ದೆಹಲಿ: ಇರಾನ್ನಿಂದ ಚೀನಾಕ್ಕೆ ಹೊರಟಿದ್ದ ‘ಮಹಾನ್’ ವಾಯುಯಾನ ಸಂಸ್ಥೆಯ ಪ್ರಯಾಣಿಕರ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಕೇಳಿಬಂದಿದೆ. ವಿಮಾನವು ಭಾರತದ ವಾಯುಗಡಿಯಲ್ಲಿ ಇದ್ದಾಗ ಪಾಕಿಸ್ತಾನದ ಲಾಹೋರ್ ವಿಮಾನ ನಿಯಂತ್ರಣಾ ಕೇಂದ್ರದಿಂದ (Air Traffic Controller – ATC) ದೆಹಲಿಯ ಎಟಿಸಿಗೆ ಸೋಮವಾರ (ಅ 10) ಮಾಹಿತಿ ರವಾನೆಯಾಯಿತು. ದೆಹಲಿಯ ಎಟಿಸಿ ಸಿಬ್ಬಂದಿ ತಕ್ಷಣ ವಾಯುಪಡೆಗೆ ಮಾಹಿತಿ ರವಾನಿಸಿದರು. ಸಂಭಾವ್ಯ ಅನಾಹುತ ತಪ್ಪಿಸಲು ಜೋಧ್ಪುರ್ ಮತ್ತು ಆಗ್ರಾ ವಾಯುನೆಲೆಯಲ್ಲಿ ಯುದ್ಧವಿಮಾನಗಳನ್ನು ಸನ್ನದ್ಧ ಸ್ಥಿತಿಗೆ ತರಲಾಯಿತು.
ಇರಾನ್ ರಾಜಧಾನಿ ತೆಹರಾನ್ನಿಂದ ಚೀನಾದ ನಗರ ಗೌನ್ಗ್ಝ್ಹೌ ಎಂಬಲ್ಲಿಗೆ ವಿಮಾನವು ತೆರಳುತ್ತಿತ್ತು. ಬಾಂಬ್ ಬೆದರಿಕೆ ಕೇಳಿ ಬಂದ ನಂತರ ಸ್ವಲ್ಪ ಸಮಯ ವಿಮಾನವು ಜೈಪುರ-ದೆಹಲಿ ನಡುವಣ ವಾಯುಮಾರ್ಗದಲ್ಲಿ ಎತ್ತರ ತಗ್ಗಿಸಿಕೊಂಡಿದ್ದು ಆತಂಕ ಮೂಡಿಸಿತ್ತು. ವಿಮಾನ ಸಂಚಾರ ನಿಯಂತ್ರಕರು ದೆಹಲಿಯಲ್ಲಿ ವಿಮಾನವನ್ನು ಭೂಸ್ಪರ್ಶ (ಲ್ಯಾಂಡ್) ಮಾಡಲು ಅನುಮತಿ ನಿರಾಕರಿಸಿ, ಜೈಪುರದಲ್ಲಿ ಭೂಸ್ಪರ್ಶ ಮಾಡುವಂತೆ ಸೂಚಿಸಿದರು. ಆದರೆ ಪೈಲಟ್ಗಳು ದೆಹಲಿಯಿಂದ ಜೈಪುರಕ್ಕೆ ತೆರಳಿದರು ನಿರಾಕರಿಸಿದಾಗ ತುಸುಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಹಂತದಲ್ಲಿ ವಿಮಾನವು ದೆಹಲಿಯಲ್ಲಿ ಲ್ಯಾಂಡ್ ಆಗುವುದನ್ನು ತಡೆಯಲು ಮತ್ತು ಭಾರತದಿಂದ ಹೊರಗೆ ಕಳಿಸಲು ವಾಯುಪಡೆಯು ಯುದ್ಧ ವಿಮಾನಗಳನ್ನು ನಿಯೋಜಿಸಲಾಯಿತು. flightradar24
ಆದರೆ ಹೆಚ್ಚಿನ ಕಾರ್ಯಾಚರಣೆಗೆ ಅವಕಾಶ ಇಲ್ಲದಂತೆ ಪೈಲಟ್ಗಳು ವಿಮಾನವನ್ನು ಚೀನಾದತ್ತ ಕೊಂಡೊಯ್ದರು. ವಿಮಾನದಲ್ಲಿ ಇರಿಸಿರುವ ಬಾಂಬ್ ಎಂಥದ್ದು ಎಂಬ ಬಗ್ಗೆ ಈವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
A Mahan Air flight, Tehran -> Guangzhou, received a bomb threat when flying over India. According to @ANI “Delhi ATC suggested the aircraft to go to Jaipur but the aircraft pilot refused & left Indian airspace”
Currently about 2h away from Guangzhou https://t.co/mk6FioNbBe pic.twitter.com/D3nUinv1Mu
— Flightradar24 (@flightradar24) October 3, 2022
‘ವಿಮಾನವು ಪಾಕಿಸ್ತಾನದ ವಾಯುಗಡಿಯ ಮೂಲಕವೇ ಭಾರತಕ್ಕೆ ಬಂದಿದೆ. ಹೀಗಿರುವಾಗ ಅಲ್ಲಿಯೇ ಏಕೆ ವಿಮಾನವನ್ನು ಇಳಿಸಿಕೊಳ್ಳಲಿಲ್ಲ? ದೆಹಲಿಯಲ್ಲಿಯೇ ವಿಮಾನ ಇಳಿಸಬೇಕು ಎಂದು ಪೈಲಟ್ಗಳು ಯೋಚಿಸಿದ್ದು ಏಕೆ? ಜೈಪುರದಲ್ಲಿ ವಿಮಾನ ಇಳಿಸಲು ನಿರಾಕರಿಸಿ ಮರಳಿ ಚೀನಾಕ್ಕೆ ಕೊಂಡೊಯ್ದದ್ದು ಏಕೆ? ಒಟ್ಟಾರೆ ಪ್ರಕರಣದಲ್ಲಿ ಏನೋ ಒಳಸಂಚು ಇದ್ದಂತೆ ಇದೆ’ ಎಂದು ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರು ‘ಇಂಡಿಯಾ ಟುಡೇ’ ಸುದ್ದಿವಾಹಿನಿಗೆ ನೀಡಿದ ಲೈವ್ ಸಂದರ್ಶನದಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
Published On - 12:59 pm, Mon, 3 October 22