AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಹೀಗೇ ರಷ್ಯಾದಿಂದ ತೈಲ ಆಮದು ಮುಂದುವರೆಸಿದ್ರೆ ಮತ್ತಷ್ಟು ಸುಂಕ ಹಾಕ್ತೀವಿ: ಭಾರತಕ್ಕೆ ಮತ್ತೆ ಟ್ರಂಪ್ ಎಚ್ಚರಿಕೆ

ಒಂದೊಮ್ಮೆ ಭಾರತವು ರಷ್ಯಾದಿಂದ ತೈಲ ಆಮದು ಮುಂದುವರೆಸಿದರೆ ಮತ್ತಷ್ಟು ಸುಂಕ ಕಟ್ಟಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಚೀನಾದ ನಂತರ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರ ಎಂದು ಕರೆದಿದ್ದಾರೆ.

ನೀವು ಹೀಗೇ ರಷ್ಯಾದಿಂದ ತೈಲ ಆಮದು ಮುಂದುವರೆಸಿದ್ರೆ ಮತ್ತಷ್ಟು ಸುಂಕ ಹಾಕ್ತೀವಿ: ಭಾರತಕ್ಕೆ ಮತ್ತೆ ಟ್ರಂಪ್ ಎಚ್ಚರಿಕೆ
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Sep 04, 2025 | 11:45 AM

Share

ವಾಷಿಂಗ್ಟನ್, ಸೆಪ್ಟೆಂಬರ್ 04: ಒಂದೊಮ್ಮೆ ಭಾರತವು ರಷ್ಯಾದಿಂದ ತೈಲ ಆಮದು ಮುಂದುವರೆಸಿದರೆ ಮತ್ತಷ್ಟು ಸುಂಕ ಕಟ್ಟಬೇಕಾಗುತ್ತೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ಟ್ರಂಪ್(Donald Trump) ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಚೀನಾದ ನಂತರ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರ ಎಂದು ಕರೆದಿದ್ದಾರೆ.

ಅಮೆರಿಕ ಇನ್ನೂ ಹಂತ-2, ಹಂತ-3 ಸುಂಕಗಳನ್ನು ವಿಧಿಸಿಲ್ಲ ಎಂದ ಟ್ರಂಪ್

ರಷ್ಯಾದೊಂದಿಗೆ ವ್ಯಾಪಾರ ಸಂಬಂಧವನ್ನು ಮುಂದುವರಿಸುವ ದೇಶಗಳ ವಿರುದ್ಧ ಅಮೆರಿಕ ಇನ್ನೂ ಹಂತ-2 ಮತ್ತು ಹಂತ-3 ಸುಂಕಗಳನ್ನು ವಿಧಿಸಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಚೀನಾದ ಮೇಲಿನ ಹೆಚ್ಚುವರಿ ಸುಂಕಗಳನ್ನು ಅಮೆರಿಕ ನವೆಂಬರ್ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರೂ, ಭಾರತವು ಭಾರೀ ಸುಂಕಗಳಿಂದ ಹಾನಿಗೊಳಗಾಗಿದೆ.

ತಿಂಗಳ ಆರಂಭದಲ್ಲಿ ಶೇ. 25 ರಷ್ಟು ಸುಂಕವನ್ನು ವಿಧಿಸಲಾಯಿತು ಮತ್ತು ಆಗಸ್ಟ್ 27 ರಂದು ಹೆಚ್ಚುವರಿಯಾಗಿ ಶೇ. 25 ರಷ್ಟು ದ್ವಿತೀಯ ನಿರ್ಬಂಧ ಜಾರಿಗೆ ಬಂದಿದ್ದು, ಭಾರತೀಯ ಸರಕುಗಳ ಮೇಲಿನ ಒಟ್ಟು ಸುಂಕವು ಶೇ. 50 ಕ್ಕೆ ತಲುಪಿದೆ.

ಮತ್ತಷ್ಟು ಓದಿ: ಭಾರತದ ಕ್ಷಮೆಯಾಚಿಸಿ; ಟ್ರಂಪ್ ಸುಂಕ ನೀತಿಗೆ ಅಮೆರಿಕದ ತಜ್ಞರಿಂದಲೇ ಟೀಕೆ

ಆದರೆ ಅಮೆರಿಕ ಭಾರತದ ಮೇಲೆ ವಿಧಿಸಿರುವ ಸುಂಕಕ್ಕೆ ಪ್ರಧಾನಿ ನರೇಂದ್ರ ಮೋದಿ ತಲೆ ಕೆಡಿಸಿಕೊಂಡಿಲ್ಲ. ತಮ್ಮ ರೈತರ ಸುರಕ್ಷತೆಯೇ ತನಗೆ ಮುಖ್ಯ ಅವರನ್ನು ಉಳಿಸಿಕೊಳ್ಳಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ ಎಂದು ಹೇಳಿದ್ದರು.

ಅಮೆರಿಕ ಇಲ್ಲದಿದ್ದರೆ ಪ್ರಪಂಚದಲ್ಲಿರುವ ಎಲ್ಲಾ ದೇಶಗಳು ಸಾಯುತ್ತಿದ್ದವು, ತಾವು ತುಂಬಾ ಬಲಶಾಲಿಯಾಗಿದ್ದು, ನಮ್ಮದು ಬಹಳ ದೊಡ್ಡದಾದ ರಾಷ್ಟ್ರ. ನಾನು ಮೊದಲ ನಾಲ್ಕು ವರ್ಷಗಳಲ್ಲಿ  ನಿಜವಾಗಿಯೂ ರಾಷ್ಟ್ರವನ್ನು ಎತ್ತರಕ್ಕೆ ಕೊಂಡೊಯ್ಯುವ ಸಾಹಸ ಮಾಡಿದ್ದೇನೆ. ನಂತರ ಬೈಡನ್ಆಡಳಿತದಲ್ಲಿ ಯುಎಸ್ಅವನತಿ ಹೊಂದಲು ಪ್ರಾರಂಭಿಸಿತು.

ಇದಾದ ಬಳಿಕ ನಾನು ಆಡಳಿತಲ್ಲಿ ನಾನು ಅಂದುಕೊಂಡ ಮಟ್ಟಕ್ಕೆ ಅದನ್ನು ಕೊಂಡೊಯ್ದಿದ್ದೇನೆ. ನಾವು ತುಂಬಾ ಉತ್ಸಾಹಿಗಳು, ಸುಂಕಗಳು ಮತ್ತು ಇತರ ಮೂಲಕ ಬರುವ ಹಣವು ನಮಗೆ ತುಂಬಾ ದೊಡ್ಡದು ಎಂದಿದ್ದಾರೆ.ನಾವು ಭಾರತದೊಂದಿಗೆ ಹೊಂದಿಕೊಳ್ಳುತ್ತೇವೆ. ಆದರೆ, ಭಾರತ ಹಲವು ವರ್ಷಗಳಿಂದ ಅದು ಏಕಪಕ್ಷೀಯ ಸಂಬಂಧವಾಗಿತ್ತು.

ಹಾಗೇ ಇದು ನಮ್ಮಿಂದ ಅಗಾಧ ಸುಂಕವನ್ನು ವಿಧಿಸುತ್ತಿತ್ತು. ಆದರಿಂದ ನಾವು ಭಾರತದೊಂದಿಗೆ ವ್ಯಾಪಾರ ಮಾಡುತ್ತಿರಲಿಲ್ಲ. ಆದರೆ ಅವರು ನಮ್ಮೊಂದಿಗೆ ವ್ಯಾಪಾರ ಮಾಡುತ್ತಿದ್ದರು ಎಂದಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