Amritpal Singh: ಪಾಪಲ್ ಪ್ರೀತ್ ಅಡ್ಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ಡೇರಾದಲ್ಲಿ ಅಡಗಿದ್ದಾರೆಯೇ ಅಮೃತಪಾಲ್ ಸಿಂಗ್?

|

Updated on: Apr 01, 2023 | 3:26 PM

ಅಮೃತಪಾಲ್ ಸಿಂಗ್ ಅವರ ಸಹಾಯಕ ಎಂದು ಹೇಳಲಾದ ಜೋಗಾ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ಸುದ್ದಿ ಮಾಡಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಅದರ ಬಗ್ಗೆ ಯಾವುದೇ ಮಾಹಿತಿಯನ್ನು ನಿರಾಕರಿಸಿದರು

Amritpal Singh: ಪಾಪಲ್ ಪ್ರೀತ್ ಅಡ್ಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ; ಡೇರಾದಲ್ಲಿ ಅಡಗಿದ್ದಾರೆಯೇ ಅಮೃತಪಾಲ್ ಸಿಂಗ್?
ಪಾಪಲ್​​ಪ್ರೀತ್ ಸಿಂಗ್
Follow us on

ಪಂಜಾಬ್ ಪೊಲೀಸರು (Punjab Police) ಖಲಿಸ್ತಾನಿ ಪರ ನಾಯಕ ಅಮೃತಪಾಲ್ ಸಿಂಗ್​​ಗಾಗಿ (Amritpal Singh) ಹುಡುಕಾಟ ಮುಂದುವರಿಸಿದ್ದು ಇದೀಗ ದೇರಾ ಮತ್ತು ಹೋಶಿಯಾರ್‌ಪುರ (Hoshiarpur) ಜಿಲ್ಲೆಯಲ್ಲಿನ ಸಂಭಾವ್ಯ ಅಡಗುತಾಣಗಳಿಗೆ ಶೋಧ ಕಾರ್ಯ ವಿಸ್ತರಿಸಿದ್ದಾರೆ. ಪೊಲೀಸರು ಮೂರು ದಿನಗಳ ಹಿಂದೆ ಅಮೃತಪಾಲ್ ಇರುವ ಕಾರು ಎಂದು ಶಂಕಿಸಲಾಗಿದ್ದ ಕಾರನ್ನು ಬೆನ್ನಟ್ಟಿದ್ದು ಆ ಕಾರು ಮಾರ್ಗ ಮಧ್ಯೆ ಬಿಟ್ಟು ಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಮೃತಪಾಲ್ ಸಿಂಗ್ ಮಾರ್ಚ್ 18 ರಂದು ವಾರಿಸ್ ಪಂಜಾಬ್ ದೇ ಮೇಲೆ ಪೊಲೀಸ್ ದಬ್ಬಾಳಿಕೆ ನಡೆಸಿದಾಗಿನಿಂದ ಓಡಿಹೋಗಿದ್ದಾರೆ. ಆದಾಗ್ಯೂ, ಅವರು ಕಳೆದ ಮೂರು ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾದ ಎರಡು ಉದ್ದೇಶಿತ ವಿಡಿಯೊಗಳು ಮತ್ತು ಆಡಿಯೊ ಕ್ಲಿಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಮೃತಪಾಲ್ ಸಿಂಗ್ ಮತ್ತು ಪಾಪಲ್‌ಪ್ರೀತ್ ಸಿಂಗ್ ಕುರಿತು ಈವರೆಗೆನ ಅಪ್​​ಡೇಟ್ಸ್

