AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ 19 ಸೋಂಕಿತರಿಗೆ ವಿಶೇಷ ನೆರವು ಘೋಷಿಸಿದ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್​; ಪಿಂಚಣಿ, ಸ್ಕಾಲರ್​ಶಿಪ್ ನೀಡಲು ನಿರ್ಧಾರ

ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿ ಎಲ್ಲ ರೀತಿಯ ದಿನಗೂಲಿ ನೌಕರರಿಗೆ ತಿಂಗಳಿಗೆ ಸರ್ಕಾರದಿಂದ 1000 ರೂಪಾಯಿ ನೀಡಲಾಗುವುದು ಎಂದು ಜಮ್ಮುಕಾಶ್ಮೀರ ಲೆಫ್ಟಿನೆಂಟ್ ಗವರ್ನರ್​ ತಿಳಿಸಿದ್ದಾರೆ.

ಕೊವಿಡ್​ 19 ಸೋಂಕಿತರಿಗೆ ವಿಶೇಷ ನೆರವು ಘೋಷಿಸಿದ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್​; ಪಿಂಚಣಿ, ಸ್ಕಾಲರ್​ಶಿಪ್ ನೀಡಲು ನಿರ್ಧಾರ
ಮನೋಜ್​ ಸಿನ್ಹಾ
Lakshmi Hegde
|

Updated on: May 11, 2021 | 6:12 PM

Share

ಶ್ರೀನಗರ: ಕೊರೊನಾ ಸೋಂಕು ಭಾರತದ ಯಾವ ರಾಜ್ಯವನ್ನೂ ಬಿಟ್ಟಿಲ್ಲ. ಒಂದೊಂದೇ ರಾಜ್ಯಗಳಾಗಿ ಲಾಕ್​ಡೌನ್, ಕರ್ಫ್ಯೂದಂತಹ ಕಠಿಣ ನಿಯಮಗಳನ್ನು ಹೇರುತ್ತಿವೆ. ಈ ಮಧ್ಯೆ ಜಮ್ಮು ಕಾಶ್ಮೀರದ ಲೆಫ್ಟಿನಂಟ್​ ಗವರ್ನರ್​ ಮನೋಜ್​ ಸಿನ್ಹಾ ಅವರು ಕೊವಿಡ್ 19 ಸೋಂಕಿತರಿಗೆ ಕೆಲವು ವಿಶೇಷ ಸಹಾಯವನ್ನು ನೀಡುವುದಾಗಿ ಘೋಷಿಸಿದ್ದಾರೆ.

ಅದರಲ್ಲಿ ಮುಖ್ಯವಾಗಿ, ಯಾವುದಾದರೂ ಒಬ್ಬನೇ ದುಡಿಯುತ್ತಿದ್ದು, ಆತನೇನಾದರೂ ಕೊರೊನಾದಿಂದ ಮೃತಪಟ್ಟರೆ, ಆ ಮನೆಯ ಹಿರಿಯ ನಾಗರಿಕರಿಗೆ ವಿಶೇಷ ಪಿಂಚಣಿ ನೀಡುವುದಾಗಿ ಲೆಫ್ಟಿನೆಂಟ್ ಗವರ್ನರ್​ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಕೊವಿಡ್​ 19ನಿಂದ ಪಾಲಕರನ್ನು ಕಳೆದುಕೊಳ್ಳುವ ಮಕ್ಕಳಿಗೆ ಸರ್ಕಾರದಿಂದ ಸ್ಕಾಲರ್​ಶಿಪ್​ ಕೊಡುವುದಾಗಿಯೂ ಘೋಷಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಅದೆಷ್ಟೋ ದಿನಗೂಲಿ ನೌಕರರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಹಾಗಾಗಿ ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿ ಎಲ್ಲ ರೀತಿಯ ದಿನಗೂಲಿ ನೌಕರರಿಗೆ ತಿಂಗಳಿಗೆ ಸರ್ಕಾರದಿಂದ 1000 ರೂಪಾಯಿ ನೀಡಲಾಗುವುದು. ಮುಂದಿನ ಎರಡು ತಿಂಗಳ ಕಾಲ ಈ ಹಣ ನೀಡುತ್ತೇವೆ ಎಂದು ಮನೋಜ್​ ಸಿನ್ಹಾ ಹೇಳಿದ್ದಾರೆ.

ಇನ್ನು ಸ್ವಉದ್ಯಮ ಮಾಡುವವರಿಗೆ ಹಣಕಾಸು ನೆರವು ನೀಡಲಾಗುವುದು. ಸರ್ಕಾರದಿಂದ ಇರುವ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಲು ಜನರು ಮುಂದಾಗಬೇಕು ಎಂದೂ ಅವರು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಈ ಯೋಜನೆಯನ್ನು ಜಾರಿಗೊಳಿಸುವ ಪೂರ್ವ ಲೆಫ್ಟಿನೆಂಟ್ ಗವರ್ನರ್​ ಸಿನ್ಹಾ ಅವರು, ನ್ಯಾಷನಲ್ ಕಾನ್ಫರೆನ್ಸ್​ ಅಧ್ಯಕ್ಷ ಪ್ರೆಸಿಡೆಂಟ್​ ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್ ನಾಯಕ ಗುಲಾಮ್​ ನಬಿ ಅಜಾದ್​ ಸೇರಿ ಹಲವು ರಾಜಕೀಯ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಆಮ್ಲಜನಕ ಲಭ್ಯತೆ ಮಟ್ಟವನ್ನೂ ಹೆಚ್ಚಿಸಲಾಗಿದೆ. ಮೊದಲು ಕೇವಲ 17 ಆಮ್ಲಜನಕ ಪ್ಲಾಂಟ್​ಗಳಿದ್ದವು. ಆರು ತಿಂಗಳಲ್ಲಿ 44ಕ್ಕೆ ಏರಿಸಲಾಗಿದೆ. ಕೊರೊನಾ ಪ್ರಸರಣ ಸರಪಳಿ ಬ್ರೇಕ್​ ಮಾಡಲು ನಾವು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದ್ದೇವೆ. ಅದರಲ್ಲಿ ಖಂಡಿತ ಯಶಸ್ವಿ ಆಗುತ್ತೇವೆ ಎನ್ನುತ್ತಾರೆ ಸಿನ್ಹಾ. ಅಮೂಲ್ಯವಾದ ಜೀವಗಳನ್ನು ರಕ್ಷಿಸಲು ನಾವೆಲ್ಲ ಒಟ್ಟಾಗಬೇಕು. ಪರಸ್ಪರ ಸಹಕಾರ ತುಂಬ ಮುಖ್ಯ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ನೂರು‌ ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ; ಜಿಲ್ಲಾಡಳಿತದ ಜತೆ ಕೈ ಜೊಡಿಸಿದ ವೇದಾಂತ ಮೈನ್ಸ್ ಸಂಸ್ಥೆ

‘ಸರಿಗಮಪ’ ಸುಬ್ರಮಣಿ ಪತ್ನಿ ಸಾವಿನ ಕೇಸ್​​ಗೆ ಟ್ವಿಸ್ಟ್​; ಕೊರೊನಾ ಅಲ್ಲ, ಆತ್ಮಹತ್ಯೆಯಿಂದ ನಿಧನ?

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!