AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pawan Kalyan DCM: ಪವನ್ ಕಲ್ಯಾಣ್​​​​​​ ಆಂಧ್ರದ ಉಪ ಮುಖ್ಯಮಂತ್ರಿ, ಜತೆಗೆ ನಾಲ್ಕು ಹೆಚ್ಚುವರಿ ಖಾತೆ

ಪವನ್​​ ಕಲ್ಯಾಣ್​​​ ಆಂಧ್ರದ ಉಪಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಾರೆ. ಜನಸೇನಾ ಪಕ್ಷದ ಮುಖ್ಯಸ್ಥರಾಗಿರುವ ಪವನ್​​​, ಚಂದ್ರಬಾಬು ನಾಯ್ಡು ಸರ್ಕಾರಕ್ಕೆ ಬೆಂಬಲ ನೀಡಿದರು. ಇದೀಗ ಅವರ ಜತೆಗೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ಇದರ ಜತೆಗೆ ಬಿಜೆಪಿ ಕೂಡ ಒಂದು ಸಚಿವ ಸ್ಥಾನವನ್ನು ಪಡೆದುಕೊಂಡಿದೆ. ಪವನ್​​ಗೆ ಡಿಸಿಎಂ ಜತೆಗೆ ನಾಲ್ಕು ಹೆಚ್ಚುವರಿ ಖಾತೆಯನ್ನು ನೀಡಲಾಗಿದೆ.

Pawan Kalyan DCM: ಪವನ್ ಕಲ್ಯಾಣ್​​​​​​ ಆಂಧ್ರದ ಉಪ ಮುಖ್ಯಮಂತ್ರಿ, ಜತೆಗೆ ನಾಲ್ಕು ಹೆಚ್ಚುವರಿ ಖಾತೆ
ಅಕ್ಷಯ್​ ಪಲ್ಲಮಜಲು​​
|

Updated on:Jun 15, 2024 | 10:06 AM

Share

ಅಮರಾವತಿ, ಜೂ.15: ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು (chandrababu naidu) ನಾಯಕತ್ವದಲ್ಲಿ ಸರ್ಕಾರ ರಚನೆ ಆಗಿದೆ. ಈಗಾಗಲೇ ಸರ್ಕಾರದ ನೂತನ ಸಚಿವರಿಗೆ ಖಾತೆಯನ್ನು ಹಂಚಿಕೆ ಮಾಡಲಾಗಿದೆ, ಚಂದ್ರಬಾಬು ನಾಯ್ಡು ಸರ್ಕಾರಕ್ಕೆ ಬೆಂಬಲ ನೀಡಿದ ಜನಸೇನಾ ಪಕ್ಷದ ಮುಖ್ಯಸ್ಥ ಪವನ್​​ ಕಲ್ಯಾಣ್ (pawan kalyan)​​​ ಅವರು ಆಂಧ್ರದ ಉಪಮುಖ್ಯಮಂತ್ರಿಯಾಗಿ ನೇಮಕಾಗೊಂಡಿದ್ದಾರೆ. ಇದರ ಜತೆಗೆ ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ನೀರು ಸರಬರಾಜು ಖಾತೆಗಳೊಂದಿಗೆ ಪರಿಸರ ಮತ್ತು ಅರಣ್ಯ, ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಹೆಚ್ಚುವರಿ ಸ್ಥಾನವನ್ನು ನೀಡಲಾಗಿದೆ.

ಚಂದ್ರಬಾಬು ನಾಯ್ಡು ಸರ್ಕಾರ ಶುಕ್ರವಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಪವನ್ ಕಲ್ಯಾಣ್ ಕೂಡ ಒಬ್ಬರು. ಪವನ್ ಮೊದಲ ಬಾರಿಗೆ ಪಿಠಾಪುರಂದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 2014 ಮತ್ತು 2019 ರ ನಡುವೆ ಟಿಡಿಪಿ ಸರ್ಕಾರದಲ್ಲಿ ಸಚಿವರಾಗಿದ್ದ ನಾರಾಯಣ ಗ್ರೂಪ್ ಆಫ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ ಪಿ ನಾರಾಯಣ ಅವರಿಗೆ ಮತ್ತೆ ನಗರಾಭಿವೃದ್ಧಿ, ಪೌರಾಡಳಿತ ಖಾತೆಗಳನ್ನು ನೀಡಲಾಗಿದೆ.

