ನಾನ್ಯಾಕೆ ಪಕ್ಷ ತ್ಯಜಿಸಲಿ, ಬೇಕಾದ್ರೆ ನನ್ನನ್ನು ಹೊರಹಾಕಲಿ-ಪಂಕಜಾ ಮುಂಡೆ

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸೋಕೆ ನಾನಾ ಪಟ್ಟು.. ತಂತ್ರ.. ಕಸರತ್ತು ಅನುಸರಿಸಿದ್ದ ಬಿಜೆಪಿ ಕೈ ಚೆಲ್ಲಿ ಕೂತಿದೆ.. ಮಹಾ ಹೋರಾಟ ಮಾಡಿ ಕೊನೆಗೆ ಹೌಹಾರಿದ್ದ ಕಮಲ ಪಡೆಗೆ ಶಿವಸೇನೆ ಹಾಗೂ ಎನ್​ಸಿಪಿ ಕೊಟ್ಟಿರೋ ಏನು ಇನ್ನೂ ಮಾಸಿಲ್ಲ. ಇದೀಗ ಬಿಜೆಪಿ ಪಾಳಯದಲ್ಲಿ ಆಂತರಿಕ ಕಚ್ಚಾಟ ಅನ್ನೋದು ಬೆಂಕಿಯಂತೆ ಜ್ವಲಿಸ್ತಿದೆ. ಮಹಾರಾಷ್ಟ್ರ ಬಿಜೆಪಿಯಲ್ಲಿ ಜೋರಾಯ್ತು ಆಂತರಿಕ ಕಿತ್ತಾಟ..! ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅದೇನ್ ರಣತಂತ್ರ ರೂಪಿಸಿದ್ರು ಸರ್ಕಾರ ರಚಿಸೋ ಗದ್ದುಗೆ ಏರೋ ಅವಕಾಶ ಸಿಗ್ಲೇ ಇಲ್ಲ. ಇದೀಗ ಮಹಾ […]

ನಾನ್ಯಾಕೆ ಪಕ್ಷ ತ್ಯಜಿಸಲಿ, ಬೇಕಾದ್ರೆ ನನ್ನನ್ನು ಹೊರಹಾಕಲಿ-ಪಂಕಜಾ ಮುಂಡೆ
Follow us
ಸಾಧು ಶ್ರೀನಾಥ್​
|

Updated on:Dec 13, 2019 | 7:34 AM

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸೋಕೆ ನಾನಾ ಪಟ್ಟು.. ತಂತ್ರ.. ಕಸರತ್ತು ಅನುಸರಿಸಿದ್ದ ಬಿಜೆಪಿ ಕೈ ಚೆಲ್ಲಿ ಕೂತಿದೆ.. ಮಹಾ ಹೋರಾಟ ಮಾಡಿ ಕೊನೆಗೆ ಹೌಹಾರಿದ್ದ ಕಮಲ ಪಡೆಗೆ ಶಿವಸೇನೆ ಹಾಗೂ ಎನ್​ಸಿಪಿ ಕೊಟ್ಟಿರೋ ಏನು ಇನ್ನೂ ಮಾಸಿಲ್ಲ. ಇದೀಗ ಬಿಜೆಪಿ ಪಾಳಯದಲ್ಲಿ ಆಂತರಿಕ ಕಚ್ಚಾಟ ಅನ್ನೋದು ಬೆಂಕಿಯಂತೆ ಜ್ವಲಿಸ್ತಿದೆ.

