AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi Address Live: ಚುನಾವಣೆಯಲ್ಲಿ ಬಿಜೆಪಿಯ ಪ್ರಚಂಡ ಗೆಲುವಿಗೆ ಮಹಿಳೆಯರೇ ಕಾರಣ; ಪ್ರಧಾನಿ ಮೋದಿ ಭಾಷಣ

PM Modi on Assembly Election Results Live Updates: ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರದಲ್ಲಿ ಉತ್ತಮ ಸಾಧನೆ ಮಾಡಿರುವ ಬಿಜೆಪಿ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ.

PM Modi Address Live: ಚುನಾವಣೆಯಲ್ಲಿ ಬಿಜೆಪಿಯ ಪ್ರಚಂಡ ಗೆಲುವಿಗೆ ಮಹಿಳೆಯರೇ ಕಾರಣ; ಪ್ರಧಾನಿ ಮೋದಿ ಭಾಷಣ
ನರೇಂದ್ರ ಮೋದಿ ಭಾಷಣ
TV9 Web
| Updated By: ಸುಷ್ಮಾ ಚಕ್ರೆ|

Updated on:Mar 10, 2022 | 8:40 PM

Share

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಉತ್ತರ ಪ್ರದೇಶದಲ್ಲಿ ಬಹುಮತ ಪಡೆದಿರುವ ಬಿಜೆಪಿ (BJP) ಸರ್ಕಾರ ರಚಿಸಲು ಸಜ್ಜಾಗಿದೆ. ಈ ಅವಧಿಯಲ್ಲೂ ಯೋಗಿ ಆದಿತ್ಯನಾಥ್ (Yogi Adityanath) ಮುಖ್ಯಮಂತ್ರಿಯಾಗಿ ಮುಂದುವೆಯಲಿದ್ದಾರೆ. ಹಾಗೇ, ಉತ್ತರಾಖಂಡ, ಮಣಿಪುರ, ಗೋವಾದಲ್ಲಿ ಕೂಡ ಬೇರೆ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಸರ್ಕಾರ ರಚಿಸಲು ಸಿದ್ಧತೆ ನಡೆಸಿದೆ. ಪಂಜಾಬ್​ ಒಂದರಲ್ಲಿ ಆಮ್ ಆದ್ಮಿ ಪಕ್ಷದ (Aam Aadmi Party) ಕೈ ಮೇಲಾಗಿದೆ. ಈ ಹಿನ್ನೆಲೆಯಲ್ಲಿ ಐದು ರಾಜ್ಯಗಳ ಪೈಕಿ 4 ರಾಜ್ಯಗಳಲ್ಲಿ ಉತ್ತಮ ಸಾಧನೆ ಮಾಡಿರುವ ಬಿಜೆಪಿ ನಾಯಕರು, ಉಸ್ತುವಾರಿಗಳು ಹಾಗೂ ಕಾರ್ಯಕರ್ತರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ದೆಹಲಿಯಲ್ಲಿರುವ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಈ ಕುರಿತ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ…

LIVE NEWS & UPDATES

The liveblog has ended.
  • 10 Mar 2022 08:32 PM (IST)

    ಉತ್ತಮ ಆಡಳಿತವೇ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣ; ಪ್ರಧಾನಿ ಮೋದಿ

    ಉತ್ತರಪ್ರದೇಶದಲ್ಲಿ ಉತ್ತಮ ಆಡಳಿತ ನೀಡಿದ್ದೆ ಗೆಲುವಿಗೆ ಕಾರಣ

    ಉತ್ತರಪ್ರದೇಶದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ

    ರಾಷ್ಟ್ರ ಸಂಕಲ್ಪದೊಂದಿಗೆ ಜನರ ಬಳಿ ಹೋಗುತ್ತೇವೆ

    ದೇಶದ ಎಲ್ಲಾ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯ ಮುಂದುವರಿಸ್ತೇವೆ

    ರಾಜ್ಯಗಳ ವಿಕಾಸದಿಂದ ದೇಶದ ವಿಕಾಸವಾಗಲಿದೆ

    ಇಷ್ಟು ದೊಡ್ಡ ವಿಜಯ ಭಾರತದ ಉಜ್ವಲ ಭವಿಷ್ಯಕ್ಕೆ ದಾರಿಯಾಗಲಿದೆ

    ನಾನು ಎರಡೂ ಕೈಗಳನ್ನು ಜೋಡಿಸಿ ಮತದಾರರಿಗೆ ಗೌರವಪೂರ್ಣ ನಮನ ಸಲ್ಲಿಸುತ್ತೇನೆ

    ಪ್ರಧಾನಿ ಮೋದಿ ಭಾಷಣ

  • 10 Mar 2022 08:25 PM (IST)

    ಬಿಜೆಪಿಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ; ನರೇಂದ್ರ ಮೋದಿ ಭಾಷಣ

    ನಾವು ಯಾವ ಕುಟುಂಬದ ವಿರುದ್ಧವೂ ಇಲ್ಲ ವಂಶಾಡಳಿತದಿಂದ ದೇಶ ಯಾವುದೇ ಅಭಿವೃದ್ಧಿಯಾಗಲ್ಲ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿತ್ತು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ ಭ್ರಷ್ಟಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು

    ಕುಟುಂಬ ರಾಜಕಾರಣ ಮುಂದೊಂದು ದಿನ ನಿರ್ಮೂಲನೆಯಾಗಲಿದೆ

    ಪ್ರಧಾನಿ ಮೋದಿ ವಿಶ್ವಾಸ

  • 10 Mar 2022 08:21 PM (IST)

    ಉಕ್ರೇನ್​ನಲ್ಲಿ ಸಿಲುಕಿದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ; ಪ್ರಧಾನಿ ಮೋದಿ

    ರಷ್ಯಾ, ಉಕ್ರೇನ್‌ ಯುದ್ಧದಿಂದ ಅಡುಗೆ ಎಣ್ಣೆ ದರ ಹೆಚ್ಚಳವಾಗಿದೆ ಉತ್ತಮ ರಾಜತಾಂತ್ರಿಕ ನೀತಿಯಿಂದ ಭಾರತೀಯರ ಶಿಫ್ಟ್‌ ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯರ ಸ್ಥಳಾಂತರ ಆಪರೇಷನ್‌ ಗಂಗಾ ಮೂಲಕ ಸುರಕ್ಷಿತವಾಗಿ ಕರೆತಂದಿದ್ದೇವೆ ಸಂಕಷ್ಟದಲ್ಲಿ ಸಿಲುಕಿದ್ದ ಭಾರತೀಯರನ್ನು ರಕ್ಷಿಸಿದ್ದೇವೆ

    ಸದ್ಯದಲ್ಲೇ ಭಾರತದಲ್ಲಿ ಪರಿವಾರವಾದಿ ರಾಜಕಾರಣದ ಅಂತ್ಯ

    ಪ್ರಧಾನಿ ನರೇಂದ್ರ ಮೋದಿ ಭಾಷಣ

  • 10 Mar 2022 08:18 PM (IST)

    ಮುಂದಿನ ಚುನಾವಣೆಯಲ್ಲಿ ಪಂಜಾಬ್​ನಲ್ಲಿ ಬಿಜೆಪಿ ಬಲಪಡಿಸುತ್ತೇವೆ; ಪ್ರಧಾನಿ ಮೋದಿ

    ಪಂಜಾಬ್ ನ ಬಿಜೆಪಿ ಕಾರ್ಯಕರ್ತರನ್ನೂ ನಾನು ಶ್ಲಾಘಿಸುತ್ತೇನೆ. ಅವರು ಅಲ್ಲಿ  ನಮ್ಮ ಬಾವುಟವನ್ನು ಎಷ್ಟು ಗಟ್ಟಿಯಾಗಿ ಊರಿದ್ದಾರೆ ಎಂದರೆ ಮುಂದಿನ ದಿನಗಳಲ್ಲಿ ಅದು ಪ್ರಯೋಜನ ನೀಡಲಿದ್ದಾರೆ. ಗಡಿ ರಾಜ್ಯವಾಗಿರುವ ಕಾರಣ ಅಲ್ಲಿನ  ಕಾರ್ಯಕರ್ತರು ಹೆಚ್ಚು ಸುರಕ್ಷೆಯನ್ನು ನೀಡುತ್ತಾರೆ.

