ಭಾರತೀಯರು ಕೊವಿಡ್ ಲಸಿಕೆ ಪಡೆದಿದ್ದರೂ ಲೆಕ್ಕಕ್ಕಿಲ್ಲ, 10 ದಿನ ಕ್ವಾರಂಟೈನ್: ಬ್ರಿಟನ್​​ನ ಪ್ರಯಾಣ ಮಾರ್ಗಸೂಚಿ ವಿರುದ್ಧ ಗುಡುಗಿದ ಶಶಿ ತರೂರ್

UK’s new Covid Travel policy: ಬ್ರಿಟನ್ ನ ಹೊಸ ಪ್ರಯಾಣ ಮಾರ್ಗಸೂಚಿ ಪ್ರಕಾರ ಭಾರತ ಸೇರಿದಂತೆ ಕೆಲವು ದೇಶಗಳ ಪ್ರಯಾಣಿಕರು ಕೊವಿಡ್ ಲಸಿಕೆ ಹಾಕಿದ್ದರೂ ಲಸಿಕೆ ಹಾಕದವರಂತೆ 10 ದಿನಗಳ ಕಾಲ  ಕ್ವಾರಂಟೈನ್​​ನಲ್ಲಿರಬೇಕಿದೆ.

ಭಾರತೀಯರು ಕೊವಿಡ್ ಲಸಿಕೆ ಪಡೆದಿದ್ದರೂ ಲೆಕ್ಕಕ್ಕಿಲ್ಲ, 10 ದಿನ ಕ್ವಾರಂಟೈನ್: ಬ್ರಿಟನ್​​ನ ಪ್ರಯಾಣ ಮಾರ್ಗಸೂಚಿ ವಿರುದ್ಧ ಗುಡುಗಿದ ಶಶಿ ತರೂರ್
ಶಶಿ ತರೂರ್- ಜೈರಾಮ್ ರಮೇಶ್

ದೆಹಲಿ: ಭಾರತ, ಆಫ್ರಿಕಾ, ದಕ್ಷಿಣ ಅಮೆರಿಕಾ ಮತ್ತು ಇತರ ಹಲವು ದೇಶಗಳಲ್ಲಿ ಕೊವಿಡ್ ಲಸಿಕೆ ಹಾಕಿದ ಜನರನ್ನು ಲಸಿಕೆ ಹಾಕದವರಂತೆ ಪರಿಗಣಿಸುವ ಬ್ರಿಟನ್ ಸರ್ಕಾರದ ನಿರ್ಧಾರದ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕರಾದ ಶಶಿ ತರೂರ್ ( Shashi Tharoor) ಮತ್ತು ಜೈರಾಮ್ ರಮೇಶ್ (Jairam Ramesh) ಗುಡುಗಿದ್ದಾರೆ. ಬ್ರಿಟನ್ ನ ಹೊಸ ಪ್ರಯಾಣ ಮಾರ್ಗಸೂಚಿ ಪ್ರಕಾರ ಭಾರತ ಸೇರಿದಂತೆ ಕೆಲವು ದೇಶಗಳ ಪ್ರಯಾಣಿಕರು ಕೊವಿಡ್ ಲಸಿಕೆ ಹಾಕಿದ್ದರೂ ಲಸಿಕೆ ಹಾಕದವರಂತೆ 10 ದಿನಗಳ ಕಾಲ  ಕ್ವಾರಂಟೈನ್​​ನಲ್ಲಿರಬೇಕಿದೆ.

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ತಿರುವನಂತಪುರಂ ಸಂಸದ ಶಶಿ ತರೂರ್ ಕೇಂಬ್ರಿಡ್ಜ್ ಯೂನಿಯನ್‌ನಲ್ಲಿನ ಚರ್ಚೆಯಿಂದ ಹೊರಬಂದರು ಮತ್ತು ಅವರ ಪುಸ್ತಕ “ದಿ ಬ್ಯಾಟಲ್ ಆಫ್ ಬಿಲೋಂಗ್” ನ ಯುಕೆ ಆವೃತ್ತಿಯ ಬಿಡುಗಡೆ ಸಮಾರಂಭಗಳಿಂದ ಹಿಂದೆ ಸರಿದಿದ್ದಾರೆ.


