Parliament Winter Session ಸಂಸದರ ಅಮಾನತು ಖಂಡಿಸಿ ವಿಪಕ್ಷ ಪ್ರತಿಭಟನೆ, ಈಗ ಕ್ಷಮೆ ಕೇಳಿದರೂ ಅಮಾನತು ಹಿಂಪಡೆಯಲು ಸಿದ್ಧ ಎಂದ ಪ್ರಹ್ಲಾದ ಜೋಶಿ

| Updated By: ರಶ್ಮಿ ಕಲ್ಲಕಟ್ಟ

Updated on: Dec 07, 2021 | 12:45 PM

ಅವರು (ಸಂಸದರು) ಈಗ  ಕ್ಷಮೆಯಾಚಿಸಿದರೂ  ನಾವು ಅಮಾನತು ಹಿಂಪಡೆಯಲು ಸಿದ್ಧರಿದ್ದೇವೆ" ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ

Parliament Winter Session ಸಂಸದರ ಅಮಾನತು ಖಂಡಿಸಿ ವಿಪಕ್ಷ ಪ್ರತಿಭಟನೆ, ಈಗ ಕ್ಷಮೆ ಕೇಳಿದರೂ ಅಮಾನತು ಹಿಂಪಡೆಯಲು ಸಿದ್ಧ ಎಂದ ಪ್ರಹ್ಲಾದ ಜೋಶಿ
ಸಂಸತ್ ಹೊರಗಡೆ ವಿಪಕ್ಷದ ಸಂಸದರ ಪ್ರತಿಭಟನೆ
Follow us on

ದೆಹಲಿ: 12 ಸಂಸದರ ಅಮಾನತು ಹಿಂಪಡೆಯುವಂತೆ ಪ್ರತಿಪಕ್ಷಗಳು ಒತ್ತಾಯಿಸಿದ್ದರಿಂದ ರಾಜ್ಯಸಭೆ (Rajya Sabha) ಆರಂಭವಾದ ಕೆಲವೇ ಕ್ಷಣಗಳಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಇದಕ್ಕೂ ಮುನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸಂಸದರು ಈಗ ಕ್ಷಮೆಯಾಚಿಸಿದರೆ, ನಾವು ಅಮಾನತು ಹಿಂಪಡೆಯಲು ಸಿದ್ಧರಿದ್ದೇವೆ” ಎಂದು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.  ಕೃಷಿ ಕಾನೂನುಗಳ (Farm Laws) ವಿರುದ್ಧ ವರ್ಷವಿಡೀ ನಡೆದ ಆಂದೋಲನದ ವೇಳೆ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಲೋಕಸಭೆಯಲ್ಲಿ ಮುಂದೂಡಿಕೆ ನೋಟಿಸ್ ನೀಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಅದೇ ರೀತಿ ಕಾಂಗ್ರೆಸ್ ಸಂಸದ ದೀಪೇಂದರ್ ಸಿಂಗ್ ಹೂಡಾ ಅವರು ರೈತರಿಗೆ ಪರಿಹಾರ, ಎಂಎಸ್‌ಪಿ ಮೇಲಿನ ಕಾನೂನು ಮತ್ತು ಆಂದೋಲನದ ಸಮಯದಲ್ಲಿ ಅವರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಕುರಿತು ರಾಜ್ಯಸಭೆಯಲ್ಲಿ ಮುಂದೂಡಿಕೆ ನೋಟಿಸ್ ನೀಡಿದರು. ಏತನ್ಮಧ್ಯೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಅರುಣಾಚಲ ಪ್ರದೇಶ ಮತ್ತು ಡೋಕ್ಲಾಂನಲ್ಲಿ ಚೀನಾದ ಅಕ್ರಮಗಳ ಬಗ್ಗೆ ಕೆಳಮನೆಯಲ್ಲಿ ಮುದೂಡಿಕೆ ನೋಟಿಸ್ ಸಲ್ಲಿಸಿದರು.

