‘ಬಿಹಾರ ಮತ್ತು ಜಾರ್ಖಂಡ್ ಸಹೋದರರು’: ಭೋಜ್‌ಪುರಿ ಮತ್ತು ಮಗಾಹಿ ಭಾಷೆಗಳ ಕುರಿತು ಸೊರೆನ್ ಹೇಳಿಕೆಗೆ ನಿತೀಶ್ ಕುಮಾರ್ ಪ್ರತಿಕ್ರಿಯೆ

"ಇಂತಹ ವಿಷಯಗಳನ್ನು ಎಂದಿಗೂ ಯೋಚಿಸಬಾರದು". ಬಿಹಾರ ಮತ್ತು ಜಾರ್ಖಂಡ್ ಸಹೋದರರು, ನಾವು ಒಂದೇ ಕುಟುಂಬಕ್ಕೆ ಸೇರಿದವರು. ಜನರು ಪರಸ್ಪರರ ಬಗ್ಗೆ ಟೀಕೆ ಮಾಡುವ ಅಗತ್ಯವಿಲ್ಲ. ಅವರು ಒಬ್ಬರಿಗೊಬ್ಬರು ಮಾತ್ರ ಪ್ರೀತಿಯನ್ನು ಹೊಂದಿದ್ದಾರೆ ಎಂದಿದ್ದಾರೆ ನಿತೀಶ್ ಕುಮಾರ್.

‘ಬಿಹಾರ ಮತ್ತು ಜಾರ್ಖಂಡ್ ಸಹೋದರರು': ಭೋಜ್‌ಪುರಿ ಮತ್ತು ಮಗಾಹಿ ಭಾಷೆಗಳ ಕುರಿತು ಸೊರೆನ್ ಹೇಳಿಕೆಗೆ ನಿತೀಶ್ ಕುಮಾರ್ ಪ್ರತಿಕ್ರಿಯೆ
ನಿತೀಶ್ ಕುಮಾರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 20, 2021 | 5:02 PM

ದೆಹಲಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಭೋಜ್‌ಪುರಿ ಮತ್ತು ಮಗಾಹಿ ಭಾಷೆಗಳ ಕುರಿತು ಮಾಡಿದ ಹೇಳಿಕೆಗಳು ದೊಡ್ಡ ವಿವಾದವನ್ನು ಹುಟ್ಟುಹಾಕಿದ ಕೆಲವು ದಿನಗಳ ನಂತರ ಬಿಹಾರದ ಮುಖ್ಯಮಂತ್ರಿ  ನಿತೀಶ್ ಕುಮಾರ್ (Nitish Kumar)  ಸೋಮವಾರ ಪ್ರತಿಕ್ರಿಯಿಸಿದ್ದಾರೆ. ಎರಡು ನೆರೆಯ ರಾಜ್ಯಗಳು ಸಹೋದರರು ಎರಡೂ ಕಡೆಯ ಜನರು ಪರಸ್ಪರ ಪ್ರೀತಿಸುತ್ತಾರೆ ಎಂದು ಹೇಳಿದರು.

“2000ದಲ್ಲಿ ಬಿಹಾರವನ್ನು ಎರಡಾಗಿ ವಿಭಜಿಸಲಾಗಿದೆ” ಎಂದು ನಿತೀಶ್ ಕುಮಾರ್ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜನತಾ ದಳ (ಯುನೈಟೆಡ್) ನಾಯಕ ಬಿಹಾರದ ದಕ್ಷಿಣ ಭಾಗದಿಂದ ಆ ವರ್ಷದ ನವೆಂಬರ್‌ನಲ್ಲಿ ಜಾರ್ಖಂಡ್ ರಚನೆಯನ್ನು ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ. “ಎರಡೂ ರಾಜ್ಯಗಳ ಜನರು ಪರಸ್ಪರ ಪ್ರೀತಿಸುತ್ತಾರೆ. ಜನರು ರಾಜಕೀಯವಾಗಿ ಏನು ಹೇಳುತ್ತಾರೆಂದು ನನಗೆ ಗೊತ್ತಿಲ್ಲ. ಜಾರ್ಖಂಡ್ ನಮ್ಮಿಂದ ಬೇರ್ಪಟ್ಟಿದ್ದರೂ, ನಮಗೆ ಅವರ ಮೇಲೆ ಮಾತ್ರ ಪ್ರೀತಿ ಇದೆ.

