AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಪ್ರಜೆಯಾಗುವ 3 ವರ್ಷ ಮೊದಲೇ ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಹೆಸರು; ದೆಹಲಿ ಕೋರ್ಟ್​ನಲ್ಲಿ ಅರ್ಜಿ

ಭಾರತೀಯ ನಾಗರಿಕರಾಗುವ 3 ವರ್ಷದ ಮೊದಲು ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿಯ ಹೆಸರು ಸೇರಿಸಿದ್ದಕ್ಕಾಗಿ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸೋನಿಯಾ ಗಾಂಧಿಯವರು ಏಪ್ರಿಲ್ 1983ರಲ್ಲಿ ಭಾರತೀಯ ನಾಗರಿಕರಾಗಿದ್ದರೂ ಸಹ, ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅದಕ್ಕೂ 3 ವರ್ಷ ಮೊದಲೇ ಅವರ ಹೆಸರನ್ನು ಸೇರಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಅರ್ಜಿಯ ಪ್ರಕಾರ, ಸೋನಿಯಾ ಗಾಂಧಿ 1983ರಲ್ಲಿ ಭಾರತೀಯ ನಾಗರಿಕರಾದರು. ಆದರೆ ಅವರ ಹೆಸರು 1980ರಲ್ಲಿ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿತ್ತು.

ಭಾರತೀಯ ಪ್ರಜೆಯಾಗುವ 3 ವರ್ಷ ಮೊದಲೇ ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಹೆಸರು; ದೆಹಲಿ ಕೋರ್ಟ್​ನಲ್ಲಿ ಅರ್ಜಿ
Sonia Gandhi
ಸುಷ್ಮಾ ಚಕ್ರೆ
|

Updated on: Sep 04, 2025 | 6:11 PM

Share

ನವದೆಹಲಿ, ಸೆಪ್ಟೆಂಬರ್ 4: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಭಾರತೀಯ ನಾಗರಿಕರಾಗುವ 3 ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ ಎಂದು ಆರೋಪಿಸಿ ದೆಹಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ರೂಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ACJM) ವೈಭವ್ ಚೌರಾಸಿಯಾ ಅವರು ಇಂದು ಸ್ವಲ್ಪ ಸಮಯದವರೆಗೆ ಪ್ರಕರಣದ ವಿಚಾರಣೆ ನಡೆಸಿ, ಸೆಪ್ಟೆಂಬರ್ 10ರಂದು ಈ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ವಿಕಾಸ್ ತ್ರಿಪಾಠಿ ಎಂಬುವವರು ಸಲ್ಲಿಸಿದ ಅರ್ಜಿಯಲ್ಲಿ ಸೋನಿಯಾ ಗಾಂಧಿಯವರು ಏಪ್ರಿಲ್ 1983ರಲ್ಲಿ ಭಾರತದ ನಾಗರಿಕರಾಗಿದ್ದರೂ, 1980ರಲ್ಲಿಯೇ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿತ್ತು ಎಂದು ಆರೋಪಿಸಲಾಗಿದೆ. 1980ರಲ್ಲಿ ಸೋನಯಾ ಗಾಂಧಿಯವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. 1982ರಲ್ಲಿ ಡಿಲೀಟ್ ಮಾಡಲಾಗಿದೆ ಮತ್ತು ನಂತರ 1983ರಲ್ಲಿ ಮತ್ತೆ ಸೇರಿಸಲಾಗಿದೆ ಎಂದು ತ್ರಿಪಾಠಿ ಆರೋಪಿಸಿದ್ದಾರೆ.

ಇದನ್ನೂ ಓದಿ: National Herald Case: ರಾಜೀವ್​ ಗಾಂಧಿ ಪುಣ್ಯ ತಿಥಿಯಂದೇ ಸೋನಿಯಾ ಗಾಂಧಿ, ರಾಹುಲ್​ಗೆ ಇಡಿ ಶಾಕ್

“ಭಾರತೀಯ ಪೌರತ್ವಕ್ಕಾಗಿ ಅವರ ಅರ್ಜಿಯೂ ಸಹ ಏಪ್ರಿಲ್ 1983ರದ್ದಾಗಿದೆ. ಹಾಗಾದರೆ 1980ರಲ್ಲಿ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಹೇಗೆ ಸೇರಿಸಲ್ಪಟ್ಟಿತು, ನಂತರ ಅದನ್ನು 82ರಲ್ಲಿ ಡಿಲೀಟ್ ಮಾಡಿ 1983ರಲ್ಲಿ ಏಕೆ ಮರು ನಮೂದಿಸಲಾಯಿತು?” ಎಂದು ತ್ರಿಪಾಠಿ ಅವರ ವಕೀಲರು ಪ್ರಶ್ನಿಸಿದ್ದಾರೆ.

1980ರಲ್ಲಿ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದರೆ ಕೆಲವು ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದರ್ಥ. ಆದ್ದರಿಂದ, ಎಫ್‌ಐಆರ್ ದಾಖಲಿಸಲು ಆದೇಶಗಳನ್ನು ಹೊರಡಿಸುವಂತೆ ಅವರು ನ್ಯಾಯಾಲಯವನ್ನು ಕೋರಿದರು. ತ್ರಿಪಾಠಿ ಅವರ ವಕೀಲರು ವಾದಗಳನ್ನು ಪೂರ್ಣಗೊಳಿಸಿದ ನಂತರ, ಮುಂದಿನ ವಾರ ವಿಷಯವನ್ನು ಮತ್ತೆ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಸೋನಿಯಾ ಗಾಂಧಿ ಅಥವಾ ದೆಹಲಿ ಪೊಲೀಸರಿಗೆ ಇನ್ನೂ ಯಾವುದೇ ಔಪಚಾರಿಕ ನೋಟಿಸ್ ನೀಡಲಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