    ಜಗತ್ತು ಕೊರೊನಾ  ವಿರುದ್ಧ ಹೋರಾಡುವ ಹೊತ್ತಲ್ಲಿ ಈ ಚುನಾವಣೆ ನಡೆದಿದೆ.ಇದರ ಜತೆಗೆ ಯುದ್ಧವೂ ನಡೆಯುತ್ತಿದೆ.ಎರಡು ವರ್ಷಗಳಲ್ಲಿ  ಸಪ್ಲೈ ಚೈನ್ ಮೇಲೆಯೂ ಪ್ರಭಾವ ಬೀರಿದೆ. ಈ ಹೊತ್ತಲ್ಲಿ ಭಾರತ ತೆಗೆದುಕೊಂಡ ನಿರ್ಧಾರಗಳು  ಭಾರತವನ್ನು  ಮುಂದೆ ಸಾಗಲು ಸಹಾಯ ಮಾಡಿದೆ.   ಭಾರತ  ಬಚಾವಾಗಿದೆ ಯಾಕೆಂದರೆ ನಮ್ಮ ನೀತಿಗಳು ಮಣ್ಣಿನೊಂದಿಗೆ ನಂಟುಹೊಂದಿದೆ.ಎಲ್ಲೆಲ್ಲಿ ಡಬಲ್ ಇಂಜಿನ್ ಇದೆಯೋ ಅಲ್ಲಿ  ಪುರೋಗತಿ ಆಗಿದೆ.

    ಯುದ್ಧದ ಪರೋಕ್ಷ ಮತ್ತು ಪ್ರತ್ಯಕ್ಷ ಪರಿಣಾಮವು ಹಲವು ದೇಶಗಳ ಮೇಲಿದೆ. ಭಾರತ ಶಾಂತಿಯ ಪಕ್ಷದಲ್ಲಿದೆ . ಯುದ್ಧದಲ್ಲಿ ತೊಡಗಿರುವ ದೇಶದೊಂದಿಗೆ ನಮಗೆ ನಂಟಿದೆ.  ತೈಲ,  ಸೂರ್ಯಕಾಂತಿ ಎಣ್ಣೆಯನ್ನು ಭಾರತ  ಈ ದೇಶಗಳಿಂದ ಖರೀದಿಸುತ್ತಿವೆ. ಯುದ್ಧದಿಂದಾಗಿ ಬೆಲೆಏರಿಕೆ ಆಗುತ್ತಿದೆ. ಈ ಸಂಕಷ್ಟ  ಸಮಯದಲ್ಲಿ ನಮ್ಮ  ಬಜೆಟ್  ಬಗ್ಗೆ ಕಣ್ಣಾಡಿಸಿದರೆ ದೇಶ ಆತ್ಮ ನಿರ್ಭರ ರೀತಿಯಲ್ಲಿ  ಮುಂದೆ ಸಾಗುತ್ತಿದೆ. ಆ  ವಿಪರೀತ ,ಅನಿಶ್ಚಿತತೆಯ ವಾತಾವರಣದಲ್ಲಿ ವಿಶೇಷವಾಗಿ ಯುಪಿಯಲ್ಲಿ ಜನರು ತಮ್ಮ  ದೂರದೃಷ್ಟಿಯನ್ನು  ಪರಿಚಯಿಸಿದ್ದಾರೆ. ಅವರು ನೀಡಿದ  ಈ ಫಲಿತಾಂಶ ಜನತಂತ್ರ ಎಂಬುದು ಭಾರತೀಯ ಜನರ ರಕ್ತದಲ್ಲಿದೆ ಎಂಬುದಕ್ಕೆ ಉದಾಹರಣೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

  • 10 Mar 2022 08:14 PM (IST)

    ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವು; ಪ್ರಧಾನಿ ಮೋದಿ ಭವಿಷ್ಯ

    5 ರಾಜ್ಯಗಳ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆಲ್ಲುತ್ತದೆ 3ನೇ ಬಾರಿಗೆ ಗೆದ್ದು ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತೇವೆ ಲೋಕಸಭಾ ಚುನಾವಣೆಯ ಬಗ್ಗೆ ಪ್ರಧಾನಿ ಮೋದಿ ಭವಿಷ್ಯ 2024ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆಲುವು ಖಚಿತ ಇದಕ್ಕೆ ಉತ್ತರ ಪ್ರದೇಶ ಫಲಿತಾಂಶವೇ ಸಾಕ್ಷಿ ಎಂದ ಪ್ರಧಾನಿ ನರೇಂದ್ರ ಮೋದಿ

  • 10 Mar 2022 08:11 PM (IST)

    ಜಾತಿವಾದದ ರಾಜಕಾರಣ ಮಾಡಿದವರಿಗೆ ತಕ್ಕ ಶಾಸ್ತಿಯಾಗಿದೆ; ಪ್ರಧಾನಿ ಮೋದಿ ವಾಗ್ದಾಳಿ

    ಯುಪಿಯಲ್ಲಿ ಜಾತಿವಾದ ರಾಜಕಾರಣಕ್ಕೆ ಮನ್ನಣೆ ನೀಡಿಲ್ಲ ಜಾತಿವಾದವನ್ನು ಮುಂದಿಟ್ಟುಕೊಂಡು ರಾಜಕಾರಣ ಸರಿಯಲ್ಲ ಎಸ್‌ಪಿ, ಕಾಂಗ್ರೆಸ್‌ ನಾಯಕರ ವಿರುದ್ಧ ಮೋದಿ ವಾಗ್ದಾಳಿ ಜಾತಿ ಮುಂದಿಟ್ಟುಕೊಂಡು ಜನರನ್ನು ಇಬ್ಭಾಗ ಮಾಡಲು ಯತ್ನ ಆದ್ರೆ ಜಾತಿವಾದ ಮಾಡುವವರಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ

    ವಿರೋಧ ಪಕ್ಷಗಳ ವಿರುದ್ಧ ನರೇಂದ್ರ ಮೋದಿ ಟೀಕೆ

  • 10 Mar 2022 08:07 PM (IST)

