
ನವದೆಹಲಿ, ಸೆಪ್ಟೆಂಬರ್ 6: ಸುಂಕದ ಕುರಿತಾದ ಉದ್ವಿಗ್ನತೆ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಮೋದಿ ಅವರನ್ನು “ಸ್ನೇಹಿತ” ಮತ್ತು “ಶ್ರೇಷ್ಠ ಪ್ರಧಾನಿ” ಎಂದು ಕರೆದಿದ್ದಾರೆ. ಈ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ. “ಪ್ರಧಾನಿ ಮೋದಿ (PM Modi) ಅವರು ಅಮೆರಿಕದ ಜೊತೆಗಿನ ನಮ್ಮ ಪಾಲುದಾರಿಕೆಗೆ ಅಪಾರ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಅವರಿಗೆ ಸಂಬಂಧಿಸಿದಂತೆ ಮೋದಿ ಯಾವಾಗಲೂ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಉತ್ತಮ ವೈಯಕ್ತಿಕ ಸಮೀಕರಣವನ್ನು ಹೊಂದಿದ್ದಾರೆ. ಆದರೆ ಈ ಸಮಯದಲ್ಲಿ ನಾನು ಅದಕ್ಕಿಂತ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ” ಎಂದು ಜೈಶಂಕರ್ ಹೇಳಿದ್ದಾರೆ.
“ಪ್ರಧಾನಿ ಮೋದಿ ಅಮೆರಿಕ ಜೊತೆಗಿನ ನಮ್ಮ ಪಾಲುದಾರಿಕೆಗೆ ಅಗಾಧ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅವರು ಯಾವಾಗಲೂ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಉತ್ತಮ ವೈಯಕ್ತಿಕ ಸಮೀಕರಣವನ್ನು ಹೊಂದಿದ್ದಾರೆ. ಪ್ರಧಾನಿ ಮೋದಿ ಭಾರತ-ಯುಎಸ್ ಸಂಬಂಧಗಳನ್ನು ಗೌರವಿಸುತ್ತಾರೆ” ಎಂದು ಜೈಶಂಕರ್ ಹೇಳಿದ್ದಾರೆ.
ಇದನ್ನೂ ಓದಿ: ಕರಾಳ ಚೀನಾಕ್ಕೆ ಭಾರತ, ರಷ್ಯಾ ಬಲಿ; ಸುಂಕದ ಉದ್ವಿಗ್ನತೆಯ ನಡುವೆ ಟ್ರಂಪ್ ಅಸಮಾಧಾನ
“ಪ್ರಧಾನಿ ಮೋದಿ ಅವರು ಅಮೆರಿಕ ಜೊತೆಗಿನ ನಮ್ಮ ಪಾಲುದಾರಿಕೆಗೆ ಅಗಾಧ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅಧ್ಯಕ್ಷ ಟ್ರಂಪ್ ಅವರಿಗೆ ಸಂಬಂಧಿಸಿದಂತೆ, ಅವರು ಯಾವಾಗಲೂ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಉತ್ತಮ ವೈಯಕ್ತಿಕ ಸಮೀಕರಣವನ್ನು ಹೊಂದಿದ್ದಾರೆ. ಆದರೆ ಮುಖ್ಯ ವಿಷಯವೆಂದರೆ ನಾವು ಅಮೆರಿಕದೊಂದಿಗೆ ತೊಡಗಿಸಿಕೊಂಡಿದ್ದೇವೆ ಮತ್ತು ಈ ಸಮಯದಲ್ಲಿ, ನಾನು ಅದಕ್ಕಿಂತ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ” ಎಂದು ಜೈಶಂಕರ್ ಹೇಳಿದ್ದಾರೆ.
ಟ್ರಂಪ್ ಅಮೆರಿಕದಲ್ಲಿ ಭಾರತೀಯ ಆಮದುಗಳ ಮೇಲೆ ಒಟ್ಟು 50% ಸುಂಕಗಳನ್ನು ವಿಧಿಸಿದ ನಂತರ ಇತ್ತೀಚಿನ ವಾರಗಳಲ್ಲಿ ಭಾರತ-ಯುಎಸ್ ಸಂಬಂಧಗಳು ಹದಗೆಟ್ಟಿವೆ. 25% ಮೂಲ ಸುಂಕವಾಗಿದ್ದರೆ, ಉಳಿದವುಗಳನ್ನು ಉಕ್ರೇನ್‌ನಲ್ಲಿ ಯುದ್ಧ ಸಾರಿರುವ ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಹೇರಲಾಗಿದೆ. ಭಾರತ ಈ ಕ್ರಮವನ್ನು ‘ಅಸಮಂಜಸ’ ಎಂದು ಕರೆದಿತ್ತು.
ಇದನ್ನೂ ಓದಿ: ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಟ್ರಂಪ್: ಮತ್ತೆ ಮೋದಿಯ ಹೊಗಳಿದ ಅಮೆರಿಕ ಅಧ್ಯಕ್ಷ!
ಇಂದು ಅಮೆರಿಕ ಅಧ್ಯಕ್ಷ ಟ್ರಂಪ್ ವಾಷಿಂಗ್ಟನ್‌ನಲ್ಲಿ ವರದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮೋದಿಯನ್ನು “ಶ್ರೇಷ್ಠ ಪ್ರಧಾನಿ” ಮತ್ತು “ಸ್ನೇಹಿತ” ಎಂದು ಉಲ್ಲೇಖಿಸಿದ್ದಾರೆ. ಭಾರತದ ಇತ್ತೀಚಿನ ಕೆಲವು ಕ್ರಮಗಳೊಂದಿಗೆ ಅವರು ಭಿನ್ನಾಭಿಪ್ರಾಯ ಹೊಂದಿದ್ದರೂ, ಭಾರತ-ಯುಎಸ್ ಸಂಬಂಧವು ವಿಶೇಷವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
“ನಾನು ಯಾವಾಗಲೂ ಮೋದಿಯೊಂದಿಗೆ ಸ್ನೇಹಿತನಾಗಿರುತ್ತೇನೆ. ಅವರು ಉತ್ತಮ ವ್ಯಕ್ತಿ. ಈ ನಿರ್ದಿಷ್ಟ ಕ್ಷಣದಲ್ಲಿ ಅವರು ಏನು ಮಾಡುತ್ತಿದ್ದಾರೆಯೋ ಅದು ನನಗೆ ಇಷ್ಟವಿಲ್ಲ. ಆದರೆ, ಆ ಬಗ್ಗೆ ಯೋಚನೆ ಮಾಡಬೇಕಾದುದು ಏನೂ ಇಲ್ಲ” ಎಂದು ಟ್ರಂಪ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:57 pm, Sat, 6 September 25