ನವೆಂಬರ್ 26ರಂದು ವಿಮಾನ ಪ್ರಯಾಣದ ವೇಳೆ ಕುಡುಕ ಪ್ರಯಾಣಿಕರೊಬ್ಬರು ಮಹಿಳೆಯ ಮೇಲೆ ಮೂತ್ರ ಮಾಡಿದ ಪ್ರಕರಣದಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಏರ್ ಇಂಡಿಯಾಗೆ (Air India) ₹ 30 ಲಕ್ಷ ದಂಡ ವಿಧಿಸಿದ್ದು ಅದರ ನ್ಯೂಯಾರ್ಕ್-ದೆಹಲಿ ವಿಮಾನದ ಪೈಲಟ್‌ನ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತು ಮಾಡಿದೆ. ತನ್ನ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾದ” ಏರ್ ಇಂಡಿಯಾದ ಡೈರೆಕ್ಟರ್-ಇನ್-ಫ್ಲೈಟ್ ಸೇವೆಗಳಿಗೆ ಮೂರು ಲಕ್ಷ ರೂದಂಡವನ್ನು ವಿಧಿಸಿದೆ. ಕಳೆದ ವರ್ಷ ನವೆಂಬರ್ 26 ರಂದು ಮೂತ್ರ ವಿಸರ್ಜನೆ ಮಾಡಿದ ಘಟನೆಯಿಂದಾಗಿ ಶಂಕರ್ ಮಿಶ್ರಾ ಎಂಬ ಪ್ರಯಾಣಿಕರ ಮೇಲೆ ಏರ್ ಇಂಡಿಯಾ ಗುರುವಾರ ನಾಲ್ಕು ತಿಂಗಳ ಹಾರಾಟದ ನಿಷೇಧವನ್ನು ವಿಧಿಸಿದೆ. ಈ ಹಿಂದೆ ಅವರ ಮೇಲೆ ವಿಧಿಸಿದ್ದ 30 ದಿನಗಳ ನಿಷೇಧಕ್ಕೆ ಹೆಚ್ಚುವರಿಯಾಗಿ ನಿಷೇಧ ಹೇರಲಾಗಿದೆ.
Air India (AI) passenger urinating case of Nov 26 |
DGCA imposes a fine of Rs 30 lakhs on Air India for violation of rules, suspends the license of Pilot-In-Command of the flight for 3 months for failing to discharge his duties&Rs 3 lakhs fine on AI’s Director-in-flight services— ANI (@ANI) January 20, 2023
ಈ ಘಟನೆಯು ಜನವರಿ 4 ರಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಗಮನಕ್ಕೆ ಬಂದಿದ್ದು ವಿವಿಧ ನಿಯಮಗಳ ಉಲ್ಲಂಘನೆಗಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಡಿಜಿಸಿಎ ಏರ್ ಇಂಡಿಯಾದ ಅಕೌಂಟೆಬಲ್ ಮ್ಯಾನೇಜರ್, ಏರ್ ಇಂಡಿಯಾದ ವಿಮಾನಯಾನ ಸೇವೆಗಳ ನಿರ್ದೇಶಕರು ಮತ್ತು ಆ ವಿಮಾನದ ಎಲ್ಲಾ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗೆ ನಿಯಂತ್ರಕ ಕಟ್ಟುಪಾಡುಗಳ ಉಲ್ಲಂಘನೆಗಾಗಿ ಅವರ ವಿರುದ್ಧ ಏಕೆ ಜಾರಿ ಜಾರಿ ಕ್ರಮ ತೆಗೆದುಕೊಳ್ಳಬಾರದು ಎಂದು ಶೋಕಾಸ್ ನೋಟಿಸ್ ನೀಡಿದೆ. ಅವರಿಗೆ ಉತ್ತರ ನೀಡಲು ಎರಡು ವಾರಗಳ ಕಾಲಾವಕಾಶ ನೀಡಲಾಗಿತ್ತು.
ಟಾಟಾ ಸಮೂಹದ ಒಡೆತನದ ವಿಮಾನಯಾನ ಸಂಸ್ಥೆ ಶುಕ್ರವಾರ ಬೆಳಗ್ಗೆ ತನ್ನ ಉತ್ತರವನ್ನು ಸಲ್ಲಿಸಿದೆ.
ಇದನ್ನೂ ಓದಿ: Viral Video: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿಯನ್ನು ಕಾರಿನಲ್ಲಿ ಎಳೆದುಕೊಂಡು ಹೋದ ವಿಡಿಯೋ ವೈರಲ್
ಶಂಕರ್ ಮಿಶ್ರಾ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು ಮಹಿಳೆಯೇ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಆರೋಪಗಳನ್ನು ಮಹಿಳೆ “ಸಂಪೂರ್ಣವಾಗಿ ಸುಳ್ಳು ಮತ್ತು ಅವಹೇಳನಕಾರಿ” ಎಂದು ತಳ್ಳಿಹಾಕಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಘಟನೆಗೆ ಏರ್ ಇಂಡಿಯಾದ ಪ್ರತಿಕ್ರಿಯೆಯು “ಹೆಚ್ಚು ವೇಗವಾಗಿ” ಇರಬೇಕಿತ್ತು ಎಂದು ಒಪ್ಪಿಕೊಂಡರು. ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರು ಕ್ಷಮೆಯಾಚಿಸಿದ ನಂತರ ಅವರ ಹೇಳಿಕೆಯು ಏರ್‌ಲೈನ್ ತನ್ನ “ವಿಮಾನದಲ್ಲಿ ಆಲ್ಕೋಹಾಲ್ ಸೇವೆಯ ನೀತಿಯನ್ನು” ಪರಿಶೀಲಿಸುತ್ತಿದೆ ಎಂದು ತಿಳಿಸಿದರು.
ವಿಮಾನ ಭಾರತಕ್ಕೆ ಬಂದಾಗ ಶಂಕರ್ ಮಿಶ್ರಾ ಅಲ್ಲಿಂದ ಹೊರಟು ಹೋಗಿದ್ದರು. ನವೆಂಬರ್ 27 ರಂದು ಮಹಿಳೆ ಏರ್ ಇಂಡಿಯಾ ಗ್ರೂಪ್ ಅಧ್ಯಕ್ಷರಿಗೆ ಈ ಭಯಾನಕ ಘಟನೆಯ ಬಗ್ಗೆ ಪತ್ರ ಬರೆದಿದ್ದರು. ಏರ್ ಇಂಡಿಯಾ ಜನವರಿ 4 ರಂದು ಪೊಲೀಸ್ ದೂರು ದಾಖಲಿಸಿದೆ, ಎರಡೂ ಕಡೆಯವರು “ವಿಷಯವನ್ನು ಇತ್ಯರ್ಥಪಡಿಸಿದ್ದಾರೆ” ಎಂದು ಭಾವಿಸಿದ್ದರಿಂದ ಅದು ಪೊಲೀಸರವರೆಗೆ ಹೋಗಲಿಲ್ಲ ಎಂದು ಹೇಳಿಕೊಂಡಿದೆ. ಘಟನೆ ನಡೆದ ಆರು ವಾರಗಳ ನಂತರ ಎರಡು ದಿನಗಳ ನಂತರ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:56 pm, Fri, 20 January 23