AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಗಾದ್ರೆ ಕೊರೊನಾಗೆ ಯಾವ ಟೆಸ್ಟ್ ಬೇಡವಾ? ಏನಿದು ಸಾಮಾಜಿಕ ಜಾಲತಾಣದ ಸುಳ್​ ಸುದ್ದಿ ಹಕೀಕತ್ತು?

ಕಳೆದ ಎರಡು ದಿನದಿಂದ ವಿಶ್ವ ಆರೋಗ್ಯ ಸಂಸ್ಥೆಯ ತಂತ್ರಜ್ಞರನ್ನು ಉಲ್ಲೇಖಿಸಿ ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಟೆಸ್ಟ್ ಗಳೂ ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದು ಇದೀಗ ಸಾಬೀತಾಗಿದೆ. ಸುಳ್ಳು ಸುದ್ದಿ ಹೇಗೆ ಹರಡಿತು? ವಿಶ್ವ ಆರೋಗ್ಯ ಸಂಸ್ಥೆಯ (WHO) ತಾಂತ್ರಿಕ ವಿಭಾಗದ ಡಾ. ಮಾರಿಯಾ ವಾನ್ ಕೆರ್ಖೊವಾ ಅವರು ಒಂದು ವಿಡಿಯೋದಲ್ಲಿ ಮಾತನಾಡಿದ್ದನ್ನು ತಿರುಚಿ ಈ ಸುದ್ದಿ ಹಬ್ಬಿಸಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿಯ ಪ್ರಕಾರ, ಕೊರೋನಾಕ್ಕೆ ಇಲ್ಲೀವರೆಗೆ ವಿಶ್ವ ಆರೋಗ್ಯ […]

ಹಾಗಾದ್ರೆ ಕೊರೊನಾಗೆ ಯಾವ ಟೆಸ್ಟ್  ಬೇಡವಾ? ಏನಿದು ಸಾಮಾಜಿಕ ಜಾಲತಾಣದ ಸುಳ್​ ಸುದ್ದಿ ಹಕೀಕತ್ತು?
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​
|

Updated on: Oct 23, 2020 | 1:45 PM

Share

ಕಳೆದ ಎರಡು ದಿನದಿಂದ ವಿಶ್ವ ಆರೋಗ್ಯ ಸಂಸ್ಥೆಯ ತಂತ್ರಜ್ಞರನ್ನು ಉಲ್ಲೇಖಿಸಿ ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಟೆಸ್ಟ್ ಗಳೂ ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದು ಇದೀಗ ಸಾಬೀತಾಗಿದೆ.

ಸುಳ್ಳು ಸುದ್ದಿ ಹೇಗೆ ಹರಡಿತು? ವಿಶ್ವ ಆರೋಗ್ಯ ಸಂಸ್ಥೆಯ (WHO) ತಾಂತ್ರಿಕ ವಿಭಾಗದ ಡಾ. ಮಾರಿಯಾ ವಾನ್ ಕೆರ್ಖೊವಾ ಅವರು ಒಂದು ವಿಡಿಯೋದಲ್ಲಿ ಮಾತನಾಡಿದ್ದನ್ನು ತಿರುಚಿ ಈ ಸುದ್ದಿ ಹಬ್ಬಿಸಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿಯ ಪ್ರಕಾರ, ಕೊರೋನಾಕ್ಕೆ ಇಲ್ಲೀವರೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಸೂಚಿಸಿದ ಚಿಕಿತ್ಸಾ ವಿಧಾನವೇ ಬೇಡ. ಸೋಂಕಿತರನ್ನು ಬೇರೆ ಇಡುವುದಾಗಲೀ, ಬೇರೆ ಬೇರೆ ಪರೀಕ್ಷೆ ಮಾಡುವುದಾಗಲಿ ಬೇಡ ಎಂಬ ವಿಡಿಯೋ ಹರಿದಾಡುತ್ತಿತ್ತು. ಈಗ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್​ ಮತ್ತು ಇನ್ನಿತರೆ ಸಂಸ್ಥೆಗಳು ಸುದ್ದಿ ಮೂಲ ಹುಡುಕಿ ಇದು ಸುಳ್ಳು ಎಂದು ಸಾರಿವೆ.

ಡಾ. ಮಾರಿಯಾ ಹೇಳಿದ್ದೇನು? ನಮ್ಮ ಬಳಿ ಇರುವ ದತ್ತಾಂಶದ (data) ಪ್ರಕಾರ, ರೋಗದ ಲಕ್ಷಣ ಇಲ್ಲದ (asymptomatic) ಕೊರೊನಾ ರೋಗಿಗಳು ರೋಗವನ್ನು ಹರಡುತ್ತಾರೆ ಎಂಬದು ಪ್ರಾಯಶಃ ಅಸಾಧ್ಯ ಎಂದು ಅವರು ಹೇಳಿದ್ದಾರೆ. ಆ ವಿಡಿಯೋ ಇಟ್ಟುಕೊಂಡು ಒಂದು ಮಾಹಿತಿಯನ್ನ ತಯಾರು ಮಾಡುತ್ತಾರೆ. ಆ ಪ್ರಕಾರ, ವಿ.ಸಂ. ಉಲ್ಟಾ ಹೊಡೀತು (WHO makes U-turn) ಎಂಬ ಸಂದೇಶ ಸಾಮಾಜಿಕ ಜಾಲತಾಣದ ಸಂದೇಶ ಹರಿದಾಡಿತು. ಆದರೆ, ವಿ.ಸಂ. (WHO) ವೆಬ್ ಸೈಟ್ ನಲ್ಲಿ ಇದುವರೆಗೂ ಈ ಕುರಿತು ಯಾವ ಮಾಹಿತಿಯೂ ಇಲ್ಲ. ಅಂದರೆ, ಈ ಮೊದಲೇ ಹೇಳಿದಂತೆ, ಉಸಿರು ಮತ್ತು ಎಂಜಲು ಮುಂತಾದವುಗಳ ಮೂಲಕ ಈ ವೈರಸ್ ಇನ್ನೊಬ್ಬರಿಗೆ ಹೇಗೆ ಹರಡುತ್ತೆ ಎಂಬ ಅಂಶವಾಗಲೀ ಹಾಗೂ ಕೊರೊನಾ ಚಿಕಿತ್ಸಾ ವಿಧಾನ ಪದ್ಧತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಇದನ್ನು ಜನ ಗಮನಿಸಬೇಕು ಮತ್ತು ಸುಳ್ಳು ಸುದ್ದಿಗೆ ಕಿವಿಗೊಡಬಾರದು.

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್