AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಲಸಿಕಾ ಮಾರ್ಗಸೂಚಿ ಬದಲಾವಣೆಗೆ ಎನ್​ಟಿಎಜಿಐ ಶಿಫಾರಸು

ಪ್ರಕ್ರಿಯೆಯ ಪ್ರಕಾರ, ರೋಗ ನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (NTAGI) ಶಿಫಾರಸ್ಸುಗಳನ್ನು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು (NEGVAC)ಗೆ ಕಳುಹಿಸಲಾಗುವುದು. ನಂತರ ತಜ್ಞರ ಗುಂಪು ತನ್ನ ಶಿಫಾರಸುಗಳನ್ನು ಆರೋಗ್ಯ ಸಚಿವಾಲಯಕ್ಕೆ ಅನುಮೋದನೆಗಾಗಿ ಕಳುಹಿಸುತ್ತದೆ.

ಕೊವಿಡ್ ಲಸಿಕಾ ಮಾರ್ಗಸೂಚಿ ಬದಲಾವಣೆಗೆ ಎನ್​ಟಿಎಜಿಐ ಶಿಫಾರಸು
ಪ್ರಾತಿನಿಧಿಕ ಚಿತ್ರ
sandhya thejappa
sandhya thejappa|

Updated on:May 13, 2021 | 12:49 PM

Share

ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವೆ ಎಷ್ಟು ಅವಧಿಯ ಅಂತರ ಇರಬೇಕೆಂದು ಈಗ ನೀಡಲಾಗಿರುವ ಮಾರ್ಗಸೂಚಿ ಮತ್ತೆ ಮಾರ್ಪಾಡಾಗುವ ಸಾಧ್ಯತೆ ಇದೆ. ಕೊವಿಡ್ ಲಸಿಕೆಗಳ ಸಲಹಾ ಸಮಿತಿ, ರೋಗ ನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (NTAGI) ಕೆಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರವನ್ನು 6- 8 ವಾರಗಳಿಂದ 12-16 ವಾರಗಳಿಗೆ ಹೆಚ್ಚಿಸಬಹುದು. ಆರೋಗ್ಯ ಸಚಿವಾಲಯದ ಅನುಮೋದನೆಯ ನಂತರ ಶಿಫಾರಸುಗಳನ್ನು ಜಾರಿಗೆ ತರಲಾಗುವುದು. ಇದು ಶೀಘ್ರದಲ್ಲೇ ಪ್ರಕಟಣೆಯಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಮುಂದೆ ಏನು? ಪ್ರಕ್ರಿಯೆಯ ಪ್ರಕಾರ, ರೋಗ ನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (NTAGI) ಶಿಫಾರಸ್ಸುಗಳನ್ನು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು (NEGVAC)ಗೆ ಕಳುಹಿಸಲಾಗುವುದು. ನಂತರ ತಜ್ಞರ ಗುಂಪು ತನ್ನ ಶಿಫಾರಸುಗಳನ್ನು ಆರೋಗ್ಯ ಸಚಿವಾಲಯಕ್ಕೆ ಅನುಮೋದನೆಗಾಗಿ ಕಳುಹಿಸುತ್ತದೆ. ಈ ಸಂಪೂರ್ಣ ಪ್ರಕ್ರಿಯೆ 1 ರಿಂದ 2 ದಿನಗಳನ್ನು ತೆಗೆದುಕೊಳ್ಳಬಹುದು.

ರೋಗ ನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ 7 ಮುಖ್ಯ ಶಿಫಾರಸುಗಳು

1. ಕೊರೊನಾ ರೋಗಿಗಳಿಗೆ ಚೇತರಿಸಿಕೊಂಡ ಆರು ತಿಂಗಳ ನಂತರ ಲಸಿಕೆ ಹಾಕಿಸಬೇಕು. ಪ್ರಸ್ತುತ ಚೇತರಿಸಿಕೊಂಡ ರೋಗಿಗಳಿಗೆ 14 ದಿನಗಳ ನಂತರ ಶಾಟ್ ನೀಡಲಾಗುತ್ತದೆ. ಇದು ಮಾನವ ದೇಹದಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ಆಂಟಿಬಾಡಿ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

2. ಮೊದಲ ಡೋಸ್ ನಂತರ ಸೋಂಕಿತರಿಗೆ ಚೇತರಿಸಿಕೊಂಡ 4-8 ವಾರಗಳ ನಂತರ ಎರಡನೇ ಡೋಸ್ ನೀಡಬೇಕು. ಪ್ರಸ್ತುತ ಈ ರೋಗಿಗಳಿಗೆ ಚೇತರಿಸಿಕೊಂಡ 14 ದಿನಗಳ ನಂತರ ಎರಡನೇ ಶಾಟ್ ನೀಡಲಾಗುತ್ತದೆ. ನೈಸರ್ಗಿಕ ಆಂಟಿಬಾಡಿ ಉತ್ಪಾದಕತೆಯನ್ನು ಹೆಚ್ಚಿಸಲು ಇದನ್ನು ಶಿಫಾರಸು ಮಾಡಲಾಗಿದೆ.

