ಕಾಂಗ್ರೆಸ್ ಸೇರಲಿದ್ದಾರೆಯೇ ಕನ್ಹಯ್ಯಾ ಕುಮಾರ್, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ?
ಕನ್ಹಯ್ಯಾ ಕುಮಾರ್ ಈ ಹಿಂದೆ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು ಮತ್ತು ಈಗ ಸಿಪಿಐ ಸದಸ್ಯರಾಗಿದ್ದಾರೆ. ಕನ್ಹಯ್ಯಾ ಅವರು ಕಾಂಗ್ರೆಸ್‌ಗೆ ಪಕ್ಷಾಂತರವಾದರೆ ಕೆಲವು ಇತರ ಎಡ ನಾಯಕರನ್ನು ಕರೆತರುವ ನಿರೀಕ್ಷೆಯಿದೆ.
ದೆಹಲಿ: ಜೆಎನ್ಯು ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ (Kanhaiya Kumar) ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ (Jignesh Mevani) ಅವರು ಕಾಂಗ್ರೆಸ್ ಸೇರಲಿದ್ದಾರೆ. ಬಹುಶಃ ಅಕ್ಟೋಬರ್ 2 ರಂದು ನಡೆಯುವ ಕಾರ್ಯಕ್ರಮವೊಂದರಲ್ಲಿ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಈ ಹಿಂದೆ ಅವರು ಸೆಪ್ಟೆಂಬರ್ 28 ರಂದು – ಭಗತ್ ಸಿಂಗ್ ಜನ್ಮದಿನದಂದು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಗುಜರಾತ್‌ನ ವಡ್ಗಾಮ್ ಕ್ಷೇತ್ರವನ್ನು ಪ್ರತಿನಿಧಿಸುವ ದಲಿತ ನಾಯಕ ಮೇವಾನಿ ಅವರನ್ನು ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷರನ್ನಾಗಿ ಮಾಡಬಹುದು ಎಂದು ಮೂಲಗಳು ತಿಳಿಸಿವೆ.
ಅದೇನೇ ಇರಲಿ ಮೇವಾನಿ ಅವರ ಸೇರ್ಪಡೆಯು ಮುಂದಿನ ವರ್ಷ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಗೆ ಸೇರಿಸುವ ಪಕ್ಷದ ಕಾರ್ಯತಂತ್ರವಾಗಿದೆ. ಪಂಜಾಬ್ನಲ್ಲಿ ದಲಿತರು ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟಿದ್ದು ಅಲ್ಲಿ ದಲಿತ ಸಮುದಾಯಕ್ಕೆ ಸೇರಿದ ಚರಣ್ಜಿತ್ ಸಿಂಗ್ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿಯನ್ನಾಗಿ ಮಾಡಿದೆ.
ಕನ್ಹಯ್ಯಾ ಕುಮಾರ್ ಈ ಹಿಂದೆ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು ಮತ್ತು ಈಗ ಸಿಪಿಐ ಸದಸ್ಯರಾಗಿದ್ದಾರೆ. ಕನ್ಹಯ್ಯಾ ಅವರು ಕಾಂಗ್ರೆಸ್‌ಗೆ ಪಕ್ಷಾಂತರವಾದರೆ ಕೆಲವು ಇತರ ಎಡ ನಾಯಕರನ್ನು ಕರೆತರುವ ನಿರೀಕ್ಷೆಯಿದೆ. 2022 ರಲ್ಲಿ ರಾಜ್ಯ ಚುನಾವಣೆ ಮತ್ತು 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಯುವ ಮತ್ತು ಕ್ರಿಯಾತ್ಮಕ ಮುಖಗಳನ್ನು ನೇಮಿಸಿಕೊಳ್ಳುವ ಕಾಂಗ್ರೆಸ್ ನ ಒತ್ತಡವನ್ನು ಜಿಗ್ನೇಶ್ ಮೇವಾನಿ ಮತ್ತು ಕನ್ಹಯ್ಯಾ ಕುಮಾರ್ ಸೇರುವ ನಿರೀಕ್ಷೆಯನ್ನು ಒತ್ತಿಹೇಳುತ್ತದೆ.
