Petrol Diesel Rate Today: ಪೆಟ್ರೋಲ್​, ಡೀಸೆಲ್​ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ; ನಿಮ್ಮ ನಗರದಲ್ಲಿ ತೈಲ ದರ ಎಷ್ಟಿದೆ?

|

Updated on: May 13, 2021 | 8:41 AM

Petrol Diesel Price Today: ಸರ್ಕಾರಿ ತೈಲ ಕಂಪನಿಗಳು ಹೊಸ ತೈಲ ಬೆಲೆಯನ್ನು ಬಿಡುಗಡೆ ಮಾಡಿವೆ. ಕಳೆದ ಒಂದು ವಾರದಿಂದ ಪೆಟ್ರೋಲ್​ ಮತ್ತು ಡೀಸೆಲ್​ ದರ ಹೆಚ್ಚುತ್ತಿರುವುದು ನಿಮಗೆಲ್ಲಾ ತಿಳಿದಿಯೇ ಇದೆ. ಈ ಕಾರಣದಿಂದಾಗಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಗಳೆರಡೂ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

Petrol Diesel Rate Today: ಪೆಟ್ರೋಲ್​, ಡೀಸೆಲ್​ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ; ನಿಮ್ಮ ನಗರದಲ್ಲಿ ತೈಲ ದರ ಎಷ್ಟಿದೆ?
ಪಿಟಿಐ ಚಿತ್ರ
Follow us on

ದೆಹಲಿ: ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯನ್ನು ಸರ್ಕಾರಿ ತೈಲ ಕಂಪನಿಗಳು ಬಿಡುಗಡೆ ಮಾಡಿವೆ. ಕಳೆದ ಒಂದು ವಾರದಿಂದ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಹೆಚ್ಚುತ್ತಲೇ ಇದೆ. ಈ ಕಾರಣದಿಂದಾಗಿ ತೈಲ ಬೆಲೆಗಳೆರಡೂ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಪ್ರಸ್ತುತ ಇಂದು ಮೇ 13 (ಗುರುವಾರ) ತೈಲ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92.05 ರೂ. ಇದ್ದರೆ, ಪ್ರತಿ ಲೀಟರ್​ ಡೀಸೆಲ್​ ದರ 82.61 ರೂಪಾಯಿ ಇದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 95.11 ರೂಪಾಯಿ ಆಗಿದೆ. ಹಾಗೆಯೇ ಪ್ರತಿ ಲೀಟರ್​ ಡೀಸೆಲ್​ ದರ 87.57 ರೂಪಾಯಿ ಇದೆ.

ಪೆಟ್ರೋಲ್​ ಮತ್ತು ಡೀಸೆಲ್​ ಎರಡೂ ಇಂಧನಗಳ ಬೆಲೆ ಮೇ 4ನೇ ತಾರಿಕಿನಿಂದ ಏರಿಕೆಯತ್ತ ಸಾಗುತ್ತಲೇ ಇದೆ. ಮೇ 4ರಿಂದ ದರ ಏರಿಕೆ ಕಂಡ ಪೆಟ್ರೋಲ್​, ಡೀಸೆಲ್​ ಇಲ್ಲಿಯವರೆಗೆ 7 ದಿನಗಳ ಕಾಲ ಹೆಚ್ಚಳವಾಗಿದೆ. ಈ ದರ ಹೆಚ್ಚಳದಿಂದ ಪೆಟ್ರೋಲ್​ನಲ್ಲಿ 1.65 ರೂಪಾಯಿ ಹಾಗೂ ಡೀಸೆಲ್​ನಲ್ಲಿ 1.88 ರೂಪಾಯಿ ಏರಿಕೆಯಾಗಿದೆ.

ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರ ಎಷ್ಟಿದೆ ಎಂಬುದನ್ನು ನೋಡುವುದಾದರೆ, ದೆಹಲಿಯಲ್ಲಿ ಒಂದು ಲೀಟರ್​ ಪೆಟ್ರೋಲ್​ ದರ 92.05 ರೂಪಾಯಿ ಇದೆ. ಹಾಗೂ ಒಂದು ಲೀಟರ್​ ಡೀಸೆಲ್​ ದರ 82.61 ರೂಪಾಯಿ ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 98.36 ರೂಪಾಯಿ ಇದ್ದರೆ, ಪ್ರತಿ ಲೀಟರ್​ ಡೀಸೆಲ್​ ದರ 89.75 ರೂಪಾಯಿ ಇದೆ. ಚೆನ್ನೈನಲ್ಲಿ ಒಂದು ಲೀಟರ್​ ಪೆಟ್ರೋಲ್​ ದರ 93.84 ರೂಪಾಯಿ ಇದೆ. ಹಾಗೂ ಒಂದು ಲೀಟರ್​ ಡೀಸೆಲ್​ ದರ 87.49 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92.16 ರೂಪಾಯಿ ಇದೆ. ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ85.45 ರೂಪಾಯಿ ಇದೆ.

ದರ ಏರಿಕೆಯಿಂದಾಗಿ ಹಲವೆಡೆ ಪೆಟ್ರೋಲ್​ ದರ 100 ರೂಪಾಯಿ ಗಡಿ ದಾಟಿದೆ. ಶ್ರೀಗಂಗನಗರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 102.96 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 95.33 ರೂಪಾಯಿ ಆಗಿದೆ. ಅನುಪ್ಪೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 102.66 ರೂಪಾಯಿ ಹಾಗೂ ಪ್ರತಿ ಲೀಟರ್​ ಡೀಸೆಲ್ ದರ 93.33 ರೂಪಾಯಿಗೆ ತಲುಪಿದೆ. ಇನ್ನು, ಭೋಪಾಲ್​ನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 100.08 ರೂಪಾಯಿಗೆ ತಲುಪಿದ್ದು, ಪ್ರತಿ ಲೀಟರ್​ ಡೀಸೆಲ್​ ದರ 90.95 ರೂಪಾಯಿಗೆ ತಲುಪಿದೆ.

ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html