AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Telangana Lockdown: ತೆಲಂಗಾಣದಲ್ಲಿ ನಾಳೆಯಿಂದ 10 ದಿನ ಲಾಕ್​ಡೌನ್; ಅಗತ್ಯವಸ್ತುಗಳ ಖರೀದಿ ಬೆಳಗ್ಗೆ 6-10ರವರೆಗೆ ಮಾತ್ರ

Telangana Lockdown Updates: ದೇಶದಲ್ಲಿ ಎರಡನೇ ಅಲೆಯ ಕೊರೊನಾ ವಿಪರೀತವಾಗಿ ಹೆಚ್ಚಾಗಿರುವ ಕಾರಣ ಬಹುತೇಕ ರಾಜ್ಯಗಳು ಲಾಕ್​ಡೌನ್​ ಮೊರೆಹೋಗಿವೆ. ಸ್ವಲ್ಪ ದಿನಗಳ ಹಿಂದೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಸರ್ಕಾರಗಳು ಲಾಕ್​ಡೌನ್​ನ್ನು ಕೊನೇ ಅಸ್ತ್ರವನ್ನಾಗಿ ಪ್ರಯೋಗಿಸಬೇಕು ಎಂದು ಮನವಿ ಮಾಡಿದ್ದರು.

Telangana Lockdown: ತೆಲಂಗಾಣದಲ್ಲಿ ನಾಳೆಯಿಂದ 10 ದಿನ ಲಾಕ್​ಡೌನ್; ಅಗತ್ಯವಸ್ತುಗಳ ಖರೀದಿ ಬೆಳಗ್ಗೆ 6-10ರವರೆಗೆ ಮಾತ್ರ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: May 11, 2021 | 4:34 PM

Share

ಹೈದರಾಬಾದ್​: ತೆಲಂಗಾಣದಲ್ಲಿ ನಾಳೆ (ಮೇ 12)ಯಿಂದ 10 ದಿನಗಳ ಲಾಕ್​ಡೌನ್​ ಜಾರಿಯಾಗಲಿದೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ರಾಜ್ಯಗಳ ಸಾಲಿಗೆ ಇದೀಗ ತೆಲಂಗಾಣವೂ ಸೇರಿದ್ದು, ಕರ್ನಾಟಕ ಮಾದರಿಯಲ್ಲೇ ಕಠಿಣ ನಿಯಮ ಜಾರಿಗೊಳಿಸಲು ಅಲ್ಲಿನ ಸರ್ಕಾರ ನಿರ್ಧಾರ ಮಾಡಿದೆ. ನಾಳೆಯಿಂದ 10 ದಿನಗಳ ಕಾಲ ಮುಂಜಾನೆ 6ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಅಗತ್ಯವಸ್ತುಗಳು ಸಿಗಲಿವೆ.

ನಾಳೆ ಬೆಳಗ್ಗೆ 10ಗಂಟೆಯಿಂದ ಲಾಕ್​ಡೌನ್​ ಜಾರಿಗೊಳಿಸಲು ರಾಜ್ಯ ಕ್ಯಾಬಿನೆಟ್​​ ಸಭೆಯಲ್ಲಿ ನಿರ್ಧರಿಸಲಾಗಿದೆ. ಜನರು ಮುಂಜಾನೆ 6ರಿಂದ 10ಗಂಟೆವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಲಸಿಕೆ ಖರೀದಿಗಾಗಿ ಜಾಗತಿಕ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಆಂಧ್ರಪ್ರದೇಶದಲ್ಲಿ ಮಾತ್ರ ಇನ್ನೂ ಭಾಗಶಃ ಕರ್ಫ್ಯೂ ಇರುವುದು ಬಿಟ್ಟರೆ, ದಕ್ಷಿಣದ ಉಳಿದ ರಾಜ್ಯಗಳಲ್ಲಿ ಲಾಕ್​ಡೌನ್ ಹೇರಲಾಗಿದೆ. ತಮಿಳುನಾಡು ಮತ್ತು ಕರ್ನಾಟಕದಲ್ಲಿ ಮೇ 24ರವರೆಗೆ ಲಾಕ್​ಡೌನ್​ ಮುಂದುವರಿಸಲಾಗಿದೆ. ಹಾಗೇ ಕೇರಳದಲ್ಲಿ ಮೇ 16ರವರೆಗೂ ಲಾಕ್​ಡೌನ್ ಇರಲಿದೆ.

ದೇಶದಲ್ಲಿ ಎರಡನೇ ಅಲೆಯ ಕೊರೊನಾ ವಿಪರೀತವಾಗಿ ಹೆಚ್ಚಾಗಿರುವ ಕಾರಣ ಬಹುತೇಕ ರಾಜ್ಯಗಳು ಲಾಕ್​ಡೌನ್​ ಮೊರೆಹೋಗಿವೆ. ಸ್ವಲ್ಪ ದಿನಗಳ ಹಿಂದೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಸರ್ಕಾರಗಳು ಲಾಕ್​ಡೌನ್​ನ್ನು ಕೊನೇ ಅಸ್ತ್ರವನ್ನಾಗಿ ಪ್ರಯೋಗಿಸಬೇಕು ಎಂದು ಮನವಿ ಮಾಡಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಲಾಕ್​ಡೌನ್ ಬಿಟ್ಟು ಬೇರೆ ಮಾರ್ಗ ಇಲ್ಲದಂತಾಗಿದೆ.

ಕೊರೊನಾ ಉಲ್ಬಣದ ಬೆನ್ನಲ್ಲೇ ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್​ ಅಭಾವ ಕಂಡುಬಂದಿದೆ. ಅದೆಷ್ಟೋ ರೋಗಿಗಳು ಆಮ್ಲಜನಕ ಇಲ್ಲದೆ ಮೃತಪಟ್ಟಿದ್ದಾರೆ. ಇದರಿಂದ ಇನ್ನಷ್ಟು ಆತಂಕ ಮನೆ ಮಾಡಿದೆ.

ಇದನ್ನೂ ಓದಿ: ಕೊವಿಡ್ ಲಸಿಕೆ ಪಡೆದ ನಂತರವೂ ಆಸ್ಪತ್ರೆಯ ಏಳು ಸಿಬ್ಬಂದಿಗಳಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗಲುತ್ತದೆ: ಅಧ್ಯಯನ ವರದಿ

ಕೆಲಸಗಾರರು ಕಾರ್ಯಸ್ಥಳದಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದಾರೆ..’ ವಿಸ್ತಾ ಯೋಜನೆಯ ಮುಂದುವರಿಸಿದ್ದನ್ನು ಹೈಕೋರ್ಟ್​ನಲ್ಲಿ ಸಮರ್ಥಿಸಿಕೊಂಡ ಕೇಂದ್ರ

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