Pawan Sehrawat Joins BJP: ಸ್ಥಾಯಿ ಸಮಿತಿ ಚುನಾವಣೆಯ ಹೊಸ್ತಿಲಲ್ಲಿ ಎಎಪಿ ಕೌನ್ಸಿಲರ್ ಪವನ್ ಸೆಹ್ರಾವತ್ ಬಿಜೆಪಿಗೆ ಸೇರ್ಪಡೆ
ಸ್ಥಾಯಿ ಸಮಿತಿ ಚುನಾವಣೆಯ ಹೊಸ್ತಿಲಲ್ಲಿ ಎಎಪಿ ಕಾರ್ಪೊರೇಟರ್ ಪವನ್ ಸೆಹ್ರಾವತ್ ಬಿಜೆಪಿಗೆ ಸೇರ್ಪಡೆಯಾಗಿದ್ದು, ಆಮ್ ಆದ್ಮಿ ಪಕ್ಷಕ್ಕೆ ಆಘಾತವಾಗಿದೆ.
ಸ್ಥಾಯಿ ಸಮಿತಿ ಚುನಾವಣೆಯ ಹೊಸ್ತಿಲಲ್ಲಿ ಎಎಪಿ ಕೌನ್ಸಿಲರ್ ಪವನ್ ಸೆಹ್ರಾವತ್ ಬಿಜೆಪಿಗೆ ಸೇರ್ಪಡೆಯಾಗಿದ್ದು, ಆಮ್ ಆದ್ಮಿ ಪಕ್ಷಕ್ಕೆ ಆಘಾತ ಉಂಟಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಪವನ್, ಎಎಪಿ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರುವುದಾಗಿ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಎಂಸಿಡಿ ಸ್ಥಾಯಿ ಸಮಿತಿಯ 6 ಸದಸ್ಯರ ಆಯ್ಕೆಗೆ ನಡೆಯುತ್ತಿರುವ ಹಗ್ಗಜಗ್ಗಾಟದ ನಡುವೆ ಪವನ್ ಅವರ ನಿಲುವು ಎಎಪಿಗೆ ಭಾರಿ ನಷ್ಟ ಎಂದು ಹೇಳಲಾಗುತ್ತಿದೆ.
ವಿಶೇಷವೆಂದರೆ ಫೆಬ್ರವರಿ 24 ರಂದು ಎಂಸಿಡಿ ಸದನದ ಕಲಾಪ ಪ್ರಾರಂಭವಾಗುವ ಸ್ವಲ್ಪ ಮೊದಲು ಅವರು ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹರ್ಷ್ ಮಲ್ಹೋತ್ರಾ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಬಿಜೆಪಿ ಉದ್ದೇಶಪೂರ್ವಕವಾಗಿ ಗದ್ದಲ ಸೃಷ್ಟಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಮೇಯರ್, ಉಪಮೇಯರ್ ಆಯ್ಕೆಯಲ್ಲಿ ಗದ್ದಲ ಏಕೆ ನಡೆದಿಲ್ಲ, ತೆರವಾಗಿರುವ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಅವ್ಯವಹಾರ ಏಕೆ? ಎಂಸಿಡಿ ಹೌಸ್ ಲೀಡರ್ ಮುಖೇಶ್ ಗೋಯಲ್ ಅವರು ಸದನ ಪ್ರಾರಂಭವಾಗುವ ಮೊದಲೇ ಮೊಬೈಲ್ ಮತ್ತು ಪೆನ್‌ಗೆ ಅವಕಾಶವಿಲ್ಲ ಎಂದು ಹೇಳಿದ್ದರು. ಸ್ಥಾಯಿ ಸಮಿತಿ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಹೊಸದಾಗಿ ಆಯ್ಕೆಯಾದ ಮೇಯರ್ ಶೆಲ್ಲಿ ಒಬೆರಾಯ್ ಮೊಬೈಲ್ ಗೆ ಅನುಮತಿ ನೀಡುವಂತೆ ಆದೇಶಿಸಿದರು.
ಮತ್ತಷ್ಟು ಓದಿ: Shelly Oberoi: ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ದೆಹಲಿಯ ನೂತನ ಮೇಯರ್
ಅವರ ಆದೇಶ ಇಡೀ ವಾತಾವರಣವನ್ನೇ ಬದಲಿಸಿತು. ಅವರ ಈ ತಪ್ಪನ್ನು ಬಿಜೆಪಿ ಕೌನ್ಸಿಲರ್‌ಗಳು ಪತ್ತೆ ಮಾಡಿದ್ದಾರೆ. ಎಎಪಿ ಚುನಾವಣೆಯ ಗೌಪ್ಯತೆಯನ್ನು ಕೊನೆಗೊಳಿಸಲು ಬಯಸುತ್ತಿದೆ ಎಂದು ಬಿಜೆಪಿ ಕೌನ್ಸಿಲರ್‌ಗಳು ಆರೋಪಿಸಿದ್ದಾರೆ. ದೆಹಲಿ ಎಂಸಿಡಿಯ ಸ್ಥಾಯಿ ಸಮಿತಿಯ 6 ಸದಸ್ಯರ ಚುನಾವಣೆ ಶುಕ್ರವಾರ (ಫೆಬ್ರವರಿ 24) ನಡೆಯುತ್ತಿದೆ.
ಬವಾನಾದಿಂದ ಆಮ್ ಆದ್ಮಿ ಪಕ್ಷದ (ಎಎಪಿ) ಕೌನ್ಸಿಲರ್ ಪವನ್ ಸೆಹ್ರಾವತ್ ಅವರು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಸ್ಥಾಯಿ ಸಮಿತಿಯ ಆರು ಸದಸ್ಯರ ಚುನಾವಣೆಗೆ ಮತದಾನ ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