ಕೊವಿಡ್ ಲಸಿಕೆ ಪಡೆದ ನಂತರವೂ ಆಸ್ಪತ್ರೆಯ ಏಳು ಸಿಬ್ಬಂದಿಗಳಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗಲುತ್ತದೆ: ಅಧ್ಯಯನ ವರದಿ
Breakthrough Cases: ಲಸಿಕೆ ಹಾಕಿದ 113 ಜನರಲ್ಲಿ, ಎರಡನೇ ಡೋಸ್ 107 ಮಂದಿಗೆ ನೀಡಲಾಗಿದೆ. Breakthrough ರೋಗಲಕ್ಷಣದ ಕೊವಿಡ್ -19 ಸೋಂಕುಗಳು (ಎರಡನೇ ಡೋಸ್ ನಂತರ 14 ದಿನಗಳಿಗಿಂತ ಹೆಚ್ಚು) 15 ಜನರಲ್ಲಿ (113 ರಲ್ಲಿ 13.3%) ಕಂಡುಬಂದಿದೆ.
ದೆಹಲಿಯ ಖಾಸಗಿ ಆಸ್ಪತ್ರೆಯೊಂದರ ಆರೋಗ್ಯ ಕಾರ್ಯಕರ್ತರಲ್ಲಿ ಸಣ್ಣ ಪ್ರಮಾಣದ ಅಧ್ಯಯನದ ಪ್ರಕಾರ ಶೇ 13.3 ನಷ್ಟು (ಏಳು ಸಿಬ್ಬಂದಿಗಳಲ್ಲಿ ಒಬ್ಬರಿಗೆ) breakthrough ಆಗಿ ಸೋಂಕಿಗೀಡಾಗಿದ್ದಾರೆ ಎಂದು ಕಂಡುಹಿಡಿದಿದೆ. ಫೋರ್ಟಿಸ್ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಡಯಾಬಿಟಿಸ್, ಮೆಟಾಬಾಲಿಕ್ ಡಿಸೀಸ್ ಮತ್ತು ಎಂಡೋಕ್ರೈನಾಲಜಿ ಆರೋಗ್ಯ ಕಾರ್ಯಕರ್ತರ ಮೇಲೆ ಈ ಅಧ್ಯಯನವನ್ನು ನಡೆಸಿದ್ದು ಇದು ಡಯಾಬಿಟಿಸ್ & ಮೆಟಾಬಾಲಿಕ್ ಸಿಂಡ್ರೋಮ್: ಕ್ಲಿನಿಕಲ್ ರಿಸರ್ಚ್ & ರಿವ್ಯೂಸ್ ಜರ್ನಲ್ ನಲ್ಲಿ ಪ್ರಕಟವಾಗಿದೆ. ಏನಿದು breakthrough ಪ್ರಕರಣ? ಲಸಿಕೆ ಪಡೆದ ನಂತರವೂ ಕೊವಿಡ್ -19 ಸೋಂಕಿಗೆ ಒಳಗಾದ ಜನರನ್ನು Breakthrough ಪ್ರಕರಣಗಳು ಎಂದು ಕರೆಯಲಾಗುತ್ತದೆ. ಇದು ಲಸಿಕೆ ಒದಗಿಸುವ ರಕ್ಷಣೆ ಇದ್ದರೂ ಸೋಂಕು ತಗಲುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಭಾರತದಲ್ಲಿ ಬಳಕೆಯಲ್ಲಿರುವ ಕೊವಾಕ್ಸಿನ್ ಮತ್ತು ಕೊವಿಶೀಲ್ಡ್ ಎರಡೂ ಲಸಿಕೆಗಳಲ್ಲಿ ಇಂತಹ ಪ್ರಕರಣಗಳು ಸಂಭವಿಸುತ್ತಿವೆ