3. ಚಿಕಿತ್ಸೆಯ ಸಮಯದಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಚೇತರಿಸಿಕೊಂಡ 12 ವಾರಗಳ ನಂತರ ಲಸಿಕೆ ನೀಡಬೇಕು. ಸದ್ಯ ಈ ರೋಗಿಗಳಿಗೆ ನಿರ್ದಿಷ್ಟ ನಿಯಮವಿಲ್ಲ.

4. ಇತರೆ ಗಂಭೀರ ಕಾಯಿಲೆಗಳಿಂದ ಆಸ್ಪತ್ರೆಗೆ ದಾಖಲಾದವರಿಗೆ ಚೇತರಿಸಿಕೊಂಡ 4 ರಿಂದ 8 ವಾರಗಳ ನಂತರ ಲಸಿಕೆ ನೀಡಬೇಕು. ಸದ್ಯ ಈ ರೋಗಿಗಳಿಗೆ ಪ್ರತ್ಯೇಕ ಪ್ರೋಟೋಕಾಲ್ ಇಲ್ಲ. ಜೊತೆಗೆ ಯಾವುದೇ ಅಡ್ಡಪರಿಣಾಮಗಳನ್ನು ತಪ್ಪಿಸಲು ಅಂತರ ಅಗತ್ಯವೆಂದು ತಜ್ಞರ ಅಭಿಪ್ರಾಯವಾಗಿದೆ.

5. ವ್ಯಾಕ್ಸಿನೇಷನ್ ಮೊದಲು ರಾಪಿಡ್ ಆಂಟಿಜೆನ್ ಪರೀಕ್ಷೆಯ ಅಗತ್ಯವಿಲ್ಲ. ಸೋಂಕು ಹರಡುವ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಅನಗತ್ಯ ಜನಸಂದಣಿಯನ್ನು ಕಡಿಮೆಗೊಳಿಸಲು ಶಿಫಾರಸು ಮಾಡಲಾಗಿದೆ.

6. ಸದ್ಯ ಕೋವಿಶೀಲ್ಡ್ ಲಸಿಕೆಗಳ ಎರಡು ಪ್ರಮಾಣಗಳ ನಡುವಿನ ಅಂತರ 4-8 ವಾರಗಳಿವೆ. ಲ್ಯಾನ್ಸೆಟ್ ಪ್ರಕಾರ, 12 ವಾರಗಳ ಅಂತರವು ಲಸಿಕೆಯ ಪರಿಣಾಮಕಾರಿತ್ವವನ್ನು ಶೇ. 81.3 ರಷ್ಟು ಹೆಚ್ಚಿಸುತ್ತದೆ. ಇದನ್ನು ಯುರೋಪ್ನಲ್ಲಿ ಅನುಸರಿಸಲಾಗುತ್ತಿದೆ.

7. ಗರ್ಭಿಣಿಯರ ತಪಾಸಣಾ  ಕೇಂದ್ರಗಳಲ್ಲಿ ಲಸಿಕೆಗಳ ಸಾಧಕ-ಬಾಧಕಗಳ ಬಗ್ಗೆ ಗರ್ಭಿಣಿಯರಿಗೆ ತಿಳಿಸಬೇಕು. ಅವರಿಗೆ ವ್ಯಾಕ್ಸಿನೇಷನ್ ಆಯ್ಕೆಯನ್ನು ಸಹ ನೀಡಬೇಕು. ಸದ್ಯಕ್ಕೆ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಲಸಿಕೆ ಸ್ವೀಕರಿಸಲು ಅನುಮತಿ ಇಲ್ಲ.

ಇದನ್ನೂ ಓದಿ

ವಿಜಯನಗರ: ಅನ್ಯ ಜಾತಿ ಯುವಕನನ್ನು ಪ್ರೀತಿಸಿದ ಯುವತಿ; ಪೋಷಕರಿಂದ ಮರ್ಯಾದಾ ಹತ್ಯೆ ಶಂಕೆ

ರಾಜ್ಯದ ಅತೀ‌ ದೊಡ್ಡ ಜಿಲ್ಲೆ ಉತ್ತರ ಕನ್ನಡದಲ್ಲಿ ಇಲ್ಲ ಸಿಟಿ ಸ್ಕ್ಯಾನ್ ಸೌಲಭ್ಯ, ಅನ್ಯ ಜಿಲ್ಲೆಗಳಿಗೆ ಹೋಗಿಯೇ ಮಾಡಿಸಬೇಕು ಟೆಸ್ಟ್

(National Technical Advisory Group on Immunisation recommended a change in the covid vaccine guideline)Covishield

Published On - 11:59 am, Thu, 13 May 21

Follow Us
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