ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಇಂದು ಶುಕ್ರವಾರವೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಪ್ರತಿದಿನ ಏರುತ್ತಲೇ ಸಾಗುತ್ತಿದ್ದ ಇಂಧನ ದರವನ್ನು ನೋಡುತ್ತಿದ್ದ ಜನರ ಕೋಪಕ್ಕೆ ಗುರಿಯಾಗಿತ್ತು. ಇಂದು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 94.22 ರೂಪಾಯಿಗೆ ಮಾರಾಟವಾಗುತ್ತಿದೆ. ದೇಶದಲ್ಲಿ ಸತತ ಆರು ದಿನಗಳಿಂದ ದರ ಬದಲಾವಣೆ ಕಾಣದ ಜನರು ಕೊಂಚ ಸಮಾಧಾನಗೊಂಡಿದ್ದಾರೆ. ಆದರೆ, ಗ್ರಾಹಕರಲ್ಲಿ ಇನ್ನೂ ಸ್ಥಿರವಾಗಿಯೇ ಉಳಿದ ಒಂದೇ ಒಂದು ಪ್ರಶ್ನೆ ಎಂದರೆ, ದರ ಇಳಿಕೆಯತ್ತ ಮುಖ ಮಾಡುವುದು ಯಾವಾಗ?
ಇಂಧನ ದರವನ್ನು ಜಿಎಸ್ಟಿ(ಸರಕು ಮತ್ತು ಸೇವಾ ತೆರಿಗೆ) ವ್ಯಾಪ್ತಿಯಲ್ಲಿ ತಂದರೆ ದರ ಇಳಿಕೆ ಕಾಣುತ್ತದೆ. ಪ್ರತಿ ಲೀಟರಿಗೆ 100 ರೂಪಾಯಿ ತಲುಪಿದ ಪೆಟ್ರೋಲ್ ದರ 75 ರೂಪಾಯಿಗೆ ಇಳಿಯುತ್ತದೆ. ಹಾಗೂ ಡೀಸೆಲ್ ದರ 68 ರೂಪಾಯಿಗೆ ಇಳಿಯುತ್ತದೆ. ಆದರೆ, ಇದನ್ನು ಸರ್ಕಾರ ಈ ಕುರಿತಂತೆ ನಿರ್ಧಾರ ಕೈಗೊಳ್ಳು ಮುಂದಾಗುತ್ತಿಲ್ಲ. ಏಕೆಂದರೆ ಜಿಎಸ್ಟಿ ವ್ಯಾಪ್ತಿಗೆ ಇಂಧನ ದರವನ್ನು ತಂದರೆ, ಸರ್ಕಾರಗಳಿಗೆ ಆದಾಯದಲ್ಲಿ ಇಳಿಕೆ ಕಾಣುತ್ತವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ದೇಶದ ವಿವಿಧ ನಗರಗಳಲ್ಲು ಈಗಾಗಲೇ ದರ ಗಗನಕ್ಕೇರಿದೆ. ಕಳೆದ ಕೆಲವು ವಾರಗಳಿಂದ ಬೆಲೆಗಳನ್ನು ಹೆಚ್ಚಿಸುತ್ತಲೇ ಇದ್ದವು ತೈಲ ಕಂಪನಿಗಳು. ಪೆಟ್ರೋಲ್, ಡೀಸೆಲ್ ದರದಲ್ಲಿ ಕಳೆದ ಶನಿವಾರ, ಬೆಲೆಗಳು 25 ಪೈಸೆ ಹೆಚ್ಚಾಗಿದೆ. ಆದರೆ ಅಂದಿನಿಂದ ಇಂದಿನವರೆಗೆ ಏರುತ್ತಿರುವ ಬೆಲೆಗಳು ಸಧ್ಯ ವಿರಾಮ ತೆಗೆದುಕೊಂಡಿದೆ ಎಂದೇ ಹೇಳಬಹುದು. ಇಂದು ಕೂಡಾ ಶನಿವಾರದ ಬೆಲೆಯನ್ನೇ ಕಾಯ್ದಿರಿಸಿಕೊಂಡು ಬಂದಿದೆ. ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ನಿರಂತರ ಹೆಚ್ಚಳದಿಂದಾಗಿ, ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 91.17 ರೂಪಾಯಿ ಹಾಗೂ ಡೀಸೆಲ್ ಬೆಲೆ ಲೀಟರಿಗೆ 81.47 ರೂಪಾಯಿಗೆ ಏರಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆಯನ್ನು 13 ಪೈಸೆ ಹೆಚ್ಚಿಸಲಾದ ನಂತರ ಪೆಟ್ರೋಲ್ ಬೆಲೆ ಲೀಟರಿಗೆ 97.57 ರೂಪಾಯಿ. ಹಾಗೂ ಡೀಸೆಲ್ ಪ್ರತಿ ಲೀಟರಿಗೆ 88.60 ರೂಪಾಯಿ ಆಗಿದೆ. ದೆಹಲಿ ಮತ್ತು ಮುಂಬಯಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ದರ ಏರಿಕೆಯತ್ತಲೇ ಸಾಗುತ್ತಿದ್ದರೆ, ಮುಂಬೈನಲ್ಲಿ ಪೆಟ್ರೋಲ್ ಇನ್ನೇನು 100 ರೂಪಾಯಿ ತಲುಪುವ ಹಂತದಲ್ಲಿದೆ.