ಅಧ್ಯಯನವನ್ನು ಹೇಗೆ ನಡೆಸಲಾಗಿದೆ? ಆಸ್ಪತ್ರೆಯಲ್ಲಿ 123 ಉದ್ಯೋಗಿಗಳಿದ್ದು, ಅವರಲ್ಲಿ 113 ಜನರಿಗೆ ಲಸಿಕೆ ನೀಡಲಾಗಿತ್ತು. ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ವೈದ್ಯರು, ಪೌಷ್ಟಿಕ ತಜ್ಞರು, ದಾದಿಯರು, ಅರೆವೈದ್ಯಕೀಯ ಕೆಲಸಗಾರರು ಮತ್ತು ನಿರ್ವಹಣಾ ಸಿಬ್ಬಂದಿ ಸೇರಿದ್ದಾರೆ. ಮಧುಮೇಹ ರೋಗಿಗಳಿಗೆ ತೊಂದರೆಗಳು, ಚಯಾಪಚಯ ಅಸ್ವಸ್ಥತೆಗಳು ಮತ್ತು ತುರ್ತು-ಅಲ್ಲದ ಶಸ್ತ್ರಚಿಕಿತ್ಸೆಗಳ ಅಗತ್ಯವಿರುವ ರೋಗಿಗಳಿಗೆ ಇಲ್ಲಿ ಆರೋಗ್ಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜನವರಿಯಿಂದ ಇಲ್ಲಿಯವರೆಗೆ ಎಲ್ಲಾ ನೌಕರರರ ವ್ಯಾಕ್ಸಿನೇಷನ್ ಮತ್ತು ಕೊವಿಡ್ -19 ಸೋಂಕುಗಳಿಗೆ ಸಂಬಂಧಿಸಿದಂತೆ ಆಸ್ಪತ್ರೆಯಿಂದ ವಿವರವಾದ ಡೇಟಾಬೇಸ್ ಅನ್ನು ನಿರ್ವಹಿಸಲಾಗಿದೆ. ಯಾವುದೇ ಡೋಸ್ ವ್ಯಾಕ್ಸಿನೇಷನ್ ನಂತರ ಎಲ್ಲಾ ವಿವರಗಳನ್ನು ದಾಖಲಿಸಲಾಗಿದೆ. ಈ ಅಧ್ಯಯನವನ್ನು ಜನವರಿ 16 ರ ನಡುವೆ ನಡೆಸಲಾಯಿತು. ಭಾಗವಹಿಸಿದ 113 ಜನರಲ್ಲಿ 28 ಜನರಿಗೆ ಕೊವಾಕ್ಸಿನ್ ನೀಡಲಾಗಿದ್ದು, 85 ಮಂದಿಗೆ ಕೊವಿಶೀಲ್ಡ್ ನೀಡಲಾಗಿದೆ.
ಅಧ್ಯಯನದಲ್ಲಿ ಸಿಕ್ಕಿದ್ದೇನು? ಲಸಿಕೆ ಹಾಕಿದ 113 ಜನರಲ್ಲಿ, ಎರಡನೇ ಡೋಸ್ 107 ಮಂದಿಗೆ ನೀಡಲಾಗಿದೆ. Breakthrough ರೋಗಲಕ್ಷಣದ ಕೊವಿಡ್ -19 ಸೋಂಕುಗಳು (ಎರಡನೇ ಡೋಸ್ ನಂತರ 14 ದಿನಗಳಿಗಿಂತ ಹೆಚ್ಚು) 15 ಜನರಲ್ಲಿ (113 ರಲ್ಲಿ 13.3%) ಕಂಡುಬಂದಿದೆ. ಎಲ್ಲರೂ ಜ್ವರದಿಂದ ಬಳಲುತ್ತಿದ್ದರು ಮತ್ತು ಅವರಲ್ಲಿ ಅರ್ಧದಷ್ಟು ಜನರು ಗಂಟಲು ನೋವು ಮತ್ತು ಕೆಮ್ಮು ಹೊಂದಿದ್ದರು. ಕೆಲವರಿಗೆ ಬೇಧಿ, ಇನ್ನು ಕೆಲವರಿಗೆ ವಾಸನೆ ಮತ್ತು ರುಚಿ ಗೊತ್ತಾಗುತ್ತಿರಲಿಲ್ಲ. ರೋಗಲಕ್ಷಣಗಳು 3-14 ದಿನಗಳಿಂದ ಇತ್ತು. ಒಬ್ಬರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂದಿದ್ದು ಇನ್ನುಳಿದ 14 ಮಂದಿಗೆ ತೀವ್ರವಲ್ಲದ ಕೊವಿಡ್- 19 ಕಾಯಿಲೆ ಇದೆ ಎಂದು ಹೆಲ್ತ್ ಕೇರ್ ಅಧ್ಯಕ್ಷ ಡಾ.ಅನೂಪ್ ಮಿಶ್ರಾ ಹೇಳಿದರು.