“ಇಂತಹ ವಿಷಯಗಳನ್ನು ಎಂದಿಗೂ ಯೋಚಿಸಬಾರದು”. ಬಿಹಾರ ಮತ್ತು ಜಾರ್ಖಂಡ್ ಸಹೋದರರು, ನಾವು ಒಂದೇ ಕುಟುಂಬಕ್ಕೆ ಸೇರಿದವರು. ಜನರು ಪರಸ್ಪರರ ಬಗ್ಗೆ ಟೀಕೆ ಮಾಡುವ ಅಗತ್ಯವಿಲ್ಲ. ಅವರು ಒಬ್ಬರಿಗೊಬ್ಬರು ಮಾತ್ರ ಪ್ರೀತಿಯನ್ನು ಹೊಂದಿದ್ದಾರೆ ಎಂದಿದ್ದಾರೆ ನಿತೀಶ್ ಕುಮಾರ್.

ಇತ್ತೀಚಿನ ಸಂದರ್ಶನವೊಂದರಲ್ಲಿ ಸೊರೆನ್ ಭೋಜ್‌ಪುರಿ ಮತ್ತು ಮಗಾಹಿಗಳನ್ನು “ಬಿಹಾರದಿಂದ ಆಮದು ಮಾಡಿಕೊಳ್ಳಲಾಗಿದೆ” ಎಂದು ಹೇಳಿದ್ದರು. ಜಾರ್ಖಂಡ್‌ಗೆ ಪ್ರತ್ಯೇಕ ರಾಜ್ಯವನ್ನು ಕೋರಿ ಚಳುವಳಿಯ ಸಮಯದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಜನರು “ಭೋಜ್‌ಪುರಿಯಲ್ಲಿ ಕೆಟ್ಟದಾಗಿ ಬಯ್ಯುತ್ತಿದ್ದರು” ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಳಿದ್ದರು.

ಬಿಹಾರದಲ್ಲಿ ಎರಡು ಭಾಷೆಗಳನ್ನು ವ್ಯಾಪಕವಾಗಿ ಮಾತನಾಡಲಾಗುತ್ತದೆಯಾದರೂ, ಇವುಗಳನ್ನು ಅದರ ದಕ್ಷಿಣದ ಪ್ರಾಂತ್ಯದಲ್ಲಿಯೂ ಬಳಸಲಾಗುತ್ತದೆ.

ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿರುವ ಮತ್ತು ಜಾರ್ಖಂಡ್ ನಲ್ಲಿ  ವಿರೋಧ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೊರೆನ್ ಅವರನ್ನು ಟೀಕಿಸಿತ್ತು. ಅವರು ಘರ್ಷಣೆಯನ್ನು ಸೃಷ್ಟಿಸಲು ಮತ್ತು ಭಾಷೆಯ ಆಧಾರದ ಮೇಲೆ ಜನರನ್ನು ಧ್ರುವೀಕರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಆಡಳಿತಾರೂಢ ಜೆಎಂಎಂ, ಸಿಎಂ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದೆ.

ಇದನ್ನೂ ಓದಿ:ಪಂಜಾಬ್​ ನೂತನ ಮುಖ್ಯಮಂತ್ರಿಗೆ ಪ್ರಧಾನಿ ಅಭಿನಂದನೆ; ಜನರ ಒಳಿತು ನಮ್ಮ ಆದ್ಯತೆಯಾಗಲಿ ಎಂದ ಮೋದಿ

ಇದನ್ನೂ ಓದಿ: Video: ರಷ್ಯಾದ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿಗೆ 8 ಜನ ಸಾವು; ಕಿಟಕಿಯಿಂದ ಜಿಗಿದು ಓಡಿದ ವಿದ್ಯಾರ್ಥಿಗಳು

(Bihar and Jharkhand are brothers Bihar CM Nitish Kumar responds to Hemant Soren’s remarks on Bhojpuri and Magahi languages)

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