ಬ್ರಿಟನ್ ನ ಸುದ್ದಿ ವಿಶ್ಲೇಷಕ ಅಲೆಕ್ಸ್ ಮಚೆರಾಸ್ ಅವರ ಟ್ವೀಟ್ ಥ್ರೆಡ್ ಅನ್ನು ಉಲ್ಲೇಖಿಸಿದ ತರೂರ್: “ಈ ಕಾರಣದಿಂದಾಗಿ ನಾನು @cambridgeunion ನಲ್ಲಿ ನಡೆದ ಚರ್ಚೆಯಿಂದ ಹೊರಬಂದಿದ್ದೇನೆ ಮತ್ತು ನನ್ನ ಪುಸ್ತಕದ #TheBattleOfBelonging ನ ಯುಕೆ ಆವೃತ್ತಿಯ ಬಿಡುಗಡೆ ಕಾರ್ಯಕ್ರಮಗಳಿಂದ ಹೊರಬಂದಿದ್ದೇನೆ (ಅಲ್ಲಿ #TheStruggleForIndiasSoul ಎಂದು ಪ್ರಕಟಿಸಲಾಗಿದೆ ) ಸಂಪೂರ್ಣ ಲಸಿಕೆ ಹಾಕಿದ ಭಾರತೀಯರನ್ನು ಕ್ವಾರಂಟೈನ್ ನಲ್ಲಿರುವುದು ಅಪರಾಧ. ಬ್ರಿಟಿಷರು ಪರಿಶೀಲಿಸುತ್ತಿದ್ದಾರೆ! ಎಂದಿದ್ದಾರೆ.

ರಾಜ್ಯಸಭಾ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಕೂಡ ದೇಶದ ಹೊಸ ಪ್ರಯಾಣ ನೀತಿಯನ್ನು “ಸಂಪೂರ್ಣವಾಗಿ ವಿಲಕ್ಷಣ” ಎಂದು ಕರೆದಿದ್ದಾರೆ. ಅದೇ ಥ್ರೆಡ್ ಅನ್ನು ಉಲ್ಲೇಖಿಸಿ ಅವರು ಕೊವಿಶೀಲ್ಡ್ ಅನ್ನು ಮೂಲತಃ ಯುಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ದಿ ಸೀರಮ್ ಇನ್ಸ್ಟಿಟ್ಯೂಟ್ ಪುಣೆಯು ದೇಶಕ್ಕೂ ಸರಬರಾಜು ಮಾಡಿದೆ. ಇದು ವರ್ಣಭೇದ ನೀತಿ ಎಂದಿದ್ದಾರೆ.


ಎರಡು ದಿನಗಳ ಹಿಂದಿನ ಟ್ವೀಟ್ ಥ್ರೆಡ್‌ನಲ್ಲಿ ಮಕೆರಾಸ್ ಬ್ರಿಟನ್ ಇತ್ತೀಚಿನ ಪ್ರಯಾಣ ನೀತಿಯ ಬಗ್ಗೆ ಬರೆದಿದ್ದಾರೆ: “ಬ್ರಿಟನ್ ಸರ್ಕಾರವು ಇಂದು ರಾತ್ರಿ ಆಫ್ರಿಕಾ, ಅಥವಾ ದಕ್ಷಿಣ ಅಮೆರಿಕಾ, ಅಥವಾ ಯುಎಇ, ಭಾರತ, ಟರ್ಕಿ, ಜೋರ್ಡಾನ್, ಥೈಲ್ಯಾಂಡ್, ರಷ್ಯಾ ಸೇರಿದಂತೆ ದೇಶಗಳಿಗೆ ಲಸಿಕೆ ಹಾಕಿದ್ದರೆ ಅದನ್ನು ಲಸಿಕೆ ಹಾಕಿಲ್ಲ” ಎಂದು ಪರಿಗಣಿಸಲಾಗುತ್ತದೆ ಮತ್ತು “ಲಸಿಕೆ ಹಾಕದ” ನಿಯಮಗಳನ್ನು ಅನುಸರಿಸಬೇಕು = 10 ದಿನಗಳ ಹೋಮ್ ಕ್ವಾರಂಟೈನ್ ಮತ್ತು ಪರೀಕ್ಷೆಗಳಿಗೊಳಪಡಬೇಕು.

ಹೊಸ ನಿಯಮಗಳ ಪ್ರಕಾರ ಭಾರತದಿಂದ ಬ್ರಿಟನ್‌ಗೆ ಪ್ರಯಾಣಿಸುವ ಜನರು 10 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕು, ಈ ಅವಧಿಯಲ್ಲಿ ಅವರು ಕೊವಿಡ್ -19 ಗಾಗಿ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

ಇದನ್ನೂ ಓದಿ: Pfizer Vaccine: 5ರಿಂದ 11 ವರ್ಷದೊಳಗಿನ ಮಕ್ಕಳಿಗೆ ಫೈಜರ್ ಕೊವಿಡ್ ಲಸಿಕೆ ಪರಿಣಾಮಕಾರಿ; ಪ್ರಯೋಗದಲ್ಲಿ ಸಾಬೀತು

ಇದನ್ನೂ ಓದಿ: ಕೊವಿಡ್ ಕರ್ತವ್ಯದಲ್ಲಿದ್ದ ವೈದ್ಯರಿಗೆ ಸಂಬಳ ನೀಡದೆ ಒಟ್ಟು ₹1.26 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ, ವೈದ್ಯರ ಪ್ರತಿಭಟನೆ

(Senior Congress leaders Shashi Tharoor and Jairam Ramesh spoke out against UK’s new Covid travel policy for India)

Read Full Article

Click on your DTH Provider to Add TV9 Kannada