AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್ ಇಂಡಿಯಾ ಅಪಘಾತ, ತಪ್ಪು ವರದಿ ಕೊಟ್ಟು ಮೃತ ಪೈಲಟ್ ಮೇಲೆ ಆರೋಪ ಹೊರಿಸ್ಬೇಡಿ, ಮೃತರ ಸಂಬಂಧಿಕರ ಮಾತು

ಗುಜರಾತ್​ನ ಅಹಮದಾಬಾದ್​ನಲ್ಲಿ ಜೂನ್ 12ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತ(Air India Plane Crash)ಕ್ಕೆ ಸಂಬಂಧಿಸಿದಂತೆ ಬಂದಿರುವ ಪ್ರಾಥಮಿಕ ವರದಿ ಕುರಿತು ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ತನಿಖೆಯನ್ನು ಟಾಟಾ ಒಡೆತನದ ವಿಮಾನಯಾನ ಸಂಸ್ಥೆ ಹಾಗೂ ಭಾರತ ಸರ್ಕಾರವನ್ನು ರಕ್ಷಿಸುವ ರೀತಿ ತಯಾರಿಸಲಾಗಿದೆ. ಮೃತ ಪೈಲಟ್ ಮೇಲೆ ತಪ್ಪು ಹೊರಿಸಬೇಡಿ ಅವರು ಬಂದು ಆರೋಪವನ್ನು ಸತ್ಯ ಅಲ್ಲ ಎಂದು ಸಾಬೀತು ಮಾಡಲು ಸಾಧ್ಯವಿಲ್ಲ

ಏರ್ ಇಂಡಿಯಾ ಅಪಘಾತ, ತಪ್ಪು ವರದಿ ಕೊಟ್ಟು ಮೃತ ಪೈಲಟ್ ಮೇಲೆ ಆರೋಪ ಹೊರಿಸ್ಬೇಡಿ, ಮೃತರ ಸಂಬಂಧಿಕರ ಮಾತು
ವಿಮಾನ ಅಪಘಾತ
ನಯನಾ ರಾಜೀವ್
|

Updated on: Jul 14, 2025 | 9:55 AM

Share

ಅಹಮದಾಬಾದ್, ಜುಲೈ 14: ಗುಜರಾತ್​ನ ಅಹಮದಾಬಾದ್​ನಲ್ಲಿ ಜೂನ್ 12ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತ(Air India Plane Crash)ಕ್ಕೆ ಸಂಬಂಧಿಸಿದಂತೆ ಬಂದಿರುವ ಪ್ರಾಥಮಿಕ ವರದಿ ಕುರಿತು ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ತನಿಖೆಯನ್ನು ಟಾಟಾ ಒಡೆತನದ ವಿಮಾನಯಾನ ಸಂಸ್ಥೆ ಹಾಗೂ ಭಾರತ ಸರ್ಕಾರವನ್ನು ರಕ್ಷಿಸುವ ರೀತಿ ತಯಾರಿಸಲಾಗಿದೆ. ಮೃತ ಪೈಲಟ್ ಮೇಲೆ ತಪ್ಪು ಹೊರಿಸಬೇಡಿ ಅವರು ಬಂದು ಆರೋಪವನ್ನು ಸತ್ಯ ಅಲ್ಲ ಎಂದು ಸಾಬೀತು ಮಾಡಲು ಸಾಧ್ಯವಿಲ್ಲ, ಈ ವರದಿ ತಪ್ಪು ನಾವು ಅದನ್ನು ಒಪ್ಪುವುದಿಲ್ಲ ಎಂದು ಅಮೀನ್ ಸಿದ್ದಿಕಿ ಹೇಳಿದ್ದಾರೆ. ಇವರು ತಮ್ಮ ಸಂಬಂಧಿ ಅಕೀಲ್ ಕುಟುಂಬವನ್ನು ಅಪಘಾತದಲ್ಲಿ ಕಳೆದುಕೊಂಡಿದ್ದರು.

