Petrol Diesel Price Today: ಗ್ರಾಹಕರಿಗೆ ಸಂತೋಷದ ಸುದ್ದಿ.. ಸತತ ಎರಡನೇ ದಿನವೂ ಪೆಟ್ರೋಲ್, ಡೀಸೆಲ್ ದರ ಇಳಿಕೆ!
Petrol Diesel Rate In Bangalore Today: ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಸತತವಾಗಿ ಎರಡನೇ ದಿನವೂ ಪೆಟ್ರೋಲ್, ಡೀಸೆಲ್ ದರ ಇಳಿಕೆಯತ್ತ ಸಾಗಿದೆ. ಇಳಿಕೆಯ ನಂತರ ಇಂಧನ ದರ ಹೇಗಿದೆ ಎಂಬುದರ ವಿವರ ಇಲ್ಲಿದೆ.
ಬೆಂಗಳೂರು: ಸರ್ಕಾರಿ ತೈಲ ಕಂಪನಿಗಳು ಸತತವಾಗಿ ಎರಡನೇ ದಿನವೂ ಪೆಟ್ರೋಲ್, ಡೀಸೆಲ್ ದರವನ್ನು ಕಡಿಮೆ ಮಾಡಿದೆ. ಇಂದು (ಮಾರ್ಚ್ 25) ಪೆಟ್ರೋಲ್ 21 ಹಾಗೂ ಡೀಸೆಲ್ 20 ಪೈಸೆ ಇಳಿಕೆಯಾಗಿದೆ. ದರ ಇಳಿಕೆಯ ನಂತರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್93.82 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ 85.74 ರೂಪಾಯಿಗೆ ಮಾರಾಟವಾಗುತ್ತಿದೆ.
ದರ ಕಡಿಮೆಯ ನಂತರ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 90.78 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೆಯೇ ಪ್ರತಿ ಲೀಟರ್ ಡೀಸೆಲ್ಅನ್ನು ಗ್ರಾಹಕರು 81.10 ರೂಪಾಯಿಗೆ ಕೊಂಡು ಕೊಳ್ಳುತ್ತಿದ್ದಾರೆ. ಹಾಗೂ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 97.19 ರೂಪಾಯಿ ಆಗಿದೆ. ಪ್ರತಿ ಲೀಟರ್ ಡೀಸೆಲ್ ದರ 88.20 ರೂಪಾಯಿಗೆ ಇಳಿದಿದೆ. ಮಾರ್ಚ್ ತಿಂಗಳಿನಲ್ಲಿಯೇ ಪೆಟ್ರೋಲಗ, ಡೀಸೆಲ್ ದರ ಎರಡನೇ ಬಾರಿ ಕುಸಿತ ಕಾಣುತ್ತಿರುವುದು. ಹಾಗಾಗಿ ದರ ಇಳಿಕೆಯಲ್ಲಿ ಪೆಟ್ರೋಲ್ ಒಟ್ಟು 39 ಪೈಸೆ ಹಾಗೂ ಡೀಸೆಲ್ 37 ಪೈಸೆ ಇಳಿಕೆಯಾಗಿದೆ.
ಕಳೆದ ತಿಂಗಳು ಫೆಬ್ರವರಿ 10ನೇ ತಾರೀಕಿನಿಂದ 26ನೇ ತಾರೀಕಿನವರೆಗೆ ದೆಶೀಯ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸರಿ ಸುಮಾರು 4 ರೂಪಾಯಿಯಿಂದ 5 ರೂಪಾಯಿಯವರೆಗೆ ಏರಿಸಿದೆ. ನಂತರ ಫೆಬ್ರವರಿ 26 ಶನಿವಾರ ಪೆಟ್ರೋಲ್ ದರ ಏರಿಕೆಯ ನಂತರದಲ್ಲಿ ಇಂಧನ ದರ ಹೆಚ್ಚಳವಾಗಿರಲಿಲ್ಲ. ಮಾರ್ಚ್ ತಿಂಗಳ ಪ್ರಾರಂಭದಿಂದಲೂ ದರ ಸ್ಥಿರತೆಯನ್ನು ಕಾಪಾಡಿಕೊಂಡಿತ್ತು. ಗ್ರಾಹಕರು ಕೊಂಚ ನಿರಾಳರಾಗಿದ್ದರೂ ಕೂಡಾ ದರ ಇಳಿಕೆಯತ್ತ ಮುಖ ಮಾಡುವುದು ಯಾವಾಗ ಎಂಬ ಪ್ರಶ್ನೆ ಮಾಡಿದ್ದರು. ಇದೀಗ ಸತತವಾಗಿ ಎರಡು ದಿನ ದರ ಇಳಿಕೆಯತ್ತ ಸಾಗಿರುವುದು ಗ್ರಾಹಕರಿಗೆ ಸಂತೋಷದ ಸುದ್ದಿ. ವಿದೇಶಿ ಅಂತರಾಷ್ಟ್ರೀಯ ಕಚ್ಚಾ ತೈಲ ದರ ಇಳಿಕೆಯತ್ತ ಸಾಗಿರುವುದರಿಂದ ಇಂಧನ ದರ ಇಳಿಕೆ ಕಂಡಿದೆ.
ಇನ್ನು, ಚೆನ್ನೈನಲ್ಲಿ ಪ್ರತಿ ಲೀಟರ್ 92.19 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೆಯೇ ಪ್ರತಿ ಲೀಟರ್ ಡೀಸೆಲ್ ದರ 88.20 ರೂಪಾಯಿ ಇದೆ. ಕೊಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.98 ರೂಪಾಯಿ ಇದೆ. ಪ್ರತಿ ಲೀಟರ್ ಡೀಸೆಲ್ 83.98 ರೂಪಾಯಿಗೆ ಮಾರಾಟವಾಗುತ್ತಿದೆ. ನೋಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ಟನ್ನು 89.08 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಪ್ರತಿ ಲೀಟರ್ ಡೀಸೆಲ್ ದರ 81.56 ರೂಪಾಯಿ ಇದೆ. ಭೂಪಾಲ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 98.81 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 80.80 ರೂಪಾಯಿ ಇದೆ. ಇನ್ನು, ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 93.11 ರೂಪಾಯಿಗೆ ಮಾರಾಟವಾಗುತ್ತಿದ್ದು, ಪ್ರತಿ ಲೀಟರ್ ಡೀಸೆಲ್ 86.35 ರೂಪಾಯಿ ಇದೆ. ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 89.01 ರೂಪಾಯಿ ಇದ್ದು, ಪ್ರತಿ ಲೀಟರ್ ಡೀಸೆಲ್ 81.50 ರೂಪಾಯಿಗೆ ಮಾರಾಟವಾಗುತ್ತಿದೆ.
ವಿವಿಧ ನಗರದ ಪೆಟ್ರೋಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html
Published On - 9:41 am, Thu, 25 March 21