ಮಹಾರಾಷ್ಟ್ರ ಬಿಜೆಪಿಯಲ್ಲಿ ಜೋರಾಯ್ತು ಆಂತರಿಕ ಕಿತ್ತಾಟ..! ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅದೇನ್ ರಣತಂತ್ರ ರೂಪಿಸಿದ್ರು ಸರ್ಕಾರ ರಚಿಸೋ ಗದ್ದುಗೆ ಏರೋ ಅವಕಾಶ ಸಿಗ್ಲೇ ಇಲ್ಲ. ಇದೀಗ ಮಹಾ ಬಿಜೆಪಿ ಪಾಳಯದ ಒಳಬೇಗುದಿ ಹೊರ ಬಿದ್ದಿದ್ದು ಆಂತರಿಕ ಕಚ್ಚಾಟ ತಾರಕಕ್ಕೇರಿದೆ. ಮಾಜಿ ಸಚಿವೆ ಪಂಕಜಾ ಮುಂಡೆ ಬಿಜೆಪಿ ತ್ಯಜಿಸುತ್ತಾರೆ ಅನ್ನೋ ಸುದ್ದಿ ಕೆಲ ದಿನಗಳ ಹಿಂದೆ ಸುಳಿದಾಡ್ತಿತ್ತು. ಆದ್ರೀಗ ಪಂಕಜಾ ಮುಂಡೆ ಅಧಿಕೃತ ಸ್ಪಷ್ಟನೆ ನೀಡಿದ್ದು, ನಾನ್ಯಾಕೆ ಪಕ್ಷ ತ್ಯಜಿಸಲಿ. ಬೇಕಾದ್ರೆ ನನ್ನನ್ನು ಹೊರಹಾಕಲಿ. ಈ ಬಗ್ಗೆ ಪಕ್ಷವೇ ತೀರ್ಮಾನ ಕೈಗೊಳ್ಳಲಿ ಅಂತಾ ಸಿಡಿದೆದ್ದಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿ ಸಿಡಿದೆದ್ದಿರೋ ಪಂಕಜಾ ಮುಂಡೆ ಭೀಡ್ ಜಿಲ್ಲೆಯ ಪರ್ಲಿ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ತಮ್ಮ ವಿರುದ್ಧ ಸ್ಪರ್ಧಿಸದೇ ಇದ್ದಿದ್ದರೇ ತಾವು ಸೋಲುತ್ತಿರಲಿಲ್ಲ. ತಮ್ಮ ಎದುರಾಳಿ ಧನಂಜಯ ಮುಂಡೆ, ಬಿಜೆಪಿ ಸರ್ಕಾರದ ಕೆಲವರು ಸಹಾಯ ಮಾಡಿದ್ದಾರೆ ಅಂತಾ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ವಿರುದ್ಧ ಮಾಜಿ ಸಚಿವೆ ಪಂಕಜಾ ಮುಂಡೆ, ಏಕನಾಥ್ ಖಡ್ಸೆ, ವಿನೋದ್ ತಾವಡೆ, ಚಂದ್ರಶೇಖರ್ ಭವನಕುಲೆ, ಪ್ರಕಾಶ್ ಮೆಹ್ತಾ ಸೇರಿದಂತೆ ಅನೇಕರರು ಅಸಮಾಧಾನಗೊಂಡಿದ್ದಾರೆ.

ಕೆಲವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಗಿತ್ತು. ಹೀಗೆ, ಬಿಜೆಪಿ ಹೈಕಮಾಂಡ್ ತಮಗೆ ಟಿಕೆಟ್ ನಿರಾಕರಿಸಿಲ್ಲ. ಮುಂಬೈನಲ್ಲಿ ಕುಳಿತುಕೊಂಡೇ ದೇವೇಂದ್ರ ಫಡ್ನವೀಸ್ ತಮಗೆ ಟಿಕೆಟ್ ನಿರಾಕರಿಸಿದ್ರು ಅಂತಾ ಸ್ಫೋಟಕ ಮಾಹಿತಿ ಹೊರಹಾಕಿರೋದು ಬಿಜೆಪಿ ಪಾಳಯದಲ್ಲಿ ಸುನಾಮಿ ಎಬ್ಬಿಸಿದೆ. ಅಂದು ಕಮಲ ಪಾಳಯದಲ್ಲಿ ಸಿಡಿದೆದ್ದಿದ್ದ ತಂದೆ ಗೋಪಿನಾಥ್ ಮುಂಡೆ ಹಾದಿಯಲ್ಲೇ ಪಂಕಜಾ ಮುಂದೆ ಸಾಗ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬೆಂಬಲ ಸಿಗದೆ ಪರದಾಡಿರೋ ಬಿಜೆಪಿಗೆ ಇದೀಗ ಪಂಕಜಾ ಬಿಗ್ ಶಾಕ್ ನೀಡಿದ್ದಾರೆ.

Published On - 7:34 am, Fri, 13 December 19

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