ಅಧ್ಯಯನ ಏನು ಹೇಳುತ್ತದೆ? Breakthrough ಸೋಂಕಿನ ಹೆಚ್ಚಿನ ಹರಡುವಿಕೆಯು ಹೆಲ್ತ್ ಕೇರ್ ವಿಭಾಗದಲ್ಲಿ ಕಂಡುಬರುತ್ತದೆ ಎಂದು ಅಧ್ಯಯನಕಾರರು ಪತ್ತೆ ಹಚ್ಚಿದ್ದಾರೆ. ಲಸಿಕೆಯ ಎಲ್ಲ ಡೋಸ್ ಗಳನ್ನು ಪಡೆದ ನಂತರ ಆ ಸೋಂಕು ಹೆಚ್ಚು ವ್ಯಾಪಿಸಬಹುದು ಮತ್ತು ಇನ್ನಷ್ಟು ಹರಡುವಿಕೆಗೆ ಮೂಲಾಗಬಹುದು. ಸಮುದಾಯ ವಾಸಿಸುವ ಜನರಲ್ಲಿ ನಮಗೆ ಹೆಚ್ಚಿನ ಸಂಶೋಧನೆ ಮತ್ತು ಡೇಟಾ ಬೇಕು.
ಸಂಪೂರ್ಣ ವ್ಯಾಕ್ಸಿನೇಷನ್ ನಂತರ ಭಾರತದಲ್ಲಿ ‘breakthrough’ ಸೋಂಕು ಸಂಶೋಧನೆಯ ಒಂದು ಪ್ರಮುಖ ಕ್ಷೇತ್ರವಾಗಿರಬೇಕು. ಇದು ಒಂದು ಪ್ರಮುಖ ಕ್ಷೇತ್ರವಾಗಿದ್ದು ಸ್ಪಷ್ಟವಾಗಿ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ನಮ್ಮ ಹೆಲ್ತ್ ಕೇರ್ ವ್ಯವಸ್ಥೆಯನಲ್ಲಿ ಕಂಡುಬರುವ ಹೆಚ್ಚಿನ breakthrough ಸೋಂಕು ತೀವ್ರ ಸ್ವರೂಪದಲ್ಲ. ಆದರೆ ರೋಗಲಕ್ಷಣದ ರೋಗಿಗಳಿಗೆ ಮಾತ್ರ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡುವುದರಿಂದ ಲಕ್ಷಣರಹಿತ ರೋಗಿಗಳು ಪರೀಕ್ಷೆಯಿಂದ ವಂಚಿತರಾಗುತ್ತಾರೆ ಎಂಬುದು ಒಂದು ಗಮನಾರ್ಹವಾದ ವಿಷಯ. ಈ ಲಕ್ಷಣರಹಿತ ರೋಗಿಗಳು ಹೆಚ್ಚಿನ ಸೋಂಕು ಹರಡುವಿಕೆಗೆ ಕಾರಣವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Explainer: ಮಕ್ಕಳಿಗೆ ಸಮಸ್ಯೆ ತಂದೊಡ್ಡುವ ಕೊರೊನಾ 3ನೇ ಅಲೆ ಎದುರಿಸಲು ಸಿದ್ಧತೆ ಹೇಗಿರಬೇಕು? ತಜ್ಞರ ಅಭಿಪ್ರಾಯ ಇಲ್ಲಿದೆ
(What are breakthrough cases 1 in 7 healthcare workers with Covid-19 after vaccination says Study)
Published On - 4:24 pm, Tue, 11 May 21