Delhi Bomb Threat: ದೆಹಲಿಯ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ

ದೆಹಲಿಯ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್​​ಗಳು ಬಂದಿವೆ. ಇದು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರನ್ನು ಆತಂಕಕ್ಕೆ ದೂಡಿದೆ. ಮಾಹಿತಿ ಸಿಕ್ಕ ತಕ್ಷಣವೇ ಶೋಧ ತಂಡ ಸ್ಥಳಕ್ಕೆ ತಲುಪಿ ದ್ವಾರಕಾ ಹಾಗೂ ಚಾಣಕ್ಯಪುರಿಯಲ್ಲಿರುವ ಶಾಲೆಗಳಲ್ಲಿ ಶೋಧ ಕಾರ್ಯ ಆರಂಭಿಸಿವೆ.ಚಾಣಕ್ಯಪುರಿಯಲ್ಲಿರುವ ಒಂದು ನೌಕಾ ಶಾಲೆ ಮತ್ತು ದ್ವಾರಕದಲ್ಲಿರುವ ಮತ್ತೊಂದು ಸಿಆರ್‌ಪಿಎಫ್ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಇ-ಮೇಲ್ ಮೂಲಕ ಎರಡು ಶಾಲೆಗಳಿಗೆ ಬೆದರಿಕೆ ಹಾಕಲಾಗಿದೆ. ಇವುಗಳಲ್ಲಿ ಒಂದು ಚಾಣಕ್ಯಪುರಿಯಲ್ಲಿ ಮತ್ತು ಇನ್ನೊಂದು ದ್ವಾರಕಾದಲ್ಲಿದೆ.

Delhi Bomb Threat: ದೆಹಲಿಯ ಎರಡು ಶಾಲೆಗಳಿಗೆ ಬಾಂಬ್ ಬೆದರಿಕೆ
ಶಾಲೆ
Image Credit source: PTI

Updated on: Jul 14, 2025 | 11:12 AM

ನವದೆಹಲಿ, ಜುಲೈ 14: ದೆಹಲಿಯ ಎರಡು ಪ್ರಮುಖ ಶಾಲೆಗಳಿಗೆ ಇಂದು ಬಾಂಬ್ ಬೆದರಿಕೆ(Bomb Threat) ಇ-ಮೇಲ್​​ಗಳು ಬಂದಿವೆ. ಮಾಹಿತಿ ಸಿಕ್ಕ ತಕ್ಷಣವೇ ಶೋಧ ತಂಡ ಸ್ಥಳಕ್ಕೆ ತಲುಪಿ ದ್ವಾರಕಾ ಹಾಗೂ ಚಾಣಕ್ಯಪುರಿಯಲ್ಲಿರುವ ಶಾಲೆಗಳಲ್ಲಿ ಶೋಧ ಕಾರ್ಯ ಆರಂಭಿಸಿವೆ.ಚಾಣಕ್ಯಪುರಿಯಲ್ಲಿರುವ ಒಂದು ನೌಕಾ ಶಾಲೆ ಮತ್ತು ದ್ವಾರಕದಲ್ಲಿರುವ ಮತ್ತೊಂದು ಸಿಆರ್‌ಪಿಎಫ್ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ.

ಇ-ಮೇಲ್ ಮೂಲಕ ಎರಡು ಶಾಲೆಗಳಿಗೆ ಬೆದರಿಕೆ ಹಾಕಲಾಗಿದೆ. ಇವುಗಳಲ್ಲಿ ಒಂದು ಚಾಣಕ್ಯಪುರಿಯಲ್ಲಿ ಮತ್ತು ಇನ್ನೊಂದು ದ್ವಾರಕಾದಲ್ಲಿದೆ. ಶೋಧದ ಸಮಯದಲ್ಲಿ ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ದೆಹಲಿ-ಎನ್​ಸಿಆರ್​​ನಲ್ಲಿರುವ ಎರಡು ಶಾಲೆಗಳು ಮತ್ತು ಸೇಂಟ್ ಸ್ಟೀಫನ್ಸ್​ ಕಾಲೇಜಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ನೋಯ್ಡಾದ ಶಿವ ನಾಡರ್ ಶಾಲೆ, ದೆಹಲಿಯ ಅಲ್ಕಾನ್ ಶಾಲೆಗೆ ಬಾಂಬ್ ಬೆದರಿಕೆಗಳು ಬಂದಿದ್ದವು. ಇದರಿಂದಾಗಿ ಎಲ್ಲಾ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿತ್ತು. ಬಳಿಕ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿರಲಿಲ್ಲ.

ಮತ್ತಷ್ಟು ಓದಿ: ಉಡುಪಿ: ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದಾಕೆ ಕೊನೆಗೂ ಪೊಲೀಸ್ ಬಲೆಗೆ

ಈ ಮಾಹಿತಿಯನ್ನು ನಿಯಂತ್ರಣ ಕೊಠಡಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ನಂತರ ಶಾಲಾ ಆವರಣವನ್ನು ಬಾಂಬ್ ಪತ್ತೆ ಸಿಬ್ಬಂದಿ ಮತ್ತು ನಾಯಿ ನಿರ್ವಾಹಕರು ಪರಿಶೀಲಿಸಿದರು. ಅಸಹಜವಾಗಿ ಏನೂ ಕಂಡುಬಂದಿಲ್ಲ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೋಯ್ಡಾದ ಹಲವಾರು ಖಾಸಗಿ ಶಾಲೆಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದ ನಂತರ ಈ ಬೆಳವಣಿಗೆ ಸಂಭವಿಸಿದೆ. ಆದಾಗ್ಯೂ, ತನಿಖೆಯ ಸಮಯದಲ್ಲಿ, ಶಾಲೆಗೆ ಹೋಗುವುದನ್ನು ತಪ್ಪಿಸಲು ಬಯಸಿದ್ದ 9 ನೇ ತರಗತಿಯ ವಿದ್ಯಾರ್ಥಿಗಳು ಬಾಂಬ್ ಬೆದರಿಕೆ ಕಳುಹಿಸಲಾಗಿದೆ ಎನ್ನುವ ವಿಚಾರವನ್ನು ಪೊಲೀಸರು ಕಂಡುಕೊಂಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