ಕನ್ಹಯ್ಯಾ ಎರಡು ವಾರಗಳಲ್ಲಿ ಎರಡು ಬಾರಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಕನ್ಹಯ್ಯಾ ಕುಮಾರ್ 2019 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ತವರು ಬಿಹಾರದ ಬೇಗುಸರಾಯಿಯಿಂದ ಸ್ಪರ್ಧಿಸಿದ್ದು, ಅಲ್ಲಿ ಬಿಜೆಪಿಯ ಗಿರಿರಾಜ್ ಸಿಂಗ್ ವಿರುದ್ಧ ಪರಾಭವಗೊಂಡಿದ್ದರು.
ಅಪ್ರಾಪ್ತೆ ಮೇಲೆ ನಡೆದ ಭೀಕರ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡಿದ ಜಮ್ಮು ಮೂಲದ ವಕೀಲರು ಕೂಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಎಲ್ಲವೂ ಸುಗಮವಾಗಿ ನಡೆದರೆ ಮೇವಾನಿ ಮತ್ತು ಕುಮಾರ್ ಜೊತೆ ಅವರೂ ಸೇರಬಹುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಜಿಗ್ನೇಶ್ ಮೇವಾನಿ ಅವರು ಕಾಂಗ್ರೆಸ್ ನ ಹೊಸ ಪಂಜಾಬ್ ಮುಖ್ಯಮಂತ್ರಿ – ರಾಜ್ಯದ ಮೊದಲ ದಲಿತ ಸಿಖ್ ನಾಯಕ ಚರಣ್ ಜಿತ್ ಸಿಂಗ್ ಛನ್ನಿ ಕುರಿತು ಟ್ವೀಟ್ ಮಾಡಿದ್ದು. ಈ ನಿರ್ಧಾರಕ್ಕಾಗಿ ಮೇವಾನಿ ರಾಹುಲ್ ಗಾಂಧಿ ಮತ್ತು ಪಕ್ಷವನ್ನು ಶ್ಲಾಘಿಸಿದ್ದರು.
The decision of appointing Charanjit singh ji as the CM of Punjab is a message that @RahulGandhi and @INCIndia have given.
It will have tremendous impact amongst not just dalits but all the subaltern masses.
For dalits, the move is not just brilliant but soothing too.
— Jignesh Mevani (@jigneshmevani80) September 20, 2021
ಅಮರಿಂದರ್ ಸಿಂಗ್ ಶನಿವಾರ ರಾಜೀನಾಮೆ ನೀಡಿದ ನಂತರ ಚರಣ್ ಜಿತ್ ಚನ್ನಿ ಅವರು ಸೋಮವಾರ ಬೆಳಿಗ್ಗೆ ಪಂಜಾಬ್ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದರು.
ಈ ತಿಂಗಳ ಆರಂಭದಲ್ಲಿ ವಿಜಯ್ ರೂಪಾನಿ ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಕೇಳಿದ ನಂತರ ಜಿಗ್ನೇಶ್ ಮೇವಾನಿ ಬಿಜೆಪಿಯನ್ನು ಟೀಕಿಸಿದ್ದರು. “ಕೊವಿಡ್ ಬಿಕ್ಕಟ್ಟಿನ ಅದ್ಭುತ ನಿರ್ವಹಣೆಗಾಗಿ ರೂಪಾನಿ ರಾಜೀನಾಮೆ ನೀಡಿದ್ದರೆ ಗುಜರಾತ್ ಜನರು ಪ್ರಶಂಸಿಸುತ್ತಿದ್ದರು ಎಂದು ಜಿಗ್ನೇಶ್ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಕಾಂಗ್ರೆಸ್‌ನ ಚುನಾವಣಾ ತಂತ್ರದ ಬಗ್ಗೆ ದಲಿತರು ಎಚ್ಚರದಿಂದಿರಬೇಕು: ಬಿಎಸ್ಪಿ ನಾಯಕಿ ಮಾಯಾವತಿ
(Kanhaiya Kumar and Gujarat MLA Jignesh Mevani will join the Congress likely during an event on October 2 says Source)