    ಮಹಿಳೆಯರಿಂದಲೇ ಬಿಜೆಪಿಗೆ ಪ್ರಚಂಡ ಗೆಲುವು; ಪ್ರಧಾನಿ ಮೋದಿ ಅಭಿನಂದನೆ

    ಈ ಫಲಿತಾಂಶವು  ಪ್ರೋ ಆಕ್ಟಿವ್ ಗವರ್ನೆನ್ಸ್ ಬಗ್ಗೆ ಗಟ್ಟಿಯಾದ ಮೊಹರು ಒತ್ತಿದ್ದಾರೆ.  ಮೊದಲು ಜನರು ಸರ್ಕಾರಿ  ಕಚೇರಿಗಳ ಬಾಗಿಲು ಬಡಿಯುತ್ತಿದ್ದರು.ದೇಶದಲ್ಲಿ ಬಡವರ ಹೆಸರಲ್ಲಿ ಘೋಷಣೆ, ಯೋಜನೆ ಬಹಳ ಇತ್ತು. ಆದರೆ ಬಡವರಿಗೆ ಆ ಹಕ್ಕು ಸಿಗುತ್ತಿರಲಿಲ್ಲ. ಬಡವರಿಗೆ  ಈ  ಹಕ್ಕು  ಸಿಗಬೇಕಾದರೆ ಗುಡ್ ಗವರ್ನೆನ್ಸ್ ,ಡೆಲಿವರಿ ಅಗತ್ಯ. ನಾನು ಮುಖ್ಯಮಂತ್ರಿಯಾಗಿದ್ದನು. ಹಾಗಾಗಿ ಕೊನೆಯ ವ್ಯಕ್ತಿಗೆ ಈ ಹಕ್ಕುಗಳು  ಸಿಗಬೇಕಾದರೆ ಎಷ್ಟು ಕಷ್ಟ ಇತ್ತು ಎಂಬುದು  ನನಗೆ ಗೊತ್ತಿದೆ . ಬಡವರಿಗೆ ಅವರ ಹಕ್ಕುಗಳನ್ನು ಅವರ ಮನೆ ಬಾಗಿಲು ವರೆಗೆ ಕೊಂಡೊಯ್ಯದೆ ಸಮಾಧಾನದಲ್ಲಿ ಕೂರುವ ವ್ಯಕ್ತಿ  ನಾನಲ್ಲ.  ಸರ್ಕಾರದಲ್ಲಿನ ಸಮಸ್ಯೆಗಳು ಏನೆಂಬುದು ನನಗೊತ್ತಿದೆ. ನಾನು ಸವಾಲು ಸ್ವೀಕರಿಸಿದೆ.  ಕೆಂಪುಕೋಟೆಯಲ್ಲಿ ಭಾಷಣ  ಮಾಡಿದ್ದ ನಾನು ಬಿಜೆಪಿಗೆ ಎಲ್ಲೆಲ್ಲಿ ಸೇವೆ ಮಾಡಲು ಅವಕಾಶ ಸಿಗುತ್ತದೆಯೋ  ಅಲ್ಲಿ ನಾವು ನೂರು ಪ್ರತಿಶತ ಜವಾಬ್ದಾರಿಯೊಂದಿಗೆ ಮಾಡುವೆ ಎಂಬ ನಿರ್ಣಯ ತೆಗೆದುಕೊಂಡೆ. ಬಡವರ ಬಗ್ಗೆ ಕಾಳಜಿ, ಕರುಣೆ ಇದ್ದರೆ ಮಾತ್ರ ಇದು ಸಾಧ್ಯ.  ನಾವು ಎಲ್ಲ ಬಡವರನ್ನು ತಲುಪುತ್ತೇೆವೆ. ನಾನು ಮಹಿಳೆ, ಮಾತೆ, ಮಗಳು ಎಲ್ಲ ಹೆಣ್ಣು ಮಕ್ಕಳಿಗೆ ನಮನ ಮಾಡುತ್ತೇನೆ. ಬಿಜೆಪಿಗೆ ಅವರು ತುಂಬಾ ಪ್ರೀತಿ ನೀಡಿದ್ದಾರೆ.  ಮಹಿಳೆಯರು ಹೆಚ್ಚು ಮತದಾನ ಮಾಡಿದ್ದಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಮಹಿಳೆಯರು ಬಿಜೆಪಿಯ  ಗೆಲುವಿನ ಸಾರಥಿ ಆಗಿದ್ದಾರೆ ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ್ದಾರೆ.

  • 10 Mar 2022 08:04 PM (IST)

    ಬಿಜೆಪಿಗೆ ಮತ ಹಾಕಿದ ಮಹಿಳೆಯರಿಗೆ ವಿಶೇಷ ಧನ್ಯವಾದ; ಪ್ರಧಾನಿ ಮೋದಿ

    ಪಕ್ಷದ ತತ್ವ, ಸಿದ್ಧಾಂತಗಳೇ ಪ್ರಚಂಡ ಬಹುಮತಕ್ಕೆ ಕಾರಣ ನಮ್ಮ ಅಭಿವೃದ್ಧಿ ಕಾರ್ಯಗಳೇ ಬಿಜೆಪಿಗೆ ಗೆಲುವಿಗೆ ಕಾರಣ ಉತ್ತಮ ಆಡಳಿತ ನೀಡಿದ್ದೇ ಭಾರಿ ಬಹುಮತಕ್ಕೆ ಕಾರಣವಾಗಿದೆ ಜನರಿಗೆ ಬಿಜೆಪಿಯ ಅಗತ್ಯ ಹಿಂದಿಗಿಂತಲೂ ಈಗ ಹೆಚ್ಚಾಗಿದೆ ಬಡವರ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ ಜನರಿಗೆ ನೀಡಿದ್ದ ಭರವಸೆ ಶೇ.100ರಷ್ಟು ಈಡೇರಿಸುತ್ತೇವೆ ಬಡವರ ಅಭಿವೃದ್ಧಿಯೇ ನಮ್ಮ ಮಂತ್ರವಾಗಿದೆ ಬಿಜೆಪಿ ಕೈಹಿಡಿದ ಮಹಿಳೆಯರಿಗೆ ವಿಶೇಷ ಧನ್ಯವಾದ ಮಹಿಳೆಯರು, ಯುವತಿಯರು, ವೃದ್ಧೆಯರು ಮತ ನೀಡಿದ್ದಾರೆ