ಹಾಗೆಯೇ, ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 91.35 ಲೀಟರ್ ಆಗಿದೆ. ಡೀಸೆಲ್ ಬಗ್ಗೆ ಮಾತನಾಡುವುದಾದರೆ, ದರ ಇಂದು ಪ್ರತಿ ಲೀಟರಿಗೆ 84.35 ರೂಪಾಯಿ ಇದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 22 ಪೈಸೆ ಹೆಚ್ಚಾದ ನಂತರದಲ್ಲಿ ಇದೀಗ ಪೆಟ್ರೋಲ್ ಪ್ರತಿ ಲೀಟರಿಗೆ 93.11 ರೂಪಾಯಿಗೆ ಮಾರಾಟವಾಗುತ್ತಿದೆ.
ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಹೇಗಿದೆ? ಗ್ರಾಹಕರು ಇಂಧನ ದರವನ್ನು ಎಷ್ಟಕ್ಕೆ ಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
ದೆಹಲಿ ಪೆಟ್ರೋಲ್ ಬೆಲೆ ಇಂದು ಪ್ರತಿ ಲೀಟರಿಗೆ 91.17 ರೂಪಾಯಿ. ಮುಂಬೈನಲ್ಲಿ ಪ್ರತಿ ಲೀಟರ್ ಬೆಲೆ 97.57 ರೂಪಾಯಿ, ಕೋಲ್ಕತಾದಲ್ಲಿ ಪ್ರತಿ ಲೀಟರಿಗೆ ದರ 91.35 ರೂಪಾಯಿಗೆ ಮಾರಾಟವಾಗುತ್ತಿದೆ. ಚೆನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 93.11 ರೂಪಾಯಿ ಹಾಗೂ ನೋಯ್ಡಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 89.38 ರೂಪಾಯಿಗೆ ಮಾರಾಟವಾಗುತ್ತಿದೆ.
ಪ್ರಮುಖ ನಗರಗಳಲ್ಲಿ ಡೀಸೆಲ್ ಬೆಲೆ
ದೆಹಲಿ ಡೀಸೆಲ್ ಬೆಲೆ ಇಂದು ಪ್ರತಿ ಲೀಟರಿಗೆ 81.47 ರೂಪಾಯಿ ಇದೆ. ಮುಂಬೈನಲ್ಲಿ ಪ್ರತಿ ಲೀಟರಿಗೆ ಡೀಸೆಲ್ ದರ 88.60 ರೂಪಾಯಿ ಇದೆ. ಕೋಲ್ಕತಾ ಪ್ರತಿ ಲೀಟರ್ ದರ 84.35 ರೂಪಾಯಿ ಹಾಗೂ ಚೆನೈನಲ್ಲಿ ಪ್ರತಿ ಲೀಟರಿಗೆ 86.45 ರೂಪಾಯಿಗೆ ಮಾರಾಟವಾಗುತ್ತಿದೆ. ನೋಯ್ಡಾದಲ್ಲಿ ಪ್ರತಿ ಲೀಟರ್ ಡೀಸೆಲ್ ದರವನ್ನು ಇಂದು 81.91 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Petrol Diesel Price | ಅಬ್ಬಾ ಸಧ್ಯ! ಸತತ ಐದನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಬದಲಾವಣೆಯಿಲ್ಲ..
Published On - 9:44 am, Fri, 5 March 21