ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕರಾಗಿ ಪರಮೇಶ್ವರನ್ ನಂಬೂದಿರಿ ನೇಮಕ

ಇವರ ಮಗ ನಾರಾಯಣ ನಂಬೂದಿರಿ ಕರ್ನಾಟಕದ ಧಾರವಾಡ ಐಐಟಿಯಲ್ಲಿ ವಿದ್ಯಾರ್ಥಿ

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕರಾಗಿ ಪರಮೇಶ್ವರನ್ ನಂಬೂದಿರಿ ನೇಮಕ
ಶಬರಿಮಲೆ ಅಯ್ಯಪ್ಪ ದೇಗುಲದ ಪ್ರಧಾನ ಅರ್ಚಕರಾಗಿ ನಿಯುಕ್ತರಾಗಿರುವ ಪರಮೇಶ್ವರನ್ ನಂಬೂದಿರಿ

ತಿರುವನಂತಪುರ: ಪ್ರಸಿದ್ಧ ಯಾತ್ರಾ ಕೇಂದ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕರಾಗಿ ಮಾವೆಲಿಕ್ಕರದ ಎನ್. ಪರಮೇಶ್ವರನ್ ನಂಬೂದಿರಿ ಅವರನ್ನು ನೇಮಿಸಲಾಗಿದೆ. ನ.16ರಿಂದ ಮುಂದಿನ ಒಂದು ವರ್ಷದ ಅವಧಿಗೆ ಪರಮೇಶ್ವರನ್ ನಂಬೂದಿರಿ ಅಯ್ಯಪ್ಪ ದೇಗುಲದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಲಿದ್ದಾರೆ. ಮಲ್ಲಿಕಾಪುರಂ ದೇವಿ ದೇಗುಲದ ಪ್ರಧಾನ ಅರ್ಚಕರಾಗಿ ಶಂಭು ನಂಬೂದಿರಿ ನಿಯುಕ್ತರಾಗಿದ್ದಾರೆ. ಪ್ರಧಾನ ಅರ್ಚಕರ ಆಯ್ಕೆ ಭಾನುವಾರ ಬೆಳಗ್ಗೆ ದೇವಾಲಯದ ಸೋಪಾನಂನಲ್ಲಿ ಡ್ರಾ ಮೂಲಕ ನಡೆಯಿತು ಎಂದು ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಹೇಳಿದೆ.

ನಾರಾಯಣ ನಂಬೂದಿರಿ ಮತ್ತು ಸುಭದ್ರಾ ಅಂತರ್ಜಾನಂ ಅವರ ಮಗನಾದ ಪರಮೇಶ್ವರ ನಂಬೂದಿರಿ ಪ್ರಸ್ತುತ ಅಲಪ್ಪುಳ ಜಿಲ್ಲೆಯ ಏವೂರ್​ನ ಶ್ರೀ ಕೃಷ್ಣಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಪಂಪ ಮಹಾ ಗಣಪತಿ ದೇಗುಲ, ಚೆಟ್ಟಿಕುಲ ದೇವಾಲಯಗಳಲ್ಲಿಯೂ ಅವರು ಈ ಹಿಂದೆ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.

ಪರಮೇಶ್ವರ ನಂಬೂದಿರಿ ಅವರ ಪತ್ನಿ ಉಮಾದೇವಿ ಅಂತರ್ಜಾನಂ ಇನ್​ಫ್ಯಾಂಟ್ ಜೀಸಸ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಮಗ ನಾರಾಯಣ ನಂಬೂದಿರಿ ಕರ್ನಾಟಕದ ಧಾರವಾಡ ಐಐಟಿಯಲ್ಲಿ ವಿದ್ಯಾರ್ಥಿ.

ಪ್ರವಾಹದ ಆತಂಕ: ಶಬರಿಮಲೆ ಭೇಟಿ ಮೂಂದೂಡಿ ಎಂದ ಕೇರಳ ಸರ್ಕಾರ
ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಭಾನುವಾರವೂ (ಅ.17) ಮಳೆ ಮುಂದುವರಿದಿದೆ. ಸೋಮವಾರವೂ ವ್ಯಾಪಕವಾಗಿ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿರುವುದರಿಂದ ಭಕ್ತರು ಶಬರಿಮಲೆ ಭೇಟಿಯನ್ನು ಮುಂದೂಡುವುದು ಒಳಿತು ಎಂದು ಕೇರಳ ಸರ್ಕಾರದ ಟ್ರಾವಂಕೋರ್ ದೇವಸ್ವಂ ಮಂಡಳಿ ಸಲಹೆ ಮಾಡಿದೆ.

ಇದನ್ನೂ ಓದಿ: ಕೇರಳ ಮುಖ್ಯಮಂತ್ರಿ ಪಿಣರಯಿ ವಿಜಯನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ: ಮಳೆ, ಭೂಕುಸಿತದಿಂದ ಮೃತಪಟ್ಟವರಿಗೆ ಸಂತಾಪ
ಇದನ್ನೂ ಓದಿ: Kerala Rain Updates: ಕೇರಳದಲ್ಲಿ ಧಾರಾಕಾರ ಮಳೆ; ಇದುವರೆಗೆ 18 ಮಂದಿ ಸಾವು, ಸೇನೆಯಿಂದ ಸಹಾಯಬೇಕೆಂದ ಪಿಣರಾಯಿ ವಿಜಯನ್​

Click on your DTH Provider to Add TV9 Kannada