ಸೋಮವಾರ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಕಾರ್ಯಾಚರಣೆಯಲ್ಲಿ 14 ನಾಗರಿಕರು ಸಾವನ್ನಪ್ಪಿದ ನಂತರ ನಾಗಾಲ್ಯಾಂಡ್‌ನಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (AFSPA) ಯನ್ನು ನಿಷ್ಪಕ್ಷಪಾತ ತನಿಖೆಗಾಗಿ ಪ್ರತಿಪಕ್ಷಗಳು ಒತ್ತಾಯಿಸಿವೆ. ಉಭಯ ಸದನಗಳಲ್ಲಿ ಒಂದೇ ರೀತಿಯ ಹೇಳಿಕೆಗಳಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘಟನೆಯನ್ನು “ತಪ್ಪಾದ ಗುರುತಿನ ಪ್ರಕರಣ” ಎಂದು ಕರೆದರು. “ಬಂಡುಕೋರರ ವಿರುದ್ಧ ಕಾರ್ಯಾಚರಣೆಯನ್ನು ಕೈಗೊಳ್ಳುವಾಗ ಭವಿಷ್ಯದಲ್ಲಿ ಅಂತಹ ಯಾವುದೇ ದುರದೃಷ್ಟಕರ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು” ಎಲ್ಲಾ ಸಂಸ್ಥೆಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಇತರ ಸಂಸದರು ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಅಮಾನತುಗೊಂಡ ಸಂಸದರನ್ನು ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ “ತನಾಶಾಹಿ ನಹಿ ಚಲೇಗಿ” (ಸರ್ವಾಧಿಕಾರವನ್ನು ಸಹಿಸುವುದಿಲ್ಲ) ಮತ್ತು “ಮೋದಿ-ಶಾಹಿ ನಹಿ ಚಲೇಗಿ” ಎಂಬ ಘೋಷಣೆಗಳು ಮೊಳಗಿದವು.


ಮಧ್ಯಾಹ್ನ 2 ಗಂಟೆವರೆಗೆ ರಾಜ್ಯಸಭೆ ಮುಂದೂಡಿಕೆ
12 ಸಂಸದರ ಅಮಾನತು ಹಿಂಪಡೆಯುವಂತೆ ಪ್ರತಿಪಕ್ಷಗಳು ಒತ್ತಾಯಿಸಿದ್ದರಿಂದ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ಕ್ಷಮಿಸಿ ಎಂದು ಹೇಳಿದರೆ ಅಮಾನತು ಹಿಂಪಡೆಯಲು ಸಿದ್ಧ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
“ಅವರು (ಸಂಸದರು) ಈಗ  ಕ್ಷಮೆಯಾಚಿಸಿದರೂ  ನಾವು ಅಮಾನತು ಹಿಂಪಡೆಯಲು ಸಿದ್ಧರಿದ್ದೇವೆ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಬಿಜೆಪಿ ಸಂಸದೀಯ ಸಭೆಯ ನಂತರ ಮಾತನಾಡಿದ ಸಚಿವರು, “ಅವರನ್ನು ಏಕೆ ಅಮಾನತುಗೊಳಿಸಲಾಯಿತು ಎಂದು ನಾವು ವಿವರಿಸಿದ್ದೇವೆ. ಏನು ನಡೆದರೂ ದೇಶವು ಸಾಕ್ಷಿಯಾಗಿದೆ. ಅದು ದಾಖಲೆಯಲ್ಲಿದೆ” ಎಂದು ಹೇಳಿದರು.

ಟಿಆರ್‌ಎಸ್ ನಿಂದ ಅಧಿವೇಶನ ಬಹಿಷ್ಕಾರ
ಎಎನ್‌ಐ ಪ್ರಕಾರ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮಂಗಳವಾರದ ಸಂಪೂರ್ಣ ಸಂಸತ್ ಅಧಿವೇಶನವನ್ನು ಬಹಿಷ್ಕರಿಸಲಿದೆ. ಭತ್ತ ಖರೀದಿ ಮತ್ತು 12 ಸಂಸದರ ಅಮಾನತು ವಿಚಾರವಾಗಿ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ ನಂತರ ಪಕ್ಷವು ಔಪಚಾರಿಕ ಘೋಷಣೆ ಮಾಡಲಿದೆ. “ಕೇಂದ್ರ ಸರ್ಕಾರದ ತಾರತಮ್ಯದ ಬೆಳೆ ಖರೀದಿ ನೀತಿ ಮತ್ತು ತೆಲಂಗಾಣದಿಂದ ಬೆಳೆಗಳನ್ನು ಖರೀದಿಸದಿರುವಿಕೆ” ಕುರಿತು ಟಿಆರ್‌ಎಸ್ ಸಂಸದ ಕೆ.ಕೇಶವ ರಾವ್ ಅವರು ಮೇಲ್ಮನೆಯಲ್ಲಿ ಮುಂದೂಡಿಕೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:  Mullaperiyar Dam ರಾತ್ರೋರಾತ್ರಿ ಮುಲ್ಲಪೆರಿಯಾರ್ ಅಣೆಕಟ್ಟು ಶಟರ್ ತೆರೆದ ತಮಿಳುನಾಡು; ಸುಪ್ರೀಂ ಮೊರೆ ಹೋಗಲು ಕೇರಳ ಸಜ್ಜು, ಏನಿದು ವಿವಾದ?

Published On - 12:38 pm, Tue, 7 December 21