Petrol Diesel Price | ಅಬ್ಬಾ ಸಧ್ಯ! ಸತತ ಐದನೇ ದಿನವೂ ಪೆಟ್ರೋಲ್-ಡೀಸೆಲ್​ ಬೆಲೆಗಳಲ್ಲಿ ಬದಲಾವಣೆಯಿಲ್ಲ..

| Updated By: ಸಾಧು ಶ್ರೀನಾಥ್​

Updated on: Mar 04, 2021 | 9:56 AM

Petrol Diesel Rate: ಪೆಟ್ರೋಲ್​ ಮತ್ತು ಡೀಸೆಲ್​ ದರದಲ್ಲಿ ಸತತ ಐದನೇ ದಿನವೂ ಯಾವುದೇ ಬದಲಾವಣೆಗಳಿಲ್ಲ. ಏರುತ್ತಲೇ ಇದ್ದ ಇಂಧನ ದರ ಗಮನಿಸುತ್ತಿದ್ದ ಗ್ರಾಹಕರು ಕೊಂಚ ನಿರಾಳರಾಗಿದ್ದಾರೆ.

Petrol Diesel Price | ಅಬ್ಬಾ ಸಧ್ಯ! ಸತತ ಐದನೇ ದಿನವೂ ಪೆಟ್ರೋಲ್-ಡೀಸೆಲ್​ ಬೆಲೆಗಳಲ್ಲಿ ಬದಲಾವಣೆಯಿಲ್ಲ..
ಪಿಟಿಐ ಚಿತ್ರ
Follow us on

ಬೆಂಗಳೂರು: ಸರ್ಕಾರಗಳು ತೈಲ ಬೆಲೆಗಳನ್ನು ಇಳಿಸುತ್ತದೆಯೋ, ಇಲ್ಲವೋ ಅದು ಬೇರೆ ಮಾತು. ಆದರೆ ಸದ್ಯಕ್ಕೆ ಬೆಲೆ ಏರಿಸದೆ ಸ್ಥಿರತೆ ಕಾಪಾಡಿಕಿಂಡರೆ ಗ್ರಾಹಕರಿಗೆ ಅದೇ ಹಬ್ಬವಂತಾಗಿದೆ ಇಂದಿನ ಬೆಲೆ ಏರಿಕೆ ದಿನಗಳಲ್ಲಿ! ಹಾಗೆಂದೇ.. ರಾಜ್ಯ ತೈಲ ಕಂಪನಿಗಳು ಸತತ ಐದನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಐದನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿ ಉಳಿದಿದೆ. ಇನ್ನೇನು ಶತಕ ಬಾರಿಸಲು ಸಜ್ಜಾಗಿದ್ದ ಇಂಧನ ದರ ಏರಿಕೆಯಾಗದೆ ಸ್ಥಿರವಾಗಿ ಉಳಿದಿರುವುದು ಗ್ರಾಹಕರಿಗೆ ಸಮಾಧಾನಕರ ಸಂಗತಿ.ಕಳೆದ ಶನಿವಾರ ಡೀಸೆಲ್ ಬೆಲೆ 15 ರಿಂದ 16 ಪೈಸೆ, ಪೆಟ್ರೋಲ್ ಬೆಲೆ 24 ರಿಂದ 25 ಪೈಸೆ ಏರಿಕೆಯಾಗಿದೆ. ತದನಂತರ ದರದಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ.

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 91.17 ರೂಪಾಯಿ, ಡೀಸೆಲ್ ಬೆಲೆ ಲೀಟರಿಗೆ 81.47 ರೂಪಾಯಿ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 97.57 ರೂಪಾಯಿ ಮತ್ತು ಡೀಸೆಲ್ ಬೆಲೆ ಲೀಟರಿಗೆ 88.60 ರೂಪಾಯಿಗೆ ಮಾರಾಟವಾಗುತ್ತಿದೆ.

ವಿವಿಧ ನಗರಗಳಲ್ಲಿ ಡೀಸೆಲ್​ ಮತ್ತು ಪೆಟ್ರೋಲ್ ದರ ಈ ಕೆಳಗಿನಂತಿದೆ.
ನಗರ              ಡೀಸೆಲ್​ ದರ(ಪ್ರತಿ ಲೀಟರಿಗೆ)      ಪೆಟ್ರೋಲ್​ ದರ (ಪ್ರತಿ ಲೀಟರಿಗೆ)
ದೆಹಲಿ              81.47 ರೂ.                                   91.17 ರೂ.
ಕೋಲ್ಕತಾ       84.35 ರೂ.                                   91.35 ರೂ.
ಮುಂಬೈ           88.60 ರೂ.                                 97.57 ರೂ.
ಚೆನ್ನೈ                86.45                                         93.11ರೂ.

ಕೆಲವು ಮಾನದಂಡಗಳ ಆಧಾರದ ಮೇಲೆ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನಿಗದಿ ಮಾಡುತ್ತವೆ. ಪೆಟ್ರೋಲ್​ ಹಾಗೂ ಡೀಸೆಲ್​ ದರ ಏರಿಕೆ ಖಂಡಿಸಿ ಅದೆಷ್ಟೋ ಪ್ರತಿಭಟನೆಗಳು ನಡೆದಿವೆ. ಹಾಗೇ ಸಾಮಾಜಿಕ ಜಾಲತಾಣಗಳಲ್ಲೂ ಕೂಡಾ ಈ ಕುರಿತಂತೆ ಚರ್ಚೆಗಳು, ವಿರೋಧಗಳು ವ್ಯಕ್ತವಾಗಿವೆ. ಅಡುಗೆ ಅನಿಲ ಬೆಲೆ ಏರಿಕೆಯಿಂದಾಗಿ ರಾಜ್ಯದ ಮಹಿಳೆಯರು ಅತಿ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದರಿಂದ ದಿನಬಳಕೆ ವಸ್ತುಗಳ ಬೆಲೆಯೂ ಹೆಚ್ಚಾಗುತ್ತಿದ್ದು, ಗೃಹ ನಿರ್ವಹಣೆ ಕಷ್ಟಕರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಟ್ವೀಟ್​ ಹಂಚಿಕೊಂಡಿದ್ದರು.



ಇನ್ನು, ಬೀಳಗಿ ಮತಕ್ಷೇತ್ರದ ಕಲಾದಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನೆಡೆದಿದೆ. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಜೆ.ಟಿ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಹಿರಿಯ ಕಿರಿಯ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Petrol Diesel Price: ಭಾರತದಲ್ಲಿ ಪೆಟ್ರೋಲ್, ಡೀಸೆಲ್‌ ಮೇಲಿನ‌ ತೆರಿಗೆ-ಸುಂಕ ಇಳಿಕೆ ಸಾಧ್ಯತೆ; ತೈಲ ಕಂಪನಿ, ರಾಜ್ಯ ಸರ್ಕಾರಗಳ ಜತೆ ಕೇಂದ್ರ ಮಾತುಕತೆ

ಇದನ್ನೂ ಓದಿ: Petrol Diesel Price | ಪೆಟ್ರೋಲ್ ದರ ನರ್ವಸ್ ನೈಂಟೀಸ್​​ನಲ್ಲಿ.. ಶತಕ ಗ್ಯಾರೆಂಟಿ ಎಂದು ಗ್ರಾಹಕರು ಕಂಗಾಲು!