ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಒಪ್ಪದ ಸಿಬ್ಬಂದಿ; ಹತ್ರಾಸ್ನ ಬೀದಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಆಸ್ಪತ್ರೆಯ ಹೊರಗೆ ಹೆರಿಗೆ ನೋವಿನಿಂದ ನರಳಾಡುತ್ತಿದ್ದ ಮಹಿಳೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಕೆಯ ಸುತ್ತಲೂ ಜನ ಓಡಾಡುತ್ತಿದ್ದು, ಆಕೆ ನೆಲದ ಮೇಲೆ ಮಲಗಿದ್ದಾರೆ.
ಹತ್ರಾಸ್: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ (Hathras) 9 ತಿಂಗಳ ಗರ್ಭಿಣಿಯೊಬ್ಬರು (Pregnant) ತನ್ನ ರಕ್ತದ ಪರೀಕ್ಷೆಯ ರಿಪೋರ್ಟ್ ತರಲಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯ ಸಿಬ್ಬಂದಿ ಆಕೆಯನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದರು. ಹೀಗಾಗಿ, ಆ ಮಹಿಳೆ ಆಸ್ಪತ್ರೆಯ ಹೊರಗೆ ಬೀದಿಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಘಟನೆ ಗುರುವಾರ ನಡೆದಿದ್ದು, ಕಲ್ಪನಾ ಎಂಬ ಮಹಿಳೆಯನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಳ್ಳದೆ ವಾಪಾಸ್ ಕಳುಹಿಸಲಾಗಿದೆ.
ಆಸ್ಪತ್ರೆಯ ಹೊರಗೆ ಹೆರಿಗೆ ನೋವಿನಿಂದ ನರಳಾಡುತ್ತಿದ್ದ ಮಹಿಳೆಯ ನರಳಾಟದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಕೆಯ ಸುತ್ತಲೂ ಜನ ಓಡಾಡುತ್ತಿದ್ದು, ಆಕೆ ನೆಲದ ಮೇಲೆ ಮಲಗಿದ್ದಾರೆ.
ಇದನ್ನೂ ಓದಿ: ಮನೆ ಕೆಲಸಕ್ಕೆ ಬರುತ್ತಿದ್ದಾಗ ವಿದ್ಯಾರ್ಥಿಯಿಂದ ನಿರಂತರ ಅತ್ಯಾಚಾರ; ಗರ್ಭಿಣಿಯಾದ ಬಾಲಕಿ
ನಮ್ಮ ಬಳಿ ಬ್ಲಡ್ ರಿಪೋರ್ಟ್ ಇಲ್ಲದ ಕಾರಣದಿಂದ ನನ್ನ ಹೆಂಡತಿ ಮತ್ತು ನನಗೆ ಆಸ್ಪತ್ರೆಗೆ ದಾಖಲಾಗಲು ಬಿಡಲಿಲ್ಲ. ತುರ್ತು ಚಿಕಿತ್ಸಾ ಕೊಠಡಿಯಲ್ಲಿದ್ದ ಸಿಬ್ಬಂದಿ ನೋವಿನಿಂದ ನರಳುತ್ತಿದ್ದ ನನ್ನ ಹೆಂಡತಿಯ ಮಾತನ್ನೂ ಕೇಳಲಿಲ್ಲ. ಆ ಬಳಿಕ ನನ್ನ ಪತ್ನಿಗೆ ನೋವು ತಡೆದುಕೊಳ್ಳಲಾಗದೆ ಆಸ್ಪತ್ರೆಯ ಹೊರಗೆ ನೆಲದ ಮೇಲೆ ಬಿದ್ದು, ಅಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಆ ಗರ್ಭಿಣಿಯ ಪತಿ ಸನೇಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Crime News: ಆಭರಣಕ್ಕಾಗಿ 7 ತಿಂಗಳ ಗರ್ಭಿಣಿ ಸೊಸೆಗೆ ಬೆಂಕಿ ಹಚ್ಚಿದ ಅತ್ತೆ-ಮಾವ
ಆದರೆ, ಅವರ ಆರೋಪಗಳನ್ನು ತಳ್ಳಿಹಾಕಿದ ಮುಖ್ಯ ವೈದ್ಯಕೀಯ ಅಧೀಕ್ಷಕ ಶೆಲ್ಲಿ ಸಿಂಗ್, ಆ ಮಹಿಳೆಗೆ ಆಧಾರ್‌ನಂತಹ ಐಡಿಗಳನ್ನು ನೀಡುವಂತೆ ಕೇಳಲಾಯಿತು. ಆಸ್ಪತ್ರೆಯ ಪ್ರಸವಪೂರ್ವ ಕೋಣೆಗೆ ಹೋಗಲು ಸಲಹೆ ನೀಡಲಾಯಿತು. ಆದರೆ, ಆಕೆ ಅದಕ್ಕೆ ಒಪ್ಪದೆ ಆಸ್ಪತ್ರೆಯಿಂದ ಹೊರಗೆ ಹೋದರು. ಆಮೇಲೆ ಅಲ್ಲಿಯೇ ಹೆರಿಗೆಯಾಯಿತು ಎಂದಿದ್ದಾರೆ.