ಮಂತ್ರಿ ಪಕ್ಷ       ಖಾತೆ
ಎನ್ ಚಂದ್ರಬಾಬು ನಾಯ್ಡು ಟಿಡಿಪಿ GAD, ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕ ಉದ್ಯಮಗಳು ಮತ್ತು ಇತರ ಎಲ್ಲಾ ಖಾತೆಗಳನ್ನು ಮಂತ್ರಿಗಳಿಗೆ ಹಂಚಿಕೆ ಮಾಡಲಾಗಿಲ್ಲ
ಕೊನಿಡೇಲ ಪವನ್​​ ಕಲ್ಯಾಣ್ JSP ಡಿ ಸಿಎಂ: ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ನೀರು ಸರಬರಾಜು. ಪರಿಸರ ಮತ್ತು ಅರಣ್ಯ, ವಿಜ್ಞಾನ ಮತ್ತು ತಂತ್ರಜ್ಞಾನ
ಎನ್ ಲೋಕೇಶ್ ನಾಯ್ಡು ಟಿಡಿಪಿ HRD, IT, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ.
ಕಿಂಜರಾಪು ಅಚ್ಚೆನ್ನೈಡು ಬಿಜೆಪಿ ಕೃಷಿ, ಸಹಕಾರ ಮತ್ತು ಮಾರುಕಟ್ಟೆ. ಪಶುಸಂಗೋಪನೆ, ಡೈರಿ ಮತ್ತು ಮೀನುಗಾರಿಕೆ
ಕೊಲ್ಲು ರವೀಂದ್ರ ಟಿಡಿಪಿ ಗಣಿ ಮತ್ತು ಭೂವಿಜ್ಞಾನ, ಅಬಕಾರಿ
ನಾದೆಂದ್ಲ ಮನೋಹರ್ JSP ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು
ಪೊಂಗೂರು ನಾರಾಯಣ ಟಿಡಿಪಿ ಮುನ್ಸಿಪಲ್ ಆಡಳಿತ ಮತ್ತು ನಗರಾಭಿವೃದ್ಧಿ
ಅನಿತಾ ವಂಗಲಪುಡಿ ಟಿಡಿಪಿ ಮನೆ. ವಿಪತ್ತು ನಿರ್ವಹಣೆ
ಸತ್ಯ ಕುಮಾರ್ ಯಾದವ್ ಬಿಜೆಪಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ. ಕುಟುಂಬ ಕಲ್ಯಾಣ
ಡಾ ನಿಮ್ಮಾ ರಾಮಾನಾಯ್ಡು ಟಿಡಿಪಿ ಜಲ ಸಂಪನ್ಮೂಲ ಅಭಿವೃದ್ಧಿ
ಎನ್ ಮೊಹಮ್ಮದ್ ಫಾರೂಕ್ ಟಿಡಿಪಿ ಕಾನೂನು, ಅಲ್ಪಸಂಖ್ಯಾತರ ಅಭಿವೃದ್ಧಿ
ಆನಂ ರಾಮನಾರಾಯಣ ರೆಡ್ಡಿ ಟಿಡಿಪಿ ದಾನಗಳನ್ನು
ಪಯ್ಯಾವುಳ ಕೇಶವ ಟಿಡಿಪಿ ಹಣಕಾಸು, ಯೋಜನೆ, ವಾಣಿಜ್ಯ ತೆರಿಗೆಗಳು ಮತ್ತು ಶಾಸಕಾಂಗ ವ್ಯವಹಾರಗಳು
ಅನಗಣಿ ಸತ್ಯ ಪ್ರಸಾದ್ ಟಿಡಿಪಿ ಆದಾಯ, ಅಂಚೆಚೀಟಿಗಳು ಮತ್ತು ನೋಂದಣಿಗಳು
ಕೊಲುಸು ಪಾರ್ಥಸಾರಧಿ ಟಿಡಿಪಿ ವಸತಿ, I&PR
ಡಾ ಡಿ ಬಾಲ ವೀರಾಂಜನೇಯ ಸ್ವಾಮಿ ಟಿಡಿಪಿ ಸಮಾಜ ಕಲ್ಯಾಣ (ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣ), ಸಚಿವಾಲಯ, ಗ್ರಾಮ ಸ್ವಯಂಸೇವಕರು
ಗೊಟ್ಟಿಪಟ್ಟಿ ರವಿಕುಮಾರ್ ಟಿಡಿಪಿ ಶಕ್ತಿ
ಕಂದುಲ ದುರ್ಗೇಶ್ JSP ಪ್ರವಾಸೋದ್ಯಮ, ಸಂಸ್ಕೃತಿ, ಸಿನಿಮಾಟೋಗ್ರಫಿ
ಗುಮ್ಮಡಿ ಸಂಧ್ಯಾ ರಾಣಿ ಟಿಡಿಪಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಬುಡಕಟ್ಟು ಕಲ್ಯಾಣ
ಬಿ.ಸಿ.ಜನಾರ್ದನರೆಡ್ಡಿ ಟಿಡಿಪಿ ರಸ್ತೆಗಳು ಮತ್ತು ಕಟ್ಟಡಗಳು, ಮೂಲಸೌಕರ್ಯ, ಹೂಡಿಕೆಗಳು
ಟಿ ಜಿ ಭರತ್ ಟಿಡಿಪಿ ಕೈಗಾರಿಕೆಗಳು ಮತ್ತು ವಾಣಿಜ್ಯ, ಆಹಾರ ಸಂಸ್ಕರಣೆ
ಎಸ್ ಸವಿತಾ ಟಿಡಿಪಿ ಬಿ.ಸಿ.ಕಲ್ಯಾಣ, ಕೈಮಗ್ಗ
ವಾಸಮಶೆಟ್ಟಿ ಸುಭಾಷ್ ಟಿಡಿಪಿ ಕಾರ್ಮಿಕ, ಕಾರ್ಖಾನೆಗಳು, ಬಾಯ್ಲರ್ಗಳು ಮತ್ತು ಉದ್ಯೋಗ, ವಿಮೆ ವೈದ್ಯಕೀಯ ಸೇವೆಗಳು
ಕೊಂಡಪಲ್ಲಿ ಶ್ರೀನಿವಾಸ್ ಟಿಡಿಪಿ MSME, SERP, NRI ಸಬಲೀಕರಣ ಮತ್ತು ಸಂಬಂಧಗಳು
ಮಂದಪಲ್ಲಿ ರಾಮ್ ಪ್ರಸಾದ್ ರೆಡ್ಡಿ ಟಿಡಿಪಿ ಸಾರಿಗೆ, ಯುವಜನತೆ ಮತ್ತು ಕ್ರೀಡೆ

