Pfizer Vaccine: 5ರಿಂದ 11 ವರ್ಷದೊಳಗಿನ ಮಕ್ಕಳಿಗೆ ಫೈಜರ್ ಕೊವಿಡ್ ಲಸಿಕೆ ಪರಿಣಾಮಕಾರಿ; ಪ್ರಯೋಗದಲ್ಲಿ ಸಾಬೀತು
Covid Vaccine for Children | 12 ವರ್ಷ ಮೇಲ್ಪಟ್ಟವರಿಗಿಂತಲೂ 5ರಿಂದ 11 ವರ್ಷದೊಳಗಿನ ಮಕ್ಕಳಿಗೆ ಕಡಿಮೆ ಡೋಸೇಜ್ ಫೈಜರ್ ಲಸಿಕೆ ನೀಡಲಾಗುವುದು. 5ರಿಂದ 11 ವರ್ಷದೊಳಗಿನ ಮಕ್ಕಳಿಗೆ ಈ ಕೊವಿಡ್ ಲಸಿಕೆ ಸೇಫ್ ಆಗಿದೆ.
ನವದೆಹಲಿ: ಕೊರೊನಾ ಮೂರನೇ ಅಲೆಯಿಂದ ಮಕ್ಕಳ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ ಎಂದು ತಜ್ಞರು ಹೇಳಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಮಕ್ಕಳಿಗೂ ಕೊವಿಡ್ ಲಸಿಕೆಗಳನ್ನು ಕಂಡುಹಿಡಿಯಲು ಕೇಂದ್ರ ಸರ್ಕಾರ ಮುಂದಾಗಿದೆ. 5ರಿಂದ 11 ವರ್ಷದೊಳಗಿನ ಮಕ್ಕಳಿಗೆ ಫೈಜರ್ (Pfizer) ಮತ್ತು ಬಯೋಎನ್ಟೆಕ್ (BioNTech) ಲಸಿಕೆಗಳನ್ನು ಪ್ರಯೋಗ ಮಾಡಿದ್ದು, ತಮ್ಮ ಕೊವಿಡ್ ಲಸಿಕೆ (Covid Vaccine) ಮಕ್ಕಳಿಗೂ ಬಹಳ ಸುರಕ್ಷಿತವಾಗಿದೆ ಎಂದು ಘೋಷಿಸಿದೆ. ಫೈಜರ್ ಲಸಿಕೆ 11 ವರ್ಷದೊಳಗಿನ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಫೈಜರ್ ಮತ್ತು ಬಯೋಎನ್ಟೆಕ್ ಹೇಳಿದ್ದು, ಕೆಲವೇ ದಿನಗಳಲ್ಲಿ ಅದಕ್ಕೆ ಅನುಮತಿ ಸಿಗಲಿದೆ ಎಂದಿದೆ.
12 ವರ್ಷ ಮೇಲ್ಪಟ್ಟವರಿಗಿಂತಲೂ 5ರಿಂದ 11 ವರ್ಷದೊಳಗಿನ ಮಕ್ಕಳಿಗೆ ಕಡಿಮೆ ಡೋಸೇಜ್ ಲಸಿಕೆ ನೀಡಲಾಗುವುದು. 5ರಿಂದ 11 ವರ್ಷದೊಳಗಿನ ಮಕ್ಕಳಿಗೆ ಈ ಕೊವಿಡ್ ಲಸಿಕೆ ಸೇಫ್ ಆಗಿದೆ ಎಂದು ಅಮೆರಿಕ ಮೂಲದ ಫೈಜರ್ ಹೇಳಿದೆ. ಈ ಪ್ರಯೋಗದ ವರದಿಯನ್ನು ಆದಷ್ಟು ಬೇಗ ಯುರೋಪಿಯನ್ ಯೂನಿಯನ್ನ ರೆಗ್ಯುಲೇಟರಿ ಕೇಂದ್ರಕ್ಕೆ ನೀಡಲು ನಿರ್ಧರಿಸಲಾಗಿದೆ. ಈ ಪ್ರಯೋಗವನ್ನು 12 ವರ್ಷದೊಳಗಿನ ಮಕ್ಕಳ ಮೇಲೆ ಪ್ರಯೋಗಿಸಲಾಗಿದೆ.
ಫೈಜರ್ ಮತ್ತು ಮಾಡರ್ನಾ ಲಸಿಕೆಗಳೆರಡೂ ಯಶಸ್ವಿಯಾಗಿದ್ದು, ಕೊರೊನಾ ಸೋಂಕಿನ ಪ್ರಮಾಣದ ಪರಿಣಾಮ ಮಕ್ಕಳ ಮೇಲೆ ಕಡಿಮೆ ಪ್ರಭಾವ ಬೀರಲಿದೆ. 5ರಿಂದ 11 ವರ್ಷದೊಳಗಿನ ಟ್ರಯಲ್ ಗ್ರೂಪ್ 10 ಮೈಕ್ರೋಗ್ರಾಂ 2 ಡೋಸ್ ಲಸಿಕೆಗಳನ್ನು ಪಡೆದಿದೆ. 12 ವರ್ಷ ಮೇಲ್ಪಟ್ಟವರಿಗೆ 30 ಮೈಕ್ರೋಗ್ರಾಂ ಡೋಸ್ ಲಸಿಕೆ ನೀಡಲಾಗುತ್ತದೆ. 11 ವರ್ಷದೊಳಗಿನ 4,500 ಮಕ್ಕಳಿಗೆ ಪ್ರಯೋಗಾತ್ಮಕವಾಗಿ ಫೈಜರ್- ಬಯೋಎನ್ಟೆಕ್ ಲಸಿಕೆಗಳನ್ನು ನೀಡಲಾಗಿದೆ.
ಇಸ್ರೇಲ್‌ನಲ್ಲಿ ಮುಖ್ಯವಾಗಿ ಫೈಜರ್ ಮಾಡರ್ನಾ ಲಸಿಕೆಯನ್ನು ನೀಡಲಾಗುತ್ತಿದೆ. ಆಗಸ್ಟ್ ತಿಂಗಳಿನಿಂದ ಬೂಸ್ಟರ್ ಲಸಿಕೆಗಳನ್ನು ನೀಡಲು ಆರಂಭಿಸಿದ್ದು, ಇದುವರೆಗೂ 2.8 ಮಿಲಿಯನ್ ಮಂದಿಗೆ ಮೂರನೇ ಡೋಸ್ ಲಸಿಕೆ ನೀಡಲಾಗಿದೆ. ಅಮೆರಿಕ, ಫಿನ್ಲ್ಯಾಂಡ್, ಪೋಲ್ಯಾಂಡ್, ಸ್ಪೇನ್ನಲ್ಲಿ ಈ ಲಸಿಕೆಗಳ ಪ್ರಯೋಗ ಮಾಡಲಾಗಿದೆ.
ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 783 ಜನರಿಗೆ ಕೊರೊನಾ ದೃಢ; 16 ಮಂದಿ ಸಾವು
Covid Vaccine | ಭಾರತದಲ್ಲಿ ಕೊವಿಡ್ ಲಸಿಕೆ ಕೊರತೆ ನೀಗಿಸಲು ಕೇಂದ್ರ ಸರ್ಕಾರದಿಂದ ಹೊಸ ಪ್ಲಾನ್
(Clinical trial results show Pfizer Covid-19 Vaccine safe and Effective for children aged 5-11)