಲಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೀರಿನ ಟ್ಯಾಂಕ್ ತೆರೆದಿತ್ತು ಮತ್ತು ಮೆಹ್ರಾಜ್ ಅದರೊಳಗೆ ಬಿದ್ದಿರಬಹುದು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಮತ್ತಷ್ಟು ಓದಿ: ಶವ ಪೆಟ್ಟಿಗೆ ಸೇರಿದ ಪುರುಷ ಸ್ಪರ್ಧಿಗಳು: ಮಹಿಳಾ ಸ್ಪರ್ಧಿಗಳ ಹೆಣಗಾಟ
ಬಾಲಕನ ಸಾವು ಟ್ಯಾಂಕ್‌ನಲ್ಲಿ ಮುಳುಗಿ ಸಂಭವಿಸಿದ ಅಪಘಾತ ಎಂದು ನಲಸೋಪಾರ ಪೊಲೀಸರು ವರದಿ ಮಾಡಿದ್ದರೂ, ಮೃತ ಬಾಲಕನ ತಾಯಿ ಮಾಡಿರುವ ಆರೋಪಗಳು ಸಂಚಲನ ಮೂಡಿಸಿವೆ. ಡಿಸೆಂಬರ್ 3 ರಂದು ಮಧ್ಯಾಹ್ನ 2 ಗಂಟೆಗೆ ಮೆಹರಾಜ್ ಶಾಲೆಯಿಂದ ಹಿಂತಿರುಗಿದ್ದಾನೆ ಎಂದು ತಾಯಿ ಹೇಳಿದ್ದಾರೆ.
ಆ ದಿನ ಅವನಿಗೆ ಟ್ಯೂಷನ್ ಇಲ್ಲದ ಕಾರಣ ಆಟವಾಡಲು ಹೊರಗೆ ಹೋಗಿದ್ದ. ಆದರೆ, ಸ್ವಲ್ಪ ಸಮಯದ ನಂತರ, ಅವನು ತನ್ನ ಎಂದಿನ ಸ್ಥಳದಲ್ಲಿ ಆಟವಾಡುತ್ತಿಲ್ಲ ಎಂದು ಅವಳು ಗಮನಿಸಿದ್ದರು, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು, ಸಂಜೆ 4 ಗಂಟೆಯವರೆಗೆ ಆತ ಕಟ್ಟಡದ ಆವರಣದಲ್ಲಿ ಇರುವುದನ್ನು ತೋರಿಸಿತ್ತು.
ಎಷ್ಟೇ ಹುಡುಕಾಡಿದರೂ ಆತ ಸಿಗಲೇ ಇಲ್ಲ, ಆದ್ದರಿಂದ ಪೊಲೀಸರಿಗೆ ದೂರು ನೀಡಲಾಯಿತು. ಸೋಮವಾರ ಪೊಲೀಸರು ನೀರಿನ ಟ್ಯಾಂಕ್‌ನಿಂದ ಶವವನ್ನು ಹೊರತೆಗೆದಾಗ, ಅದು ತನ್ನ ಮಗನ ಶವವಲ್ಲ ಎಂದು ತಾಯಿ ಹೇಳಿಕೊಂಡಿದ್ದು, ಸಾಕಷ್ಟು ಅನುಮಾನಗಳು ಮೂಡಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:47 am, Tue, 9 December 25