    ಪ್ರಧಾನಿ ಮೋದಿ ಭಾಷಣ

  • 10 Mar 2022 07:57 PM (IST)

    ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಇತಿಹಾಸ ಸೃಷ್ಟಿ; ಪ್ರಧಾನಿ ಮೋದಿ

    ಉತ್ತರ ಪ್ರದೇಶ, ಗೋವಾ, ಮಣಿಪುರದಲ್ಲಿ ಗೆಲುವಿನ ಜೊತೆ ಬಿಜೆಪಿ ಮತ ಗಳಿಕೆಯಲ್ಲೂ ಹೆಚ್ಚಾಗಿದೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಸಿದೆ ಉತ್ತರಾಖಂಡ್‌ನಲ್ಲಿ 2ನೇ ಬಾರಿ ಅಧಿಕಾರಕ್ಕೆ ಬಂದು ಇತಿಹಾಸ ನಿರ್ಮಿಸಿದ್ದೇವೆ

    ನೀವೆಲ್ಲರೂ ಬಿಜೆಪಿಯ ನೀತಿ, ನಿಯತ್ತು, ನಿರ್ಣಯದ ಬಗ್ಗೆ ಇಟ್ಟಿರುವ ವಿಶ್ವಾಸವೇ ಈ ವಿಜಯಕ್ಕೆ ಕಾರಣ

    ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿ ಒಂದೇ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೇರಿದೆ.

    ಮಣಿಪುರದಲ್ಲಿ ಮತ ಹೆಚ್ಚಾಗಿದೆ.

    ಗೋವಾದಲ್ಲಿ ನಮ್ಮ ಎಲ್ಲ ಲೆಕ್ಕಾಚಾರ ತಪ್ಪಿದೆ, ಅವರು  ನಮಗೆ ಅವಕಾಶ ಕೊಟ್ಟಿದ್ದಾರೆ.

    ಉತ್ತರಾಖಂಡದಲ್ಲಿಯೂ ಜನರು ನಮಗೆ  ಅವಕಾಶ ನೀಡಿದ್ದಾರೆ.

    ಪರ್ವತಗಳ ರಾಜ್ಯ,ಪೂರ್ವೋತ್ತರ ಗಡಿಯಲ್ಲಿರುವ ರಾಜ್ಯ, ಕರಾವಳಿ ರಾಜ್ಯ,ಗಂಗಾತಟದಲ್ಲಿರುವ ರಾಜ್ಯ  ಹೀಗೆ  ನಾಲ್ಕು ದಿಕ್ಕಿನಿಂದ  ಜನರು ನಮಗೆ  ಆಶೀರ್ವದಿಸಿದ್ದಾರೆ.

    ಇಲ್ಲಿನ ರಾಜಕೀಯ ಭಿನ್ನ.ಆದರೆ ಜನರು ನಮ್ಮಲ್ಲಿ  ವಿಶ್ವಾಸವಿರಿಸಿದ್ದಾರೆ .

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ

  • 10 Mar 2022 07:52 PM (IST)

    ಮಾರ್ಚ್​ನಿಂದಲೇ ಹೋಳಿ ಶುರುವಾಗಿದೆ; ಪ್ರಧಾನಿ ನರೇಂದ್ರ ಮೋದಿ ಸಂತಸ

    ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ ದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ಕಾರ್ಯಕರ್ತರನ್ನುದ್ದೇಶಿಸಿ ಮೋದಿ ವಿಜಯೋತ್ಸವ ಭಾಷಣ ಇದು ಪ್ರಜಾಪ್ರಭುತ್ವದ ಗೆಲುವು-ಪ್ರಧಾನಿ ನರೇಂದ್ರ ಮೋದಿ ಬಿಜೆಪಿಗೆ ಆಶೀರ್ವದಿಸಿದ ಎಲ್ಲಾ ಮತದಾರರಿಗೆ ಧನ್ಯವಾದ ಮತದಾರರ ಬಹುದೊಡ್ಡ ತೀರ್ಪಿನಿಂದ ತುಂಬಾ ಸಂತಸವಾಗಿದೆ

