ಕರಾಳ ಚೀನಾಕ್ಕೆ ಭಾರತ, ರಷ್ಯಾ ಬಲಿ; ಸುಂಕದ ಉದ್ವಿಗ್ನತೆಯ ನಡುವೆ ಟ್ರಂಪ್ ಅಸಮಾಧಾನ
ರಷ್ಯಾದೊಂದಿಗಿನ ಉತ್ತಮ ಸಂಬಂಧವನ್ನೇ ನೆಪವಾಗಿಸಿಕೊಂಡು ಭಾರತದ ಮೇಲೆ ಅಮೆರಿಕಾ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸಿದೆ. ಚೀನಾದಲ್ಲಿ ನಡೆದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಮತ್ತು ಚೀನಾದ ಅಧ್ಯಕ್ಷರ ಜೊತೆಗೆ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಈ ಫೋಟೋ ಟ್ರಂಪ್ ಹೊಟ್ಟೆ ಉರಿಸಿದ್ದು ಸುಳ್ಳಲ್ಲ. ಅದೀಗ ಅವರಿಂದಲೇ ಬಟಾಬಯಲಾಗಿದೆ.

ನವದೆಹಲಿ, ಸೆಪ್ಟೆಂಬರ್ 5: ಚೀನಾದಲ್ಲಿ ಅಮೆರಿಕದ ವೈರಿಗಳಾದ ರಷ್ಯಾ ಮತ್ತು ಚೀನಾದ ಅಧ್ಯಕ್ಷರ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi) ಅತ್ಯಂತ ಆತ್ಮೀಯವಾಗಿ ಕಾಣಿಸಿಕೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ SCO ಶೃಂಗಸಭೆಯ ಪ್ರಧಾನಿ ನರೇಂದ್ರ ಮೋದಿ, ವ್ಲಾಡಿಮಿರ್ ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಅವರ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕರಾಳವಾದ ಚೀನಾಕ್ಕೆ ಭಾರತ ಮತ್ತು ರಷ್ಯಾ ಬಲಿಯಾಗಿದೆ. ನಾವು ಚೀನಾದಿಂದಾಗಿ ರಷ್ಯಾ ಮತ್ತು ಭಾರತವನ್ನು ಕಳೆದುಕೊಂಡಿದ್ದೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಅಮೆರಿಕವು ಕರಾಳ ಚೀನಾದ ಕಾರಣದಿಂದ ಭಾರತ ಮತ್ತು ರಷ್ಯಾವನ್ನು ಕಳೆದುಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಒಟ್ಟಿಗೆ ನಡೆಯುತ್ತಿರುವ ಫೋಟೋವನ್ನು ಟ್ರಂಪ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ನೀವು ಹೀಗೇ ರಷ್ಯಾದಿಂದ ತೈಲ ಆಮದು ಮುಂದುವರೆಸಿದ್ರೆ ಮತ್ತಷ್ಟು ಸುಂಕ ಹಾಕ್ತೀವಿ: ಭಾರತಕ್ಕೆ ಮತ್ತೆ ಟ್ರಂಪ್ ಎಚ್ಚರಿಕೆ
“ನಾವು ಭಾರತ ಮತ್ತು ರಷ್ಯಾವನ್ನು ಕರಾಳ ಚೀನಾದಿಂದಾಗಿ ಕಳೆದುಕೊಂಡಂತೆ ಕಾಣುತ್ತಿದೆ. ಅವರು ಒಟ್ಟಿಗೆ ದೀರ್ಘ ಮತ್ತು ಸಮೃದ್ಧ ಭವಿಷ್ಯವನ್ನು ಹೊಂದಲಿ!” ಎಂದು ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
US President Donald Trump writes on Truth Social, “Looks like we’ve lost India and Russia to deepest, darkest, China. May they have a long and prosperous future together!” pic.twitter.com/psIJcs8RhW
— ANI (@ANI) September 5, 2025
ಭಾರತ, ರಷ್ಯಾ ಮತ್ತು ಚೀನಾ ಕುರಿತು ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳಿಗೆ ವಿದೇಶಾಂಗ ಸಚಿವಾಲಯ (MEA) ಪ್ರತಿಕ್ರಿಯಿಸಿದೆ. ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಈ ವಿಷಯದ ಬಗ್ಗೆ ಯಾವುದೇ ಹೇಳಿಕೆ ನೀಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚೀನಾ, ರಷ್ಯಾದ ಅಧ್ಯಕ್ಷರಿಗೆ ಹಸ್ತಲಾಘವ, ಅಪ್ಪುಗೆ, ತಮಾಷೆ; ಟ್ರಂಪ್ ನಿದ್ರೆಗೆಡಿಸಿದ ಮೋದಿಯ ವಿಡಿಯೋ ಇಲ್ಲಿದೆ
ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ಕ್ಕೆ ಹೆಚ್ಚಿಸಿದ ನಂತರ ಮತ್ತು ಭಾರತದ ರಷ್ಯಾದ ಕಚ್ಚಾ ತೈಲದ ಆಮದಿನ ಮೇಲೆ ಹೆಚ್ಚುವರಿ ಶೇ. 25ರಷ್ಟು ಸುಂಕವನ್ನು ವಿಧಿಸಿದ ನಂತರ ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧಗಳು ಹದಗೆಟ್ಟಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