ಏರ್​ ಇಂಡಿಯಾ ಪರಿಹಾರ ಪ್ರಸ್ತಾಪವನ್ನು ನಾನು ತಿರಸ್ಕರಿಸಿದ್ದೇನೆ, ನಮ್ಮ ಕುಟುಂಬ ಸದಸ್ಯರನ್ನು ಕೊಂದಿದ್ದಕ್ಕಾಗಿ ವಿಮಾನಯಾನ ಸಂಸ್ಥೆಯನ್ನು ನ್ಯಾಯಾಲಯದ ಅಂಗಳಕ್ಕೆ ಕರೆದೊಯ್ಯುವುದಾಗಿ ದಿ ಟೆಲಿಗ್ರಾಫ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 270 ಮಂದಿ ಪ್ರಾಣ ಕಳೆದುಕೊಂಡಿದ್ದರು. ಓರ್ವ ಮಾತ್ರ ಬದುಕುಳಿದಿದ್ದರು. ಜುಲೈ 13ರಂದು ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಅಪಘಾತದ ಪ್ರಾಥಮಿಕ ತನಿಖಾ ವರದಿಯನ್ನು ಎಎಐಬಿ ಬಿಡುಗಡೆ ಮಾಡಿತ್ತು. ವರದಿ ಹೊರಬಂದ ಬಳಿಕ ಅದರಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು. ಆದರೆ ಉತ್ತರಗಳಿಗಿಂತ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಆರಂಭಿಕ ವರದಿಯು ಎಂಜಿನ್ ಅಥವಾ ಬೋಯಿಂಗ್ ವ್ಯವಸ್ಥೆಗಳಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿ ಕ್ಲೀನ್ ಚಿಟ್ ನೀಡಿದೆ.

ಇದನ್ನೂ ಓದಿ
Image
ಏರ್ ಇಂಡಿಯಾ ಅಪಘಾತದಲ್ಲಿ 275 ಮಂದಿ ಸಾವು; ಸರ್ಕಾರದಿಂದ ಅಧಿಕೃತ ಘೋಷಣೆ
Image
ಏರ್ ಇಂಡಿಯಾ ವಿಮಾನಾಪಘಾತಕ್ಕೆ ಮೊದಲು ಸಿಇಒಗೆ ಸಂಬಳ ಹೆಚ್ಚಳ?
Image
ಏರ್ ಇಂಡಿಯಾ ದುರಂತ; ಮೃತರ ಕುಟುಂಬಕ್ಕೆ 6 ಕೋಟಿ ನೆರವು ನೀಡಿದ ಯುಎಇ ವೈದ್ಯ
Image
ಇಂಡಿಗೋ ವಿಮಾನದಲ್ಲಿ ಮೇಡೇ ಘೋಷಿಸಿದ ಪೈಲಟ್; ಬೆಂಗಳೂರಲ್ಲಿ ತುರ್ತು ಭೂಸ್ಪರ್ಶ

ವಿಮಾನ ಟೇಕ್ ಆಫ್ ಆದ ನಂತರ ನಿಜವಾಗಿ ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಇನ್ನೂ ಸರಿಯಾದ ತನಿಖೆ ಅಗತ್ಯವಿದೆ. ಅಪಘಾತದಲ್ಲಿ ಸಾವನ್ನಪ್ಪಿದ್ದ ಫೈಜಾನ್ ರಫೀಕ್ ಅವರ ಸಂಬಂಧಿ ಸಮೀರ್ ಮಾತನಾಡಿ, ವಿಮಾನಯಾನ ಸಂಸ್ಥೆಯುಕಾಕ್​ಪಿಟ್ ರೆಕಾರ್ಡಿಂಗ್ ಅನ್ನು ನಮಗೆ ಒದಗಿಸುವವರೆಗೂ ವರದಿ ನಂಬುವುದಿಲ್ಲ ಎಂದು ಹೇಳಿದ್ದಾರೆ. ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ಪತನಗೊಳ್ಳುವುದಕ್ಕೂ ಮುನ್ನ ಅದರ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುವ ಸ್ವಿಚ್‌ಗಳು ಕಟ್‌ ಆಫ್ ಸ್ಥಿತಿಯಲ್ಲಿ ಇದ್ದವು.

