ಇತ್ತೀಚಿನ ದಿನಗಳಲ್ಲಿ ಯಾವ ಬಗೆಯ ವಂಚನೆಗಳು ನಡೆಯುತ್ತವೆ ಎಂಬುದನ್ನು ಊಹಿಸುವುದೂ ಕಷ್ಟ, ಭೋಪಾಲ್ನಲ್ಲಿ ವಂಚಕರ ಗುಂಪೊಂದು ಫೋಟೊಗ್ರಾಫರ್ ಒಬ್ಬರನ್ನು ಬರ್ತ್ ಡೇ ಪಾರ್ಟಿಗೆಂದು ಆಹ್ವಾನಿಸಿ ದರೋಡೆ ಮಾಡಿರುವ ಘಟನೆ ವರದಿಯಾಗಿದೆ.
ಅವರ ಬಳಿ 16 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಆರೋಪಿಗಳು ದೋಚಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಯುವತಿ ಹಾಗೂ ಆಕೆಯ ಪ್ರಿಯಕರನೊಂದಿಗೆ ಇತರೆ ಸಹಚರರನ್ನೂ ಬಂಧಿಸಿದ್ದಾರೆ. ಜನವರಿ 12 ರಂದು ಜಾನಕಿಯಿಂದ ಅಜಯ್ ಕುಶ್ವಾಹಾಗೆ ಕರೆ ಬಂದಿತ್ತು, ಆಕೆಯ ಹುಟ್ಟುಹಬ್ಬವಿದ್ದು ಫೋಟೊಗಳನ್ನು ಸೆರೆಹಿಡಿಯುವಂತೆ ಕೇಳಿಕೊಂಡಿದ್ದಾಳೆ.
ಆದರೆ ಜಾನಕಿ ಮತ್ತೆ ಮತ್ತೆ ಕರೆ ಮಾಡಿ ಹತ್ತಿರದ ಪೆಟ್ರೋಲ್ ಪಂಪ್‌ಗೆ ಬರುವಂತೆ ಹೇಳಿದಳು. ಸ್ಥಳಕ್ಕಾಗಮಿಸಿದ ಮಹಿಳೆಯ ಗೆಳೆಯ ಅನಿಕೇತ್ ಮತ್ತು ಆತನ ಸ್ನೇಹಿತರಾದ ಖಲೀದ್ ಖಾನ್, ಅನಿಲ್, ಬಂಟಿ ಮತ್ತು ರಾಜೇಶ್ ಅವರು ಕುಶ್ವಾಹ ಅವರ ಕ್ಯಾಮೆರಾ, ಫೋನ್, ಛಾಯಾಗ್ರಹಣ ಉಪಕರಣಗಳು ಮತ್ತು ಮೋಟಾರ್ ಸೈಕಲ್ ಅನ್ನು ಕದ್ದೊಯ್ದಿದ್ದಾರೆ.
ಮತ್ತಷ್ಟು ಓದಿ: ಮನೆಯಲ್ಲಿ ದರೋಡೆ ಮಾಡಿ ಹೋಗುವಾಗ ಮಹಿಳೆಗೆ ಮುತ್ತು ಕೊಟ್ಟ ಕಳ್ಳ!
ದರೋಡೆಗೆ ಮುನ್ನ ಮತ್ತು ನಂತರ ಕಾರೊಂದು ಆ ಪ್ರದೇಶವನ್ನು ಹಾದು ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಅದರ ತನಿಖೆಯಲ್ಲಿ ಪೊಲೀಸರಿಗೆ ಆರಂಭಿಕ ಸುಳಿವಾಗಿತ್ತು. ರೋಪಿಗಳು ಕದ್ದ ವಸ್ತುಗಳನ್ನು ಸೋಮವಾರ ಮಾರಾಟ ಮಾಡಲು ಮುಂದಾಗಿದ್ದರು ಎಂದು ತಿಳಿದುಬಂದಿದೆ. ಶಂಕಿತರ ಮಾರ್ಗದಲ್ಲಿ ಹೊಂಚು ಹಾಕಿ ಕಾರು ಮತ್ತು ಕದ್ದ ವಸ್ತುಗಳನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಅನಿಕೇತ್ ಎಂಬಾತ ಛಾಯಾಗ್ರಾಹಕನಾಗಲು ಬಯಸಿದ್ದ, ಆದರೆ ವೃತ್ತಿಪರ ಕ್ಯಾಮೆರಾವನ್ನು ಖರೀದಿಸಲು ಹಣದ ಕೊರತೆ ಇತ್ತು, ಕುಶ್ವಾಹನನ್ನು ದರೋಡೆ ಮಾಡಲು ಜಾನಕಿಯೊಂದಿಗೆ ಒಂದು ಯೋಜನೆಯನ್ನು ರೂಪಿಸಿದ್ದ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