  1. ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಇರಿಸಲಾಗಿದೆ. ಮರ್ನಾಯನ್ ಮತ್ತು ಹರ್ಖೋವಲ್, ಬೀಬಿ ಡಿ ಪಂಡೋರಿ ಮತ್ತು ಬಸ್ಸಿ ಸೇರಿದಂತೆ ಹತ್ತಿರದ ಹಳ್ಳಿಗಳಲ್ಲಿ ಎಲ್ಲಾ ವಾಹನಗಳ ಸಂಪೂರ್ಣ ಶೋಧ ನಡೆಯುತ್ತಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
  2.  ಪೊಲೀಸ್ ಅಧಿಕಾರಿಗಳು ಡೇರಾಗಳು, ವಸತಿ ಸ್ಥಳಗಳು, ಕೊಳವೆಬಾವಿಗಳ ಬಳಿ ಸ್ಥಾಪಿಸಲಾದ ಸಣ್ಣ ಕೊಠಡಿಗಳು ಮತ್ತು ಹಲವಾರು ಹಳ್ಳಿಗಳಲ್ಲಿ ಪ್ರಾಣಿಗಳಿಗೆ ಆಶ್ರಯವನ್ನು ಸಹ ಹುಡುಕುತ್ತಿದ್ದಾರೆ. ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ ಎಂದು ಹೋಶಿಯಾರ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸರ್ತಾಜ್ ಸಿಂಗ್ ಚಾಹಲ್ ಹೇಳಿದ್ದಾರೆ.
  3. ಅಮೃತಪಾಲ್ ಸಿಂಗ್ ಅವರ ಸಹಾಯಕ ಎಂದು ಹೇಳಲಾದ ಜೋಗಾ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ಸುದ್ದಿ ಮಾಡಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಅದರ ಬಗ್ಗೆ ಯಾವುದೇ ಮಾಹಿತಿಯನ್ನು ನಿರಾಕರಿಸಿದರು.
  4. ಇತ್ತೀಚಿನ ವಿಡಿಯೊದಲ್ಲಿ ಅಮೃತಪಾಲ್ ಸಿಂಗ್ ಅವರು ಪಲಾಯನವಾದಿ ಅಲ್ಲ ಮತ್ತು ಶೀಘ್ರದಲ್ಲೇ ಪ್ರಪಂಚದ ಮುಂದೆ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಆಡಿಯೋ ಕ್ಲಿಪ್‌ನಲ್ಲಿ, ಅವರು ತಾನು ಶರಣಾಗತಿ ಬಗ್ಗೆ ಮಾತುಕತೆ ನಡೆಸುತ್ತಿದ್ದೇನೆ ಎಂಬ ವದಂತಿಯನ್ನು ತಳ್ಳಿ ಹಾಕಿದ್ದಾರೆ.
  5. ಏತನ್ಮಧ್ಯೆ, ಮಾರ್ಚ್ 29 ರಂದು ಬೆಳಿಗ್ಗೆ ಡೇರಾದ ಮತ್ತು ಸಂಪರ್ಕ ರಸ್ತೆಗಳ ಕಾಂಪೌಂಡ್‌ನೊಳಗೆ ಪಾಪಲ್‌ಪ್ರೀತ್ ಆಕಸ್ಮಿಕವಾಗಿ ನಡೆದುಕೊಂಡು ಹೋಗುತ್ತಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪಂಜಾಬ್ ಪೊಲೀಸರು ಸಂಗ್ರಹಿಸಿದ್ದಾರೆ.
  6. ಆ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ಚಲನವಲನವನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ಡ್ರೋನ್‌ಗಳನ್ನು ಬಳಸಿವೆ. ಆದರೆ ಅದು ತಡವಾಗಿರಬಹುದು ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.
  7. ಪಾಪಲ್ ಪ್ರೀತ್ ಮತ್ತು ಜೋಗಾ ಸಿಂಗ್ ಸಾಹ್ನೆವಾಲ್ ಕಡೆಗೆ ತೆರಳಿದ್ದರು ಎಂದು ವರದಿಯಾಗಿದೆ. ಇಲ್ಲಿಯೂ ಅವರು ಗುರುದ್ವಾರದಲ್ಲಿ ನಿಂತಿದ್ದರು.
  8. ಓಡಿಹೋಗುವಾಗ ಅಮೃತಪಾಲ್ ಪಾಪಲ್ ಪ್ರೀತ್ ಜೊತೆ ಸೇರಲು ಸಾಧ್ಯವಾಗದ ಕಾರಣ, ಅವರು ತಮ್ಮ ಆಡಿಯೊ ಮತ್ತು ವಿಡಿಯೊ ಸಂದೇಶಗಳನ್ನು ಬಿಡುಗಡೆ ಮಾಡುತ್ತಿದ್ದರು ಎಂದು ವರದಿಯಾಗಿದೆ. ಅಮೃತಪಾಲ್ ಅವರು ಕೆಲವು ಸ್ಥಳದಲ್ಲಿ ಒಬ್ಬಂಟಿಯಾಗಿರುವ ಕಾರಣ ಸೆಲ್ಫಿ ಮೋಡ್‌ನಲ್ಲಿ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Sat, 1 April 23