Viral Video: 11 ವರ್ಷದ ಬಾಲಕನ ಮುಖಕ್ಕೆ ಕಚ್ಚಿದ ಪಿಟ್​ಬುಲ್ ನಾಯಿ; ಬರೋಬ್ಬರಿ 150 ಹೊಲಿಗೆ ಹಾಕಿದ ವೈದ್ಯರು

| Updated By: ಸುಷ್ಮಾ ಚಕ್ರೆ

Updated on: Sep 09, 2022 | 12:44 PM

ಸೆಪ್ಟೆಂಬರ್ 3ರಂದು ಬಾಲಕ ಆಟವಾಡುತ್ತಿದ್ದ ಪಾರ್ಕ್​ನಲ್ಲಿ ಈ ಘಟನೆ ಸಂಭವಿಸಿತ್ತು. ನಾಯಿಯ ಮಾಲೀಕ ಆ ನಾಯಿಯನ್ನು ಪಾರ್ಕ್​ಗೆ ಕರೆದುಕೊಂಡು ಬಂದಾಗ ಅಲ್ಲಿದ್ದ ಬಾಲಕನ ಮುಖಕ್ಕೆ ಕಚ್ಚಿತ್ತು.

Viral Video: 11 ವರ್ಷದ ಬಾಲಕನ ಮುಖಕ್ಕೆ ಕಚ್ಚಿದ ಪಿಟ್​ಬುಲ್ ನಾಯಿ; ಬರೋಬ್ಬರಿ 150 ಹೊಲಿಗೆ ಹಾಕಿದ ವೈದ್ಯರು
ಪಿಟ್‌ಬುಲ್‌ ನಾಯಿ
Follow us on

ಗಾಜಿಯಾಬಾದ್: ಕಳೆದ ವಾರ ನಡೆದ ಭೀಕರ ಘಟನೆಯಲ್ಲಿ 11 ವರ್ಷದ ಬಾಲಕನ ಮೇಲೆ ಪಿಟ್‌ಬುಲ್‌ (Pit Bull) ನಾಯಿ ದಾಳಿ ನಡೆಸಿತ್ತು. ಆ ಬಾಲಕನ ಮುಖದ ಮೇಲೆ ದಾಳಿ ನಡೆಸಿ, ಗಾಯಗೊಳಿಸಲಾಗಿತ್ತು. ಇದರಿಂದ ಆ ಬಾಲಕನಿಗೆ ಸುಮಾರು 150 ಹೊಲಿಗೆಗಳನ್ನು ಹಾಕಲಾಗಿತ್ತು. 3 ದಿನಗಳ ಕಾಲ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸೆಪ್ಟೆಂಬರ್ 3ರಂದು ಬಾಲಕ ಆಟವಾಡುತ್ತಿದ್ದ ಪಾರ್ಕ್​ನಲ್ಲಿ ಈ ಘಟನೆ ಸಂಭವಿಸಿತ್ತು. ನಾಯಿಯ ಮಾಲೀಕ ಆ ನಾಯಿಯನ್ನು ಪಾರ್ಕ್​ಗೆ ಕರೆದುಕೊಂಡು ಬಂದಾಗ ಅಲ್ಲಿದ್ದ ಬಾಲಕನ ಮುಖಕ್ಕೆ ಕಚ್ಚಿತ್ತು. ಈ ಘಟನೆಯ ಸಿಸಿಟಿವಿ ದೃಶ್ಯಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡ ನಂತರ ಈ ಘಟನೆಯು ಬೆಳಕಿಗೆ ಬಂದಿತ್ತು. ನಾಯಿ ಓಡಿ ಹೋಗಿ ಬಾಲಕನ ಮೇಲೆ ದಾಳಿ ಮಾಡಿರುವುದು ವಿಡಿಯೋದಲ್ಲಿದೆ.

ಇದನ್ನೂ ಓದಿ: ಲಿಫ್ಟ್​ನಲ್ಲಿ ಬಾಲಕನಿಗೆ ಕಚ್ಚಿದ ಸಾಕು ನಾಯಿ; ಶ್ವಾನದ ಮಾಲೀಕರಿಗೆ 5,000 ರೂ. ದಂಡ

ಪಕ್ಕದಲ್ಲಿದ್ದವರು ನಾಯಿಯ ಹಿಡಿತದಿಂದ ಬಾಲಕನನ್ನು ರಕ್ಷಿಸಿದರು. ಇಲ್ಲವಾದರೆ ಆ ಬಾಲಕನ ಪ್ರಾಣಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆಯಿತ್ತು. ಆದರೆ ಅಷ್ಟರಲ್ಲಾಗಲೇ ಆ ನಾಯಿ ಬಾಲಕನ ಮುಖಕ್ಕೆ ತೀವ್ರವಾಗಿ ಕಚ್ಚಿತ್ತು. ಇದರಿಂದ ಬಾಲಕನ ಮುಖದ ಎಡಭಾಗದಲ್ಲಿ ಕಿವಿಯವರೆಗೆ 150 ಹೊಲಿಗೆಗಳನ್ನು ಹಾಕಲಾಗಿದೆ. ಆ ಬಾಲಕ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಎಂದು ವರದಿಗಳು ತಿಳಿಸಿವೆ.

ಈ ಘಟನೆಯ ವಿಡಿಯೋ ನೋಡಿದವರು ನಾಯಿಯ ಮಾಲೀಕರ ವಿರುದ್ಧ ಕಿಡಿ ಕಾರಿದ್ದಾರೆ. ನಾಯಿ ಅಥವಾ ಸಾಕುಪ್ರಾಣಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆತರುವ ಮೊದಲು ಅದರ ಬಾಯಿಗೆ ಟೇಪ್ ಹಾಕುವಂತೆ ಮಾಲೀಕರಿಗೆ ಒತ್ತಾಯಿಸಿದ್ದಾರೆ. ಈ ವಿಡಿಯೋ ಅಧಿಕಾರಿಗಳ ಗಮನ ಸೆಳೆದಿದೆ. ಪರವಾನಗಿ ಅಥವಾ ನೋಂದಣಿ ಇಲ್ಲದೆ ನಾಯಿಯನ್ನು ಸಾಕಿದ್ದಕ್ಕಾಗಿ ಮುನ್ಸಿಪಲ್ ಕಾರ್ಪೊರೇಷನ್ ನಾಯಿ ಮಾಲೀಕ ಗಾಜಿಯಾಬಾದ್‌ನ ಸುಭಾಷ್ ತ್ಯಾಗಿಗೆ 50,000 ರೂ. ದಂಡ ವಿಧಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