Petrol Price Today: ಇಂಧನ ದರ ಸ್ಥಿರ; ಬೆಂಗಳೂರಿನಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ

| Updated By: sandhya thejappa

Updated on: May 24, 2022 | 8:02 AM

Petrol price in Bengaluru | Diesel Price on 24.05.2022: ಪ್ರತಿ ಲೀಟರ್ ಪೆಟ್ರೋಲ್ ಮೇಲೆ 8 ರೂಪಾಯಿ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 6 ರೂಪಾಯಿ ಸುಂಕವನ್ನು ಇಳಿಸಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.

Petrol Price Today: ಇಂಧನ ದರ ಸ್ಥಿರ; ಬೆಂಗಳೂರಿನಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಉಕ್ರೇನ್ – ರಷ್ಯಾ ನಡುವಿನ ಯುದ್ಧದಿಂದ ಭಾರತದಲ್ಲಿ ಇಂಧನ ದರ (Fuel Rate) ಏರಿಕೆಯಾಗಿತ್ತು. ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆ ಕಂಡು ಜನರು ಕಂಗಾಲಾಗಿದ್ದರು. ಆದರೆ ಮೇ 21ರಂದು ಕೇಂದ್ರ ಸರ್ಕಾರ ಕೊನೆಗೂ ಸಿಹಿ ಸುದ್ದಿ ನೀಡಿದೆ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ 8 ರೂಪಾಯಿ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 6 ರೂಪಾಯಿ ಸುಂಕವನ್ನು ಇಳಿಸಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು. ಇಳಿಕೆಯಾಗಿರುವ ಇಂಧನ ದರ ಸದ್ಯ ಸ್ಥಿರವಾಗಿದೆ. ಇಂದಿನ ಬೆಲೆ ಗಮನಿಸಿದಾಗ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೀಗಿದೆ:
* ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 101.96 ರೂ. ಪ್ರತಿ ಲೀಟರ್ ಡೀಸೆಲ್ ದರ 87.89 ರೂಪಾಯಿ ನಿಗದಿಯಾಗಿದೆ.
* ದೆಹಲಿ – ಪೆಟ್ರೋಲ್ ದರ 96.72 ರೂ. ಡೀಸೆಲ್ ದರ 89.62 ರೂಪಾಯಿ ಇದೆ.
* ಚೆನೈ – ಪೆಟ್ರೋಲ್ ದರ 102.63 ರೂ. ಡೀಸೆಲ್ ದರ 94.24 ರೂಪಾಯಿ ಇದೆ.
* ಮುಂಬೈ – ಪೆಟ್ರೋಲ್ ದರ 111.35 ರೂ. ಡೀಸೆಲ್ ದರ 97.28 ರೂಪಾಯಿ ಇದೆ.
* ಹೈದಾರಬಾದ್ – ಪೆಟ್ರೋಲ್ ದರ 109.66 ರೂ. ಡೀಸೆಲ್ ದರ 97.82 ರೂಪಾಯಿ ಇದೆ.
* ಶ್ರೀನಗರ – ಪೆಟ್ರೋಲ್ ದರ 101.67 ರೂ. ಡೀಸೆಲ್ ದರ 86.82 ರೂಪಾಯಿ ಇದೆ.
* ಪಾಟ್ನಾ – ಪೆಟ್ರೋಲ್ ದರ 107.24 ರೂ. ಡೀಸೆಲ್ ದರ 94.04 ರೂಪಾಯಿ ಇದೆ.

ಇದನ್ನೂ ಓದಿ: ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳು ಗಾಯಬ್: ಅಂತರ ರಾಜ್ಯ ದ್ವಿಚಕ್ರವಾಹನ ಕಳ್ಳನ ಬಂಧನ

ಇದನ್ನೂ ಓದಿ
Anti Ageing Food: ವಯಸ್ಸಾಗದಂತೆ ತಡೆಯುವ ಈ ಆಹಾರಗಳು ನಿಮ್ಮ ಡಯಟ್​ನಲ್ಲಿರಲಿ
Fat burn tips: ಭಾರತೀಯ ಈ ದೇಸಿ ಸೂಪರ್‌ಫುಡ್‌ಗಳು ಪೌಷ್ಟಿಕಾಂಶವನ್ನು ಒದಗಿಸುವುದರ ಜೊತೆಗೆ ಕೊಬ್ಬನ್ನು ಕರಗಿಸಲು ಸಹಕಾರಿ
ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳು ಗಾಯಬ್: ಅಂತರ ರಾಜ್ಯ ದ್ವಿಚಕ್ರವಾಹನ ಕಳ್ಳನ ಬಂಧನ
Women’s T20 Challenge 2022: ಪೂಜಾ ಮಾರಕ ದಾಳಿಗೆ ನಲುಗಿದ ಟ್ರೇಲ್‌ಬ್ಲೇಜರ್ಸ್: ಸೂಪರ್‌ನೋವಾಸ್ 49 ರನ್​ಗಳ ಭರ್ಜರಿ ಜಯ

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ:
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್​ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