ಟಿಡಿಪಿ ರಾಜ್ಯಾಧ್ಯಕ್ಷ ಕೆ ಅಚ್ಚೆನಾಯ್ಡು ಅವರಿಗೆ ಕೃಷಿ, ಸಹಕಾರ ಮತ್ತು ಮಾರುಕಟ್ಟೆ, ಹಾಗೂ ಪಶುಸಂಗೋಪನೆ, ಡೈರಿ ಮತ್ತು ಮೀನುಗಾರಿಕೆ ನೀಡಲಾಗಿದೆ. ಇವರು ಕೂಡ ಈ ಹಿಂದೆ ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಸಚಿವರಾಗಿದ್ದರು. ಟಿಡಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ನಾಯ್ಡು ಅವರ ಪುತ್ರ ಲೋಕೇಶ್ ಅವರನ್ನು ಎಚ್‌ಆರ್‌ಡಿ, ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಸಚಿವರಾಗಿ ನೇಮಕಾ ಮಾಡಲಾಗಿದೆ.

ಇದನ್ನೂ ಓದಿ: ‘ನಿರುದ್ಯೋಗ ಭತ್ಯೆ’ ನೀಡುವುದಾಗಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಘೋಷಣೆ

ಇನ್ನು ಚಂದ್ರಬಾಬು ನಾಯ್ಡು ಅವರ ಸರ್ಕಾರಕ್ಕೆ ಬೆಂಬಲ ನೀಡಿರುವ ಬಿಜೆಪಿಯ ಸತ್ಯ ಕುಮಾರ್ ಯಾದವ್ ಅವರಿಗೆ ವೈದ್ಯಕೀಯ, ಆರೋಗ್ಯ, ಕುಟುಂಬ ಕಲ್ಯಾಣ ಖಾತೆಯನ್ನು ನೀಡಲಾಗಿದೆ. ಟಿಡಿಪಿ ನಾಯಕಿ ವಿ ಅನಿತಾ ರಾಜ್ಯದ ಗೃಹ ಸಚಿವರಾಗಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:06 am, Sat, 15 June 24

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