ಮತ್ತಷ್ಟು ಓದಿ: ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನಕ್ಕೆ ಕೊನೆಗೂ ಕಾರಣ ಪತ್ತೆ: ಪ್ರಾಥಮಿಕ ವರದಿಯಲ್ಲಿ ಆಘಾತಕಾರಿ ಅಂಶ

ಇದರಿಂದ ಪೈಲಟ್‌ಗಳು ಗೊಂದಲಕ್ಕೀಡಾಗಿದ್ದರು ಎಂಬ ವಿಷಯ ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ತನಿಖೆಯಿಂದ ಗೊತ್ತಾಗಿತ್ತು. ಈ ಲೋಪದಿಂದಾಗಿ ವಿಮಾನವು ಟೇಕ್‌–ಆಫ್‌ ಆದ ಕೆಲವೇ ಸೆಕೆಂಡ್‌ಗಳಲ್ಲಿ ಕೆಳಗಿಳಿಯಲು ಆರಂಭಿಸಿ, ದುರಂತ ಸಂಭವಿಸಿತು ಎಂದು ಎಎಐಬಿ ಪ್ರಾಥಮಿಕ ತನಿಖಾ ವರದಿ ತಿಳಿಸಿದೆ.

ಬ್ರಿಟನ್‌ನ ವಾಯು ಅಪಘಾತ ತನಿಖಾ ಶಾಖೆ ಮತ್ತು ಅಮೆರಿಕ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ನೆರವಿನಿಂದ ಎಎಐಬಿ ಈ ತನಿಖೆಯನ್ನು ನಡೆಸಿದೆ. ದುರಂತದ ಕುರಿತು 15 ಪುಟಗಳ ವರದಿಯನ್ನು ಅದು ಬಿಡುಗಡೆಗೊಳಿಸಿದ್ದು, ಕೆಲವು ಆಘಾತಕಾರಿ ಮಾಹಿತಿಗಳು ತಿಳಿದುಬಂದಿವೆ. ವಿಮಾನ ಟೇಕ್‌–ಆಫ್‌ ಆದ ಮೂರೇ ಸೆಕೆಂಡ್‌ಗಳಲ್ಲಿ ಎರಡೂ ಎಂಜಿನ್‌ಗಳ ಇಂಧನ ಪೂರೈಕೆ ಸ್ವಿಚ್‌ಗಳು, ಇದ್ದಕ್ಕಿದ್ದಂತೆ ರನ್‌ ಮೋಡ್‌ನಿಂದ ಕಟ್‌ಆಫ್‌ ಮೋಡ್‌ಗೆ ಬದಲಾದವು.

ಇದು ಕೇವಲ ಒಂದು ಸೆಕೆಂಡ್‌ನಲ್ಲಿ ಸಂಭವಿಸಿದೆ. ಎಂಜಿನ್‌ಗಳಿಗೆ ಇಂಧನ ಪೂರೈಕೆ ನಿಂತಿದ್ದರಿಂದ ಅವು ಕಾರ್ಯವನ್ನು ಸ್ಥಗಿತಗೊಳಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಎಂಜಿನ್‌ಗಳನ್ನು ಪುನಃ ಆನ್‌ ಮಾಡಲು ಪೈಲಟ್‌ಗಳು ಪ್ರಯತ್ನಿಸಿದ್ದಾರೆ. ಆಗ ಎಂಜಿನ್‌ 1ರಲ್ಲಿ ಭಾಗಶಃ ಚೇತರಿಕೆ ಕಂಡುಬಂದಿದೆ. ಆದರೆ ಎಂಜಿನ್‌ 2ರಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಇದರಿಂದ ಈ ಪ್ರಯತ್ನ ವಿಫಲವಾಗಿದೆ. ಆದರೆ ಈ ವರದಿಯನ್ನು ಮೃತರ ಸಂಬಂಧಿಕರು ನಿರಾಕರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