    ಬಿಜೆಪಿ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದಗಳು ಪ್ರಸಕ್ತ ವರ್ಷದ ಹೋಳಿ ಹಬ್ಬ ಮಾರ್ಚ್‌ನಿಂದಲೇ ಆರಂಭವಾಗಿದೆ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ಕಾರಣರಾದವರಿಗೆ ಧನ್ಯವಾದ

  • 10 Mar 2022 07:50 PM (IST)

    ಮೋದಿ ರಾಜನೀತಿಯಿಂದ ಉತ್ತರ ಪ್ರದೇಶದಲ್ಲಿ ಭರ್ಜರಿ ಜಯ; ಜೆ.ಪಿ. ನಡ್ಡಾ

    ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ ದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ. ನಡ್ಡಾ ಭಾಷಣ 5 ರಾಜ್ಯಗಳ ಪೈಕಿ 4 ರಾಜ್ಯಗಳಲ್ಲಿ ಬಿಜೆಪಿಗೆ ಆಶೀರ್ವಾದ ಪ್ರಧಾನಿ ಮಾರ್ಗದರ್ಶನದಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ 4 ರಾಜ್ಯಗಳಲ್ಲೂ 2ನೇ ಬಾರಿಗೆ ಬಿಜೆಪಿಗೆ ಗೆಲುವು ಸಿಕ್ಕಿದೆ ಪ್ರಚಂಡ ಗೆಲುವಿಗೆ ಕಾರಣವಾದ ಪ್ರಧಾನಿಗೆ ಧನ್ಯವಾದಗಳು ಬಿಜೆಪಿ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ಪ್ರಧಾನಿ ಮೋದಿ ರಾಜನೀತಿಯಿಂದ ಉತ್ತರ ಪ್ರದೇಶದಲ್ಲಿ ಜಯ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಗೆ ಜನರ ಆಶೀರ್ವಾದ ಸಿಕ್ಕಿದೆ ಉತ್ತರಾಖಂಡ್‌ನಲ್ಲೂ 2ನೇ ಬಾರಿಗೆ ಜನರು ಬಿಜೆಪಿ ಕೈಹಿಡಿದಿದ್ದಾರೆ ಮಣಿಪುರದಲ್ಲೂ ಬಿಜೆಪಿಗೆ ಭಾರಿ ಬಹುಮತ ಸಿಕ್ಕಿದೆ-ಜೆ.ಪಿ.ನಡ್ಡಾ ಇದಕ್ಕೆ ಪ್ರಧಾನಿ ಮೋದಿರವರ ಅಭಿವೃದ್ಧಿ ಕಾರ್ಯಗಳೇ ಕಾರಣ ಪ್ರಧಾನಿ ಮೋದಿರಿಂದಲೇ ಬಿಜೆಪಿಗೆ ಭರಪೂರ ಆಶೀರ್ವಾದ ಸಿಕ್ಕಿದೆ ಎಲ್ಲಾ ವರ್ಗದವರೂ ಪ್ರಧಾನಿ ಮೋದಿಯನ್ನು ಬೆಂಬಲಿಸಿದ್ದಾರೆ ಪ್ರಧಾನಿ ಮೋದಿ ಅಭಿವೃದ್ಧಿ ಕಾರ್ಯಗಳನ್ನ ಜನರು ಮೆಚ್ಚಿದ್ದಾರೆ

  • 10 Mar 2022 07:44 PM (IST)

