‘ಕೆಲಸಗಾರರು ಕಾರ್ಯಸ್ಥಳದಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದಾರೆ..’ ವಿಸ್ತಾ ಯೋಜನೆಯ ಮುಂದುವರಿಸಿದ್ದನ್ನು ಹೈಕೋರ್ಟ್​ನಲ್ಲಿ ಸಮರ್ಥಿಸಿಕೊಂಡ ಕೇಂದ್ರ

ಎಲ್ಲ ಕಾರ್ಮಿಕರಿಗೂ ಆರೋಗ್ಯ ವಿಮೆ ವ್ಯವಸ್ಥೆಯಾಗಿದೆ. ಅಲ್ಲದೆ, ಕೆಲಸದ ಸ್ಥಳದಲ್ಲಿ ಆರ್​ಟಿ-ಪಿಸಿಆರ್​ ತಪಾಸಣೆ, ಐಸೋಲೇಶನ್​ ಮತ್ತು ಎಲ್ಲ ರೀತಿಯ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಕೋರ್ಟ್​ಗೆ ಮಾಹಿತಿ ನೀಡಿದೆ.

‘ಕೆಲಸಗಾರರು ಕಾರ್ಯಸ್ಥಳದಲ್ಲಿಯೇ ಇದ್ದು ಕೆಲಸ ಮಾಡುತ್ತಿದ್ದಾರೆ..' ವಿಸ್ತಾ ಯೋಜನೆಯ ಮುಂದುವರಿಸಿದ್ದನ್ನು ಹೈಕೋರ್ಟ್​ನಲ್ಲಿ ಸಮರ್ಥಿಸಿಕೊಂಡ ಕೇಂದ್ರ
ದೆಹಲಿ ಹೈಕೋರ್ಟ್
Follow us
Lakshmi Hegde
|

Updated on: May 11, 2021 | 3:41 PM

ದೆಹಲಿಯಲ್ಲಿ ಕರ್ಫ್ಯೂ ಹೇರುವುದಕ್ಕೂ ಮೊದಲೇ ಕೇಂದ್ರ ವಿಸ್ತಾ ಯೋಜನೆಯ ಕೆಲಸಗಳು ಪ್ರಾರಂಭವಾಗಿವೆ. ಇಲ್ಲಿ ಸುಮಾರು 400 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕೊವಿಡ್​-19 ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಸರ್ಕಾರದ ಮಾರ್ಗಸೂಚಿಯ ಅನ್ವಯ ಕಾರ್ಮಿಕರೆಲ್ಲ ಸ್ಥಳದಲ್ಲಿಯೇ ವಾಸವಾಗಿದ್ದು, ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್​ಗೆ ತಿಳಿಸಿದೆ.

ಕೊವಿಡ್​ 19 ಉಲ್ಬಣಿಸುತ್ತಿರುವ ಸಮಯದಲ್ಲಿ ವಿಸ್ತಾ ಯೋಜನೆಯಡಿ ನಡೆಯುತ್ತಿರುವ ನೂತನ ಸಂಸತ್​ ಭವನ ಸೇರಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಮಧ್ಯಂತರ ತಡೆ ನೀಡುವಂತೆ ಸಲ್ಲಿಸಲಾಗಿದ ಅರ್ಜಿಯ ವಿಚಾರಣೆ ಇಂದು ನಡೆಸಿದ ಹೈಕೋರ್ಟ್​ ನಾಳೆಗೆ ಮುಂದೂಡಿದೆ. ಇನ್ನು ಇಂದು ವಿಸ್ತಾ ಯೋಜನೆ ಕೆಲಸದ ಬಗ್ಗೆ ಹೈಕೋರ್ಟ್​ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ, ಸುಮಾರು 250 ಕೆಲಸಗಾರರು ಅಲ್ಲಿಯೇ ಸ್ಥಳದಲ್ಲಿಯೇ ಇದ್ದು ಕೆಲಸ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಅವರಿಗೆ ಸ್ಥಳಾವಕಾಶ ಕಲ್ಪಿಸಿಕೊಡಲಾಗಿದೆ. ಅದರೊಂದಿಗೆ ಕೊವಿಡ್​ 19 ನಿಯಂತ್ರಣಾ ಕ್ರಮಗಳನ್ನೂ ಅಲ್ಲಿ ಅಳವಡಿಸಲಾಗಿದೆ.

ಎಲ್ಲ ಕಾರ್ಮಿಕರಿಗೂ ಆರೋಗ್ಯ ವಿಮೆ ವ್ಯವಸ್ಥೆಯಾಗಿದೆ. ಅಲ್ಲದೆ, ಕೆಲಸದ ಸ್ಥಳದಲ್ಲಿ ಆರ್​ಟಿ-ಪಿಸಿಆರ್​ ತಪಾಸಣೆ, ಐಸೋಲೇಶನ್​ ಮತ್ತು ಎಲ್ಲ ರೀತಿಯ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಕೋರ್ಟ್​ಗೆ ಮಾಹಿತಿ ನೀಡಿದೆ. ಅಲ್ಲದೆ ಕರ್ಫ್ಯೂ ಸಮಯದಲ್ಲಿ ಕೂಡ ಕಾರ್ಮಿಕರು ಸ್ಥಳದಲ್ಲೇ ವಾಸವಾಗಿದ್ದು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಬಹುದು ಎಂದು 19-04-2021ರ ಡಿಡಿಎಂಎ( ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ)ಯ ಆದೇಶದ ಎಂಟನೇ ಪ್ರತಿಯಲ್ಲಿ ಉಲ್ಲೇಖವಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್​ಗೆ ತಿಳಿಸಿದೆ.

ಇನ್ನು ಕೆಲಸಗಾರರನ್ನು ಪ್ರತಿದಿನ ಸಾರೈ ಕಾಳೆ ಕ್ಯಾಂಪ್​ನಿಂದ ಕರೆದುಕೊಂಡು ಬಂದು, ನಂತರ ಅಲ್ಲಿಗೆ ಕಳಿಸಲಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖವಾಗಿದ್ದ ವಿಚಾರವನ್ನು ಅಲ್ಲಗಳೆದ ಸರ್ಕಾರ, ಈಗ ವಿಸ್ತಾ ಯೋಜನೆಯಡಿ ಎಷ್ಟು ಮಂದಿ ಕೆಲಸ ಮಾಡುತ್ತಿದ್ದಾರೋ, ಅವರೆಲ್ಲರೂ ಸ್ಥಳದಲ್ಲಿಯೇ ವಾಸವಾಗಿದ್ದುಕೊಂಡೇ ಕೆಲಸ ಮುಂದುವರಿಸಿದ್ದಾರೆ. ಕಾಮಗಾರಿ 2021ರ ನವೆಂಬರ್​ರಷ್ಟರಲ್ಲಿ ಮುಗಿಯಲಿದೆ ಎಂದು ಹೇಳಿದೆ. ದೇಶಾದ್ಯಂತ ಉಲ್ಬಣವಾಗುತ್ತಿರುವ ಕೊವಿಡ್​ 19 ಸೋಂಕಿನ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಕಾಮಗಾರಿಳನ್ನೂ ನಿಲ್ಲಿಸಲಾಗಿದೆ. ಈ ಹೊತ್ತಲ್ಲಿ ವಿಸ್ತಾ ಯೋಜನೆಯಡಿ ಮಾಡಲಾಗುತ್ತಿರುವ ಮರು ಅಭಿವೃದ್ಧಿ ಕಾರ್ಯಗಳನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ. ಇಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಸೋಂಕಿನ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇವರು ದಿನವೂ ಕಾರ್ಯಸ್ಥಳ ಮತ್ತು ಕ್ಯಾಂಪ್​ಗಳಿಗೆ ಓಡಾಡುತ್ತಿರುವುದರಿಂದ ಬೇರೆಯವರಿಗೂ ಇವರಿಂದ ಕೊರೊನಾ ಸೋಂಕು ತಗಲುವ ಅಪಾಯ ಇರುತ್ತದೆ. ಹಾಗಾಗಿ ವಿಸ್ತಾ ಯೋಜನೆ ಕಾಮಗಾರಿಗೆ ಮಧ್ಯಂತರ ತಡೆ ನೀಡಬೇಕು ಎಂದು ಟ್ರಾನ್ಸ್​ಲೇಟರ್​ ಅನ್ಯಾ ಮಲ್ಹೋತ್ರಾ ಮತ್ತು ಇತಿಹಾಸ ತಜ್ಞ ಸೊಹೇಲ್​ ಹಷ್ಮಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ಸಿದ್ಧಾರ್ಥ್​ ಮಲ್ಹೋತ್ರಾ ವಾದ ಮಂಡನೆ ಮಾಡಿದ್ದರು. ಮುಖ್ಯ ನ್ಯಾಯಾಧೀಶ ಡಿ.ಎನ್​.ಪಟೇಲ್​ ಮತ್ತು ನ್ಯಾ. ಜಸ್ಮೀತ್ ಸಿಂಗ್​ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: ತಾಯಿಯ ಮುಖ ನೋಡದೆ ಮಕ್ಕಳ ಕಣ್ಣಿರು; ಹಾವೇರಿ ಶವಗಾರ ಸಿಬ್ಬಂದಿಯ ಯಡವಟ್ಟಿನಿಂದ ಮೃತ ದೇಹ ಅದಲು ಬದಲು

ಇನ್ನೂ ನಿಂತಿಲ್ಲ ಆಸ್ಪತ್ರೆಗಳ ಧನದಾಹ.. ಹಣ ಕೊಟ್ರೆ ಮಾತ್ರ ಮೃತ ದೇಹ ಕೊಡೋದು ಅಂತಿವೆ ಕರಾಳ ಆಸ್ಪತ್ರೆಗಳು