ದೇಶದ ವಿರುದ್ಧ “ವಿನಾಶಕಾರಿ ನಿರೂಪಣೆ” ರೂಪಿಸುತ್ತಿರುವ ಬಗ್ಗೆ ಜನರು ಅರಿತುಕೊಳ್ಳಬೇಕು: ಜಗದೀಪ್ ಧನಕರ್
ದೇಶದ ಬೆಳವಣಿಗೆಯ ಪಥವನ್ನು ತಗ್ಗಿಸಲು ಮತ್ತು ಕ್ರಿಯಾತ್ಮಕ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ತಗ್ಗಿಸಲು ಭಾರತ ವಿರೋಧಿ ನಿರೂಪಣೆಗಳನ್ನು ಹರಡಲಾಗುತ್ತಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.
ದೆಹಲಿ: ಭಾರತದ ಕುರಿತು ಯುಕೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಇತ್ತೀಚೆಗೆ ನೀಡಿದ ಹೇಳಿಕೆಯ ಬಗ್ಗೆ ರಾಜಕೀಯ ವಲಯದಲ್ಲಿ ಬಾರಿ ಕೋಲಾಹಲ ಸೃಷ್ಟಿಸಿತ್ತು. ಇದೀಗ ಈ ಬಗ್ಗೆ ಭಾರತದ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ (Jagdeep Dhankhar) ಅವರು ದೇಶದ ವಿರುದ್ಧ “ವಿನಾಶಕಾರಿ ನಿರೂಪಣೆಗಳನ್ನು” ರೂಪಿಸುತ್ತಿರುವ ಇನ್‌ಕ್ಯುಬೇಟರ್‌ಗಳು ಮತ್ತು ವಿತರಕರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ತಮಿಳುನಾಡಿನ ಮಾಜಿ ರಾಜ್ಯಪಾಲ ಪಿ.ಎಸ್.ರಾಮಮೋಹನ್ ರಾವ್ ಅವರ ಸ್ಮರಣ ಸಂಚಿಕೆ ‘ಗವರ್ನರ್‌ಪೇಟ್ ಟು ಗವರ್ನರ್ ಹೌಸ್: ಎ ಹಿಕ್ಸ್ ಒಡಿಸ್ಸಿ ಪುಸ್ತಕವನ್ನು ದೆಹಲಿಯಲ್ಲಿ ಬಿಡುಗಡೆಗೊಳಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ದೇಶದ ಬೆಳವಣಿಗೆಯ ಪಥವನ್ನು ತಗ್ಗಿಸಲು ಮತ್ತು ಕ್ರಿಯಾತ್ಮಕ ಪ್ರಜಾಪ್ರಭುತ್ವ, ಸಾಂವಿಧಾನಿಕ ಸಂಸ್ಥೆಗಳನ್ನು ತಗ್ಗಿಸಲು ಭಾರತ ವಿರೋಧಿ ನಿರೂಪಣೆಗಳನ್ನು ಹರಡಲಾಗುತ್ತಿದೆ. ಇಂತಹ ಭಾರತ-ವಿರೋಧಿ ನಿರೂಪಣೆಗಳ ಬಗ್ಗೆ ಜನರು ಅರಿತುಕೊಳ್ಳಬೇಕು ಎಂದು ಉಪರಾಷ್ಟ್ರಪತಿ ಹೇಳಿದರು.
ಭಾರತವು ಹಿಂದೆಂದೂ ಕಾಣದ ರೀತಿಯಲ್ಲಿ ಬೆಳೆಯುತ್ತಿದೆ. ಈ ಬೆಳವಣೆಗೆಯನ್ನು ತಡೆಯಲು ಸಾಧ್ಯವಿಲ್ಲ. ರಾಷ್ಟ್ರದ ಜಾಗತಿಕ ಪ್ರಸ್ತುತತೆ ಮತ್ತು ಮನ್ನಣೆಯು ಹಿಂದೆಂದೂ ಇಲ್ಲದ ಮಟ್ಟದಲ್ಲಿದೆ. ಈ ಬೆಳವಣಿಗೆ ಸುಲಭವಾಗಿಲ್ಲ ಇದರ ಮುಂದೆ ಅನೇಕ ಸವಾಲುಗಳು ಇದೆ. ಇಲ್ಲಿ ಕೆಲವು ಬುದ್ಧಿಜೀವಿ ಜನರು ದೇಶದ ಬೆಳವಣಿಗೆಯ ಪಥವನ್ನು ತಗ್ಗಿಸಲು ಮತ್ತು ನಮ್ಮ ಕ್ರಿಯಾತ್ಮಕ ಪ್ರಜಾಪ್ರಭುತ್ವ, ಸಾಂವಿಧಾನಿಕ ಸಂಸ್ಥೆಗಳನ್ನು ಕಳಂಕಗೊಳಿಸಲು ವಿನಾಶಕಾರಿ ನಿರೂಪಣೆಗಳನ್ನು ರೂಪಿಸುವ ಭಾರತೀಯ ವಿರೋಧಿ ಶಕ್ತಿಗಳ ಬಗ್ಗೆ ನಾವು ತಿಳಿದುಕೊಳ್ಳಬೇಕು. ಇಂತಹ ವಿಚಾರಗಳನ್ನು ತಡೆಯಲು ಸರಿಯಾದ ಕ್ರಮದ ಅಗತ್ಯ ಇದೆ. ಜನರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಇದನ್ನೂ ಓದಿ;ರಾಹುಲ್ ಗಾಂಧಿ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ: ಮಲ್ಲಿಕಾರ್ಜುನ ಖರ್ಗೆ
ಪಿ.ಎಸ್.ರಾಮಮೋಹನ್ ರಾವ್ ಅವರ ಸ್ಮರಣ ಸಂಚಿಕೆ ಕಾರ್ಯಕ್ರಮದಲ್ಲಿ ಪಿ.ಎಸ್.ರಾಮಮೋಹನ್ ರಾವ್ ಸಾರ್ವಜನಿಕ ಜೀವನಕ್ಕೆ ನೀಡಿದ ಕೊಡುಗೆಗಳಿಗಾಗಿ ಮತ್ತು ಅವರ ಒಳನೋಟವುಳ್ಳ ಅನುಭವಗಳನ್ನು ಅವರ ಆತ್ಮಚರಿತ್ರೆಯಲ್ಲಿ ಹಂಚಿಕೊಂಡಿದ್ದಕ್ಕಾಗಿ ಅವರು ಮಾಜಿ ರಾಜ್ಯಪಾಲರನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಭಾರತದ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಹರಿಯಾಣದ ರಾಜ್ಯಪಾಲರು, ಬಂಡಾರು ದತ್ತಾತ್ರೇಯ, ತಮಿಳುನಾಡಿನ ಮಾಜಿ ರಾಜ್ಯಪಾಲರು ಮತ್ತು ಲೇಖಕರು, ಪಿ ಎಸ್ ರಾಮಮೋಹನ್ ರಾವ್, ಸಂಸದರು, ಕೆ ಕೇಶವ ರಾವ್, ವೈಎಸ್ ಚೌಧರಿ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Published On - 10:44 am, Mon, 20 March 23