    ಗೋವಾದಲ್ಲಿ ಹ್ಯಾಟ್ರಿಕ್ ಬಾರಿಸಲಿದ್ದೇವೆ; ಜೆ.ಪಿ ನಡ್ಡಾ

    ಉತ್ತರ ಪ್ರದೇಶದ ಬಗ್ಗೆ ಮಾತನಾಡುವುದಾದರೆ  ಅಲ್ಲಿನ  ಜನತೆ ನಮಗೆ  ಸತತ ಆಶೀರ್ವಾದ ನೀಡಿದ್ದಾರೆ. ಉತ್ತರಾಖಂಡದಲ್ಲಿಯೂ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ.  ಗೋವಾದಲ್ಲಿ ನಾವು  ಹ್ಯಾಟ್ರಿಕ್ ಬಾರಿಸಲಿದ್ದೇವೆ. ಅಲ್ಲಿಯೂ ಮೋದಿಯವರ ಕಾರ್ಯಗಳಿಗೆ  ಶ್ಲಾಘನೆ ಸಿಕ್ಕಿದೆ. ನಾಲ್ಕು ರಾಜ್ಯಗಳಲ್ಲಿ ನಾವು ಅಧಿಕಾರಕ್ಕೇರಲಿದ್ದೇವೆ. ಅದೇ ಹೊತ್ತಲ್ಲಿ ಅಸ್ಸಾಂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೂ ಬಿಜೆಪಿಗೆ ಜನಾಶೀರ್ವಾದ ಸಿಕ್ಕಿದೆ ಎಂದು ಜೆ.ಪಿ ನಡ್ಡಾ ಹೇಳಿದ್ದಾರೆ.

    ಬಡವ,ಶೋಷಿತ ಮತ್ತು ದಲಿತರಾಗಿ ಮೋದಿಯವರು ವಿವಿಧ ಯೋಜನೆಗಳನ್ನು  ತಂದಿದ್ದು, ಜನರು  ಮತದಾನ ಬಂದಾಗ ಕಮಲದ ಚಿಹ್ನೆಗೆ  ಮತ ಹಾಕಿದ್ದಾರೆ.  ಮೋದಿಯವರು ರಾಜಕೀಯವನ್ನೇ ಬದಲಾಯಿಸಿದ್ದಾರೆ. ವಂಶಾಡಳಿತದ  ಅಲ್ಲ, ಇಂದು ಸಶಕ್ತೀಕರಣದ ರಾಜಕಾರಣ ನಡೆಯುತ್ತಿದೆ . ಕೆಲಸ ಮಾಡಿದರೆ ಮಾತ್ರ ಮತ ಎಂದು ರಾಜಕಾರಣದ ಚೆಹರೆಯನ್ನು  ಬದಲಿಸಿದ್ದಾರೆ. ಉತ್ತರ  ಪ್ರದೇಶದಲ್ಲಿ  ಗೂಂಡಾಗಿರಿ, ಮಾಫಿಯಾರಾಜ್  ಇತ್ತು. ಆದರೆ ಯೋಗಿ ಕಾನೂನು ವ್ಯವಸ್ಥೆಯನ್ನು ಸುಧಾರಿಸಿದರು. ಅದರ ಪರಿಣಾಮ ಅವರಿಗೆ ಜನಾಶೀರ್ವಾದ ಸಿಕ್ಕಿದೆ ಎಂದಿದ್ದಾರೆ.

  • 10 Mar 2022 07:41 PM (IST)

    ಮೋದಿ ಜಾರಿಗೆ ತಂದ ನೀತಿಗೆ ಜನರಿಂದ ಮನ್ನಣೆ; ಜೆ.ಪಿ ನಡ್ಡಾ

    ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣಕ್ಕಿಂತ ಮುನ್ನ ಮಾತನಾಡಿದ  ಜೆಪಿ ನಡ್ಡಾ, ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇವತ್ತು ಬಂದ ಫಲಿತಾಂಶದಲ್ಲಿ  ಭಾರತದ ಜನತೆಯ ಆಶೀರ್ವಾದ ನಮಗೆ  ಸಿಕ್ಕಿದೆ.  ಇದು ಮೋದಿಯವರು ಕಾರ್ಯಕ್ರಮ, ಅವರು  ತಂದ ನೀತಿಗೆ ದೇಶದ ಜನರು ಮನ್ನಣೆ ನೀಡಿದ್ದಾರೆ. ದೇಶದ ಜನತೆಗೆ  ಧನ್ಯವಾದಗಳು. ಮೋದಿಯವರ ನೇತೃತ್ವವು ಈ ಗೆಲುವಿಗೆ ಕಾರಣವಾಗಿದೆ.  ಈ ಗೆಲುವಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

Published On - Mar 10,2022 7:38 PM

ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